ಇಂಜಿನಿಯರ್ ಸಂಸಾರದಲ್ಲಿ ಸೋಂಕಿನ ಅಟ್ಟಹಾಸ, 4 ದಿನದ ಅಂತರದಲ್ಲಿ ತಂದೆ-ಮಗ ಬಲಿ
ಮೈಸೂರು: ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಹಾಯಕ ಇಂಜಿನಿಯರ್ ಒಬ್ಬರ ಸಂಸಾರದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ನಾಲ್ಕೇ ದಿನಗಳ ಅಂತರದಲ್ಲಿ ತಂದೆ ಹಾಗೂ ಮಗ ಸೋಂಕಿಗೆ ಸಾವನ್ನಪಿರೋ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆ 14 ವರ್ಷದ ಮಗ ಸೋಂಕಿಗೆ ತುತ್ತಾಗಿ ಅಸುನೀಗಿದ್ದ. ಇದೀಗ, ನಿನ್ನೆ ರಾತ್ರಿ ಆತನ ತಂದೆ ಸಹಾಯಕ ಇಂಜಿನಿಯರ್ ಸಹ ಕೊನೆಯುಸಿರೆಳೆದಿದ್ದಾರೆ. ಇದಲ್ಲದೆ, ಇಡೀ ಸಂಸಾರಕ್ಕೆ ವೈರಸ್ ವಕ್ಕರಿಸಿದೆ ಎಂದು ತಿಳಿದುಬಂದಿದೆ. ಕಳೆದ ಶುಕ್ರವಾರ ಸೋಂಕು ದೃಢವಾಗಿ ಇಡೀ […]

ಮೈಸೂರು: ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಹಾಯಕ ಇಂಜಿನಿಯರ್ ಒಬ್ಬರ ಸಂಸಾರದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ನಾಲ್ಕೇ ದಿನಗಳ ಅಂತರದಲ್ಲಿ ತಂದೆ ಹಾಗೂ ಮಗ ಸೋಂಕಿಗೆ ಸಾವನ್ನಪಿರೋ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆ 14 ವರ್ಷದ ಮಗ ಸೋಂಕಿಗೆ ತುತ್ತಾಗಿ ಅಸುನೀಗಿದ್ದ. ಇದೀಗ, ನಿನ್ನೆ ರಾತ್ರಿ ಆತನ ತಂದೆ ಸಹಾಯಕ ಇಂಜಿನಿಯರ್ ಸಹ ಕೊನೆಯುಸಿರೆಳೆದಿದ್ದಾರೆ. ಇದಲ್ಲದೆ, ಇಡೀ ಸಂಸಾರಕ್ಕೆ ವೈರಸ್ ವಕ್ಕರಿಸಿದೆ ಎಂದು ತಿಳಿದುಬಂದಿದೆ. ಕಳೆದ ಶುಕ್ರವಾರ ಸೋಂಕು ದೃಢವಾಗಿ ಇಡೀ ಕುಟುಂಬವನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೀಗಾಗಿ, ಪತ್ನಿ ಹಾಗೂ ಮೂವರು ಮಕ್ಕಳ ಸಮೇತ ಇಂಜಿನಿಯರ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ, ಇಂಜಿನಿಯರ್ ಆರೋಗ್ಯಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆತನಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಸಮಸ್ಯೆ ಇತ್ತು. ಕಂಜೆನಿಟಲ್ ಡಿಸ್ಆರ್ಡ್ರ್ (Congenital disorder), ಥೈರಾಯ್ಡ್ ಡಯಾಬಿಟಿಕ್, ಓಬೆಸಿಟಿ ಸೇರಿ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ, ಕೊರೊನಾ ಬಂದ ನಂತರ ಸಹಜವಾಗಿ ಎಲ್ಲವೂ ಉಲ್ಬಣವಾಗಿದೆ ಎಂದು ತಿಳಿದುಬಂದಿದೆ.
ಇದೀಗ, ಸರ್ಕಾರದ ನಿಯಮಗಳ ಪ್ರಕಾರ ಇಂದು ಇಂಜಿನಿಯರ್ ಅಂತ್ಯಕ್ರಿಯೆ ನಡೆಯಲಿದೆ. ಆದರೆ, ಮೃತನ ಮಕ್ಕಳು ಹಾಗೂ ಪತ್ನಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.



