AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಶುರುವಾಯ್ತು ಲಾಕ್​ಡೌನ್​ ವಿಸ್ತರಣೆ ಲಡಾಯಿ!

ಬೆಂಗಳೂರು: ರಾಜಧಾನಿಯಲ್ಲಿ ಇದೀಗ ಲಾಕ್​ಡೌನ್​ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. BBMP ನಗರದಲ್ಲಿ 15ದಿನಗಳ ಲಾಕ್​ಡೌನ್​ಗೆ ಸರ್ಕಾರಕ್ಕೆ ಮನವಿ ಮಾಡಿದೆ. 15ದಿನ ಲಾಕ್​ಡೌನ್​ನಿಂದ ಬೆಂಗಳೂರಿನಲ್ಲಿ ಸೋಂಕು ತಡೆಯಬಹುದು. ಸೋಂಕಿತ ವ್ಯಕ್ತಿ 12 ದಿನದಲ್ಲಿ ಗುಣಮುಖರಾಗುತ್ತಿರೋ ಹಿನ್ನೆಲೆಯಲ್ಲಿ ಜನರು 15 ದಿನ ಮನೆಯಿಂದ ಹೊರಬಾರದಂತೆ ತಡೆಯಬೇಕು. ಹೀಗಾಗಿ, ಲಾಕ್​ಡೌನ್​ನಿಂದ ಸೋಂಕಿತರ ಸಾರ್ವಜನಿಕ ಓಡಾಟಕ್ಕೆ ಬ್ರೇಕ್​ ಬೀಳುತ್ತದೆ ಎಂಬುದು ಬಿಬಿಎಂಪಿ ವಾದ. ಲಾಕ್​ಡೌನ್​ನಿಂದ ಸೋಂಕಿತರು ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಗುತ್ತದೆ. ಜೊತೆಗೆ, BBMP ಌಂಟಿಜೆನ್ […]

ಬೆಂಗಳೂರಲ್ಲಿ ಶುರುವಾಯ್ತು ಲಾಕ್​ಡೌನ್​ ವಿಸ್ತರಣೆ ಲಡಾಯಿ!
KUSHAL V
|

Updated on:Jul 18, 2020 | 10:16 AM

Share

ಬೆಂಗಳೂರು: ರಾಜಧಾನಿಯಲ್ಲಿ ಇದೀಗ ಲಾಕ್​ಡೌನ್​ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

BBMP ನಗರದಲ್ಲಿ 15ದಿನಗಳ ಲಾಕ್​ಡೌನ್​ಗೆ ಸರ್ಕಾರಕ್ಕೆ ಮನವಿ ಮಾಡಿದೆ. 15ದಿನ ಲಾಕ್​ಡೌನ್​ನಿಂದ ಬೆಂಗಳೂರಿನಲ್ಲಿ ಸೋಂಕು ತಡೆಯಬಹುದು. ಸೋಂಕಿತ ವ್ಯಕ್ತಿ 12 ದಿನದಲ್ಲಿ ಗುಣಮುಖರಾಗುತ್ತಿರೋ ಹಿನ್ನೆಲೆಯಲ್ಲಿ ಜನರು 15 ದಿನ ಮನೆಯಿಂದ ಹೊರಬಾರದಂತೆ ತಡೆಯಬೇಕು. ಹೀಗಾಗಿ, ಲಾಕ್​ಡೌನ್​ನಿಂದ ಸೋಂಕಿತರ ಸಾರ್ವಜನಿಕ ಓಡಾಟಕ್ಕೆ ಬ್ರೇಕ್​ ಬೀಳುತ್ತದೆ ಎಂಬುದು ಬಿಬಿಎಂಪಿ ವಾದ.

ಲಾಕ್​ಡೌನ್​ನಿಂದ ಸೋಂಕಿತರು ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಗುತ್ತದೆ. ಜೊತೆಗೆ, BBMP ಌಂಟಿಜೆನ್ ಟೆಸ್ಟ್ ಮೂಲಕ ಕೊರೊನಾ ಪರೀಕ್ಷೆ ನಡೆಸುತ್ತಿದೆ. ಕಂಟೇನ್​ಮೆಂಟ್ ಜೋನ್​ನಲ್ಲಿ ಈ ಟೆಸ್ಟ್ ಮಾಡಲಾಗ್ತಿದ್ದು ಸೋಂಕಿತರ ಪತ್ತೆ ಮಾಡಲು ಸುಲಭವಾಗುತ್ತದೆ. BBMP ವ್ಯಾಪ್ತಿಯಲ್ಲಿ ಈ ಟೆಸ್ಟ್ ಮುಗಿಸಲು ಕನಿಷ್ಠ 15 ದಿನ ಬೇಕಾಗುತ್ತದೆ. ಹೀಗಾಗಿ 15 ದಿನ ಲಾಕ್​ಡೌನ್ ಮಾಡುವಂತೆ ಸರ್ಕಾರಕ್ಕೆ BBMP ಮನವಿ ಮಾಡಿತ್ತು.

ಆದರೆ, ಲಾಕ್​ಡೌನ್ ವಿಸ್ತರಣೆ ಬೇಡ ಅಂತಾ ಸರ್ಕಾರ ನಿಲುವು ತಾಳಿದೆ ಎಂದು ತಿಳಿದುಬಂದಿದೆ. ಜೊತೆಗೆ, ಪಾಲಿಕೆಯ ಮನವಿಯನ್ನ ಸರ್ಕಾರ ಮತ್ತು ಉಸ್ತುವಾರಿ ಸಚಿವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಲಾಕ್​ಡೌನ್ ವಿಸ್ತರಣೆ ಬೇಡ ಅಂತಾ ನಿನ್ನೆ ಸಭೆಯಲ್ಲಿ ಸಿಎಂ ಬಿಎಸ್​ವೈ ಸಹ ನಿರಾಸಕ್ತಿ ತೋರಿದ್ದರು.

ಲಾಕ್​ಡೌನ್ ಮಾಡಿದ್ರೆ ಆರ್ಥಿಕ ಹೊಡೆತ ಬೀಳುವ ಆತಂಕ ಇದೆ. ಆರ್ಥಿಕ ಮುಗ್ಗಟ್ಟು ಎದುರಾಗಬಹುದಾದ ಆತಂಕದಿಂದಾಗಿ ಸಿಎಂ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ರಾಜಧಾನಿ ಬೆಂಗಳೂರಿನಿಂದಲೇ ರಾಜ್ಯಕ್ಕೆ ಆತಿಹೆಚ್ಚು ಆದಾಯ ಬರುತ್ತೆ. ಒಟ್ಟು ಆದಾಯದ ಶೇ. 50ಕ್ಕಿಂತಲೂ ಹೆಚ್ಚು ಪಾಲು ಬೆಂಗಳೂರಿನದ್ದು. ಹೀಗಾಗಿ, ಲಾಕ್​​ಡೌನ್ ವಿಸ್ತರಣೆ ಆದ್ರೆ ಆದಾಯದ ಮೂಲ ಸ್ಥಗಿತಗೊಳ್ಳುತ್ತದೆ ಎಂಬುದು ಸಿಎಂ ಬಿಎಸ್​ವೈ ಅಭಿಪ್ರಾಯ.

Published On - 9:47 am, Sat, 18 July 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್