Crime News: ಹೂ ಕುಂಡಗಳಲ್ಲಿ ಗಾಂಜಾ ಬೆಳೆದಿದ್ದ ಖತರ್ನಾಕ್ ಆಸಾಮಿಯ ಬಂಧನ
ಸಿಮ್ ಕಾರ್ಡ್ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ ಆರೋಪಿ ಪ್ರಕಾಶ್ ಜೆ.ಬಿ(31) ಎಂಬಾತನನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯಿಂದ 1.30 ಲಕ್ಷ, 2 ಮೊಬೈಲ್, ಬೈಕ್ ಜಪ್ತಿ ಮಾಡಲಾಗಿದೆ.
ತುಮಕೂರು: ಹೂ ಕುಂಡಗಳಲ್ಲಿ ಗಾಂಜಾ (cannabis) ಬೆಳೆದಿದ್ದ ಖತರ್ನಾಕ್ ಆಸಾಮಿಯ ಬಂಧನವಾಗಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಜ್ಯೋತಿನಗರದಲ್ಲಿ ನಡೆದಿದೆ. ಗಾಂಜಾ ಸಮೇತ ಗಫರ್ ಅಲಿಖಾನ್(42) ಎಂಬಾತನನ್ನು ಬಂಧಿಸಲಾಗಿದೆ. ಆಟೋ ಚಾಲಕನಾಗಿ ಗುರುತಿಸಿಕೊಂಡಿದ್ದ ಗಫರ್ ಅಲಿಖಾನ್, ತನ್ನ ಮನೆಯ ಎರಡು ಹೂವಿನ ಕುಂಡಗಳಲ್ಲಿ ಗಾಂಜಾ ಸೊಪ್ಪು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಗುಬ್ಬಿ ಮತ್ತು ಚೇಳೂರು ಪೊಲೀಸರು ದಾಳಿ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಗುಬ್ಬಿ ತಹಶಿಲ್ದಾರ್ ಆರತಿ ಮಹಜರ್ ನಡೆಸಿದರು. ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮ್ ಕಾರ್ಡ್ ಕದ್ದು ಬ್ಯಾಂಕ್ ಖಾತೆಗೆ ಕನ್ನ: ಆರೋಪಿ ಅಂದರ್
ಬೆಂಗಳೂರು: ಸಿಮ್ ಕಾರ್ಡ್ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ ಆರೋಪಿ ಪ್ರಕಾಶ್ ಜೆ.ಬಿ(31) ಎಂಬಾತನನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯಿಂದ 1.30 ಲಕ್ಷ, 2 ಮೊಬೈಲ್, ಬೈಕ್ ಜಪ್ತಿ ಮಾಡಲಾಗಿದೆ. ಪರಿಚಯಸ್ಥರಿಂದ ಬ್ಯಾಂಕ್ ಅಕೌಂಟ್ ಲಿಂಕ್ ಮೊಬೈಲ್ ಪಡೆದು ಸಿಮ್ ಕದಿಯುತ್ತಿದ್ದು, ಆ ಮೊಬೈಲ್ಗೆ ಬೇರೆ ಸಿಮ್ ಹಾಕಿ ಹಣ ಎಗರಿಸ್ತಿದ್ದ. ಸಿಮ್ ಕಳೆದಿದೆ ಅಂತಾ ಮೋಸ ಹೋದವರು ಬ್ಲಾಕ್ ಮಾಡುತ್ತಿದ್ದರು. ನಕಲಿ ಸಿಮ್ ಪಡೆದು ಆ್ಯಕ್ಟಿವ್ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ.
ಸರ, ಬೈಕ್ ಕಳ್ಳರ ಬಂಧನ
ಮೈಸೂರು: ಸರಗಳ್ಳತನ ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನ ನರಸಿಂಹರಾಜ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5 ಲಕ್ಷ ಮೌಲ್ಯದ 27 ಗ್ರಾಂ ಚಿನ್ನಾಭರಣ, 1.5 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾಡಾನೆ ದಾಳಿಗೆ ಮತ್ತೊಂದು ಬಲಿ
ಹಾಸನ: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಮೇಲಕೆರೆ ಗ್ರಾಮದಲ್ಲಿ ನಡೆದಿದೆ. ಕೆಂಪಣ್ಣ (50) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ಇಂದು ಬೆಳಗಿನಜಾವ ಜಮೀನಿಗೆ ತೆರಳೊ ವೇಳೆ ಕಾಡಾನೆ ದಾಳಿ ಮಾಡಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಳ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳಿಯರ ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಡಹಗಲೇ ಸುಲಿಗೆ ಮಾಡುತ್ತಿದ್ದವರ ಬಂಧನ
ರಾಯಚೂರು: ಹಾಡಹಗಲೇ ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿದ್ದ ರವಿ, ರಮೇಶ್, ಈರಕುಮಾರ್ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1 ಲಕ್ಷ ನಗದು, ಬೈಕ್ ಜಪ್ತಿ ಮಾಡಲಾಗಿದೆ. ಜು.29ರಂದು ಸಿಂಧನೂರು ತಾಲೂಕಿನ ಜವಳಗೆರಾ ಬಳಿ ತರಕಾರಿ ವ್ಯಾಪಾರಿ ಭೀಮಣ್ಣ ಎಂಬುವರನ್ನು ಅಡ್ಡಗಟ್ಟಿ ಆರೋಪಿಗಳು 1 ಲಕ್ಷ ನಗದು ದೋಚಿದ್ದರು. ಬಳಗಾನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.