ಷಷ್ಠಗ್ರಹಗಳ ಮಿಲನ ಮತ್ತು ರಾಶಿಗಳ ಮೇಲೆ ಅದು ಬೀರಲಿರುವ ಪ್ರಭಾವದ ಬಗ್ಗೆ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಣೆ

ಷಷ್ಠಗ್ರಹ ಗ್ರಹಚಾರ ಅಂದರೇನು? ಅದರ ವೈಶಿಷ್ಟ್ಯವೇನು? ಅದು ವಿವಿಧ ರಾಶಿಗಳ ಮೇಲೆ ಬೀರುವ ಪ್ರಭಾವ ಎಂಥದ್ದು?  ಯಾವ ರಾಶಿಯವರಿಗೆ ಒಳ್ಳೆಯದಾಗುತ್ತೆ? ಯಾರಿಗೆ ಕೆಟ್ಟದಾಗುತ್ತೆ? ಎದುರಾಗಬಹುದಾದ ಕಂಟಕಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.

ಷಷ್ಠಗ್ರಹಗಳ ಮಿಲನ ಮತ್ತು ರಾಶಿಗಳ ಮೇಲೆ ಅದು ಬೀರಲಿರುವ ಪ್ರಭಾವದ ಬಗ್ಗೆ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಣೆ
ಷಷ್ಠಗ್ರಹ ಕೂಟದ ಬಗ್ಗೆ ಬಸವರಾಜ ಗುರೂಜಿ ವಿವರಣೆ
Edited By:

Updated on: Feb 10, 2021 | 5:41 PM

ಷಷ್ಠಗ್ರಹ ಗ್ರಹಚಾರ ಅಂದರೇನು? ಅದರ ವೈಶಿಷ್ಟ್ಯವೇನು? ಅದು ವಿವಿಧ ರಾಶಿಗಳ ಮೇಲೆ ಬೀರುವ ಪ್ರಭಾವ ಎಂಥದ್ದು?  ಯಾವ ರಾಶಿಯವರಿಗೆ ಒಳ್ಳೆಯದಾಗುತ್ತೆ? ಯಾರಿಗೆ ಕೆಟ್ಟದಾಗುತ್ತೆ? ಎದುರಾಗಬಹುದಾದ ಕಂಟಕಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.

ಪ್ರಕೃತಿಯಲ್ಲಿ ಕೆಲ ವೈಚಿತ್ರ್ಯಗಳು ಸಂಭವಿಸಿ ಪಂಚಭೂತಗಳಲ್ಲಿ ಏರುಪೇರುಗಳಾಗುವುದನ್ನು ನಾವು ಗಮನಿಸುತ್ತಿರುತ್ತೇವೆ. 2021ರ ಪುಷ್ಯ ಮಾಸದಲ್ಲಿ (ಫೆಬ್ರುವರಿ-ಮಾರ್ಚ್) ಗ್ರಹ ವಿಸ್ಮಯ, ವಿಶೇಷವಾದ ಗ್ರಹಗಳ ಸಂಧಿಕಾಲ ಫೆಬ್ರುವರಿ 11ರಂದು ಸಂಭವಿಸಲಿದೆ. ಇದು ಶನಿಯ ಅಧಿಪತ್ಯವಿರುವ ಮಕರರಾಶಿಯಲ್ಲಿ ಷಷ್ಠಗ್ರಹಗಳ ಒಂದುಗೂಡುವಿಕೆ ಸಂಭವಿಸಲಿದೆ ಎಂದು ಗುರೂಜಿ ಹೇಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ 12 ಮನೆಗಳಲ್ಲಿ ಪ್ರತಿ ಮನೆಗೂ ಒಬ್ಬ ಅಧಿಪತಿಯಿರುತ್ತಾನೆ, 9 ಗ್ರಹಗಳು ಮನೆಯನ್ನು ಆಶ್ರಯಿಸಿರುತ್ತವೆ ಮತ್ತು 2 ಗ್ರಹಗಳಿಗೆ ಸ್ವಂತ ಮನೆಗಳಿಲ್ಲ. ಉಳಿದ 7 ಗ್ರಹಗಳಲ್ಲಿ 6 ಗ್ರಹಗಳು ಒಂದೇ ಮನೆ ಸೇರಲಿವೆ. ಅವುಗಳು ಹಾಗೆ ಸೇರುವ ಸಮಯ ಹೇಗಿರಲಿದೆ? ಅವುಗಳ ಸೇರುವಿಕೆ ಪ್ರಕೃತಿಯ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದನ್ನು ಗುರೂಜಿ ವಿವರಿಸಿದ್ದಾರೆ. 11ನೇ ತಾರೀಕು ಅಮಾವಾಸ್ಯೆ, ಗರುಡ ಜಯಂತಿ ಮತ್ತು ವಿಶೇಷ ಕಾಲ. ಈ ಹಿನ್ನೆಲೆಯಲ್ಲಿ ಷಷ್ಠಗ್ರಹಗಳ ಮಿಲನ ರಾಶಿಫಲಗಳ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದನ್ನು ಬಸವರಾಜ ಗುರೂಜಿ ಹೇಳಿದ್ದಾರೆ.

ಮೇಷ ರಾಶಿ: ರಾಶಿಯ ಅಧಿಪತಿ ಕುಜ ಮೇಷರಾಶಿಯಲ್ಲೇ ಇರುವುದರಿಂದ ಈ ರಾಶಿಯವರಿಗೆ ಬಲವಿರುತ್ತದೆ. ಆದರೆ ಇವರಿಗೆ ಬುಧ ಮಾರಕಾಧಿಪತಿಯಾಗಿರುವುದರಿಂದ ಜಾಗ್ರತೆಯಿಂದಿರಬೇಕು. ಆರೋಗ್ಯ ಮತ್ತು ಉದ್ಯೋಗದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಪ್ರಗತಿ ಬಯಸುವವರು ಸುಬ್ರಮಣ್ಯ ಆರಾಧನೆ ಮಾಡಿಕೊಳ್ಳಬೇಕು. ಗುರುವಾರದಂದು ನವ ಧಾನ್ಯಗಳನ್ನು ಶೇಖರಿಸಿಕೊಂಡು ದೇವಸ್ಥಾನಗಳಿಗೆ, ಅರ್ಚಕರಿಗೆ ದಕ್ಷಿಣೆ ಸಮೇತ ದಾನ ಮಾಡಿದರೆ ಒಳ್ಳೆಯದಾಗುತ್ತದೆ. ಹಾಗೆ ಮಾಡಿದ್ದೇಯಾದಲ್ಲಿ ಉದ್ಯೋಗಕ್ಕೆ ಸಂಭಂದಿಸಿದಂತೆ ಒಳ್ಳೆಯ ಸುದ್ದಿ ಬರಲಿದೆ.

ವೃಷಭ ರಾಶಿ: ಈ ರಾಶಿಯ ಅಧಿಪತಿ ಶುಕ್ರ ಸಹ ಈ ಗ್ರಹಕೂಟದಲ್ಲಿ ಭಾಗಿಯಾಗಿದ್ದಾನೆ. ಈ ರಾಶಿಯವರ ಮೇಲೆ ಸುಳ್ಳು ಆಪಾದನೆಗಳು ಬರುವ ಸಾಧ್ಯತೆಯಿದೆ. ಅನಾರೋಗ್ಯ ಕಾಡಲಿದೆ ಮತ್ತು ವ್ಯಾಪಾರದಲ್ಲಿ ನಷ್ಟವುಂಟಾಗಲಿದೆ. ಈ ರಾಶಿಯವರಿಗೆ ಗ್ರಹಬಲ ಇಲ್ಲದಿರುವುದರಿಂದ ಅವರು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಕುಟುಂಬದ ಸದಸ್ಯರೊಂದಿಗೆ ಸಂತೋಷ ಮತ್ತು ಸಮಾಧಾನದಿಂದ ಇರಬೇಕು. ಶುಕ್ರನಿಗೆ ಸಂಬಂಧಿಸಿದ ಸ್ತೋತ್ರ ಮತ್ತು ದೇವಿಯ ಸ್ತೋತ್ರ ಮಾಡಬೇಕು. ಅನ್ನದಾನ ಮಾಡಿದರೆ ಒಳ್ಳೆಯದಾಗುತ್ತದೆ.

ಮಿಥುನ ರಾಶಿ: ಈ ರಾಶಿಯವರಿಗೆ ಷಷ್ಠಗ್ರಹಗಳ ಮಿಲನದಿಂದ ತೊಂದರೆಗಳು ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರು, ಹಣಕಾಸು ನಷ್ಟ ಎದುರಾಗಬಹುದು. ಈ ರಾಶಿಯ ರಾಜಕಾರಣಿಗಳಿಗೆ ಇದು ಶುಭಕಾಲವಲ್ಲ. ಕೌಟುಂಬಿಕ ಸಮಸ್ಯೆ ಮತ್ತು ಸ್ಥಾನಪಲ್ಲಟಗಳಂಥ ಸ್ಥಿತಿ ಎದುರಾಗಬಹುದು. ಹಾಗಾಗಿ, ಅವರು ಜಾಗ್ರತೆಯಿಂದಿರಬೇಕು. ಸಂಬಂಧಗಳಿಗೆ ತೊಡಕುಂಟಾಗಬಹುದು. ಏಪ್ರಿಲ್ 6 ನೇ ತಾರೀಕಿನವರೆಗೆ ಈ ರಾಶಿಯವರಿಗೆ ಗುರುಬಲವಿಲ್ಲ. ಬಲಹೀನತೆಯೆನಿಸಿದರೆ ಶ್ರೀಮನ್ನಾರಾಯಣ ಮತ್ತು ವಿಷ್ಣುವಿನ ಸ್ತೋತ್ರ ಮಾಡಬೇಕು.

ಕಟಕ ರಾಶಿ: ಈ ರಾಶಿಯವರಿಗೆ, ಗುರುಬಲವಿದ್ದರೂ ಚಂದ್ರ ಸಹ ಷಷ್ಠಗ್ರಹಕೂಟದಲ್ಲಿ ಭಾಗಿಯಾಗಿರುವುದರಿಂದ ವಿಶೇಷವಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಚಂದ್ರನಿಗೆ ಶತ್ರುಗಳು ಇಲ್ಲದೆ ಹೋದರೂ ಆತನ ಸುತ್ತಲೂ ಇರುವ ಗ್ರಹಗಳಿಂದಾಗಿ ಈ ರಾಶಿಯವರಿಗೆ ಮಾನಸಿಕ ವೇದನೆ ಮತ್ತು ಕಿರಿಕಿರಿ ಇರಲಿದೆ. ಮೊಸರನ್ನ ದಾನ ಮಾಡಿ ದತ್ತಾತ್ರೇಯನ ಸ್ತೋತ್ರ ಮಾಡುವುದು ಕಂಟಕಗಳನ್ನು ದೂರಮಾಡಲಿದೆ. ಗ್ರಹಣದ ದಿನವಾದ ಬುಧವಾರದಂದು ಗರುಡ ಜಯಂತಿಯೂ ಇರುವುದರಿಂದ ದತ್ತನ ಪೂಜೆ ಮತ್ತು ಸ್ಮರಣೆ ಮಾಡಿಕೊಳ್ಳವುದು ಒಳಿತು.

ಸಿಂಹ ರಾಶಿ: ಈ ರಾಶಿಯವರಿಗೂ ಗುರುಬಲವಿಲ್ಲ. ದೊಡ್ಡ ಕೆಲಸಗಳಿಗೆ ಕೈ ಹಾಕಿದರೂ ಪ್ರಯೋಜನವಾಗಲಾರದು. ಸಮಾಜದಲ್ಲಿ ಸ್ಥಾನಮಾನ ಕಳೆದುಕೊಳ್ಳುವ ಅಪಾಯವಿದೆ. ಅಪಘಾತ, ವಿದ್ಯುಚ್ಛಕ್ತಿಯಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಜಾಗ್ರತೆಯಿಂದಿರಬೇಕು. ಫೆ.11ನೇ ತಾರೀಕಿನಂದು ಮನೆಯಿಂದ ಆಚೆ ಹೋಗದೆ ಮನೆಯಲ್ಲೇ ಮೃತ್ಯುಂಜಯ ಜಪ ಮಾಡಿದರೆ ಒಳ್ಳೆಯದಾಗುತ್ತದೆ. ಹೊಸ ವಸ್ತುಗಳ ಖರೀದಿಗೆ ಶುಭಕಾಲವಲ್ಲ. ಈ ರಾಶಿಯ ರಾಜಕಾರಣಿಗಳಿಗೆ ಕಂಟಕಗಳು ಜಾಸ್ತಿ. ಹಾಗಾಗಿ ಅವರು ಎಚ್ಚರದಿಂದರಬೇಕು.

ಕನ್ಯಾ ರಾಶಿ: ಈ ರಾಶಿಯವರಿಗೆ ಗುರುಬಲವಿದ್ದರೂ ಇದರ ಅಧಿಪತಿಯಾಗಿರುವ ಬುಧ ಕೂಡ ಗ್ರಹಕೂಟದಲ್ಲಿ ಭಾಗಿಯಾಗಿರುವುದರಿಂದ ಅದೃಷ್ಟವೂ ಇದೆ ಹಾಗೆಯೇ ದುರಾದೃಷ್ಟವೂ ಎದುರಾಗಬಹುದು. ರಾಜಕಾರಣಗಳಿಗೆ, ಕಬ್ಬಿಣದ ವ್ಯಾಪಾರಿಗಳಿಗೆ ಶುಭವಿಲ್ಲ. ಆದರೆ ಚಿನಿವಾರರಿಗೆ ಒಳ್ಳೆಯ ಸಮಯ. ಕೆಲವರಿಗೆ ಅದೃಷ್ಟ ಒದಗಿಬಂದರೂ ಅದು ಪರಿಪೂರ್ಣಗುವುದಿಲ್ಲ. ಸುಬ್ರಮಣ್ಯ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ.

ತುಲಾ ರಾಶಿ: ಈ ರಾಶಿಯವರಿಗೆ ಅರ್ಧಾಶ್ರಮ ಶನಿಕಾಟವಿದೆ. ಈ ರಾಶಿಯ ರಾಜಕಾರಣಿ, ಧರ್ಮ ಪ್ರಚಾರಕ, ಚಿಂತಕ, ಜ್ಯೋತಿಷಿ, ಆಧ್ಯಾತ್ಮಿಕ ಚಿಂತಕರು ಬಹಳ ಜಾಗ್ರತೆಯಿಂದರಬೇಕು. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ, ಮಠಮಾನ್ಯಗಳಲ್ಲಿ ಅಪವಾದ ಎದುರಾಗಬಹುದು. ಜ್ಯೋತಿಷಿಗಳಿಗೂ ಕೆಟ್ಟ ಹೆಸರು ಬರಬಹುದು. ಸಾಕ್ಷಾತ್ ಪಾರ್ವತಿ ಸ್ತೋತ್ರ, ದೇವಿಯ ಸ್ತೋತ್ರ ಮತ್ತು ದುರ್ಗಿಯ ಆರಾಧನೆ ಮಾಡುವ ಮೂಲಕ ಕಂಟಕಗಳನ್ನು ನಿವಾರಿಸಿಕೊಳ್ಳಬಹುದು. ಷಷ್ಠಗ್ರಹಕೂಟ ಈ ರಾಶಿಯವರಿಗೆ ಒಳ್ಳೆಯದಲ್ಲ.

ವೃಶ್ಚಿಕ ರಾಶಿ: ಕೇತು ಇರುವಂಥ ಈ ರಾಶಿಯವರಿಗೆ ಬೇರೆಯವರ ಸಮಸ್ಯೆಗಳನ್ನು ಬಿಡಿಸುವ ಪ್ರಯತ್ನದಲ್ಲಿ ತೊಂದರೆ ಎದುರಾಗಲಿದೆ. ರಕ್ತವನ್ನು ನೋಡುವ ಸಾಧ್ಯತೆ ಇರುವುದರಿಂದ ಜಾಗ್ರತೆಯಿಂದಿರಬೇಕು. ಈ ಕೂಟ ಸಂಭವಿಸುವ ದಿನದಿಂದ ಹಿಡಿದು 9 ದಿನಗಳವರೆಗೆ ಅಂಗವಿಕಲರಿಗೆ ಮತ್ತು ವೃದ್ಧಾಶ್ರಮದಲ್ಲಿರುವವರಿಗೆ ಅನ್ನದಾನ ಮಾಡಿದರೆ ಒಳ್ಳೆಯದಾಗುತ್ತದೆ. ಗಣಪತಿ ಸ್ತೋತ್ರ ಸಹ ಸಮಸ್ಯೆಗಳನ್ನು ನಿವಾರಿಸಲಿದೆ.

ಧನು ರಾಶಿ: ಈ ರಾಶಿಯವರಿಗೆ ಈಗ ಸಾಡೇಸಾತಿ ಬಿಡುಗಡೆಯಾಗುತ್ತಿರುವ ಸಂದರ್ಭ. ಈ ರಾಶಿಯ ಅಧಿಪತಿ ಗುರುವಾಗಿದ್ದರೂ ಬಲವಿಲ್ಲ. ಶುಭ ಮತ್ತು ಅಶುಭ ಕಾಲಗಳೆರಡೂ ಎದುರಾಗಲಿವೆ. ಆಸ್ತಿ ಕಳೆದುಕೊಳ್ಳುವ ಅಪಾಯವಿದೆ. ಕೈಗೆತ್ತಿಕೊಂಡಿರುವ ಯಾವುದೇ ಕೆಲಸ ಕೊನೆಗೊಳ್ಳುವ ಅವಧಿಯಲ್ಲಿ ವಿಘ್ನ ಎದುರಾಗುವ ಸಾಧ್ಯತೆಯಿದೆ. ಪತ್ರಕರ್ತರಿಗೆ, ಸಿನಿಮಾ ನಟರಿಗೆ ಸಂಕಟಕಾಲ. ಗುರುವಿನ ಮಂತ್ರ ಹೇಳಿಕೊಂಡು ಈ ರಾಶಿಯವರು ತಮ್ಮ ಭೌತಿಕ ಗುರುವಿನ ಆಶ್ರಯ ಪಡೆದುಕೊಳ್ಳುವುದು ಒಳಿತು. ಅವರಿಗೆ ವಸ್ತ್ರದಾನ ಮಾಡಬೇಕು ಮತ್ತು ದತ್ತಾತ್ರೇಯ ಮಂತ್ರ ಹೇಳಿಕೊಳ್ಳಬೇಕು.

ಮಕರ ರಾಶಿ: ನಮ್ಮ ದೇಶದ ಹಲವಾರು ಶತ್ರು ರಾಷ್ಟ್ರಗಳು ಈ ರಾಶಿಯಲ್ಲಿವೆ. ಅವುಗಳಿಂದ ದೇಶಕ್ಕೆ ಕಂಟಕ ಎದುರಾಗುವ ಸಾಧ್ಯತೆಯಿದೆ. ಮಕರರಾಶಿಯಲ್ಲಿ ಒಂದುಗೂಡಿರುವ 6 ಗ್ರಹಗಳಲ್ಲಿ ಶತ್ರುಗ್ರಹ ಮತ್ತು ಮಿತ್ರಗ್ರಹಗಳೂ ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗ್ರಹಗಳೇ ಇರುವುದರಿಂದ ಮಕರ ರಾಶಿಯವರಿಗೆ ಇದು ಶುಭಕಾಲವಲ್ಲ. ಪ್ರಯಾಣ ಮತ್ತು ಸಂಕಲ್ಪ ಕೈಗೊಳ್ಳಲು ಇದು ಸೂಕ್ತ ಸಮಯವಲ್ಲ. ಕುಟುಂಬದಲ್ಲಿ ಕಲಹ, ಮಿತ್ರರೊಂದಿಗೆ ಮನಸ್ತಾಪ ಮತ್ತು ಆಕಸ್ಮಿಕ ಘಟನೆಗಳು ಸಂಭವಿಸಬಹುದು. ಯಾವುದೇ ಕಾರ್ಯ ಕೈಗೆತ್ತಿಕೊಂಡರೂ ಅಪೂರ್ಣವಾಗಿ ಉಳಿದುಬಿಡುತ್ತದೆ. ಈ ರಾಶಿಯವರು ಶಿವನಿಗೆ ರುದ್ರಾಭೀಷೇಕ ಮಾಡಿಸಲೇಬೇಕು. ತ್ರಿಕಾಲ ಪೂಜೆ ಮಾಡಿಸಿದರೆ ಮಾತ್ರ ಒಳ್ಳೆಯದಾಗುತ್ತದೆ. ಒಂದು ದಿನವನ್ನು ಭಗವಂತನಿಗಾಗಿ ಮೀಸಲಿಡಬೇಕು. ಓಂ ನಮಃ ಶಿವಾಯ ಪಠಿಸುತ್ತಿರಬೇಕು.

ಕುಂಭ ರಾಶಿ: ಈ ರಾಶಿಯವರಿಗೂ ಷಷ್ಠಗ್ರಹಕೂಟ ಶುಭಕಾರಿ ಅಲ್ಲವೇ ಅಲ್ಲ. ಶನಿಯಿಂದ ಅಷ್ಟು ಅನುಕೂಲವಿಲ್ಲ. ಈ ರಾಶಿಯ ಅಧಿಪತ್ಯದ ಗ್ರಹ ಕೂಟದಲ್ಲಿರುವುದರಿಂದ ಮನಸ್ಥೈರ್ಯ ಕಳೆದುಕೊಳ್ಳದೆ, ದೀರ್ಘಾಲೋಚನೆ ಮಾಡಬೇಕು. ವಿದ್ಯಾರ್ಥಿ ಮತ್ತು ರೈತರಿಗೆ ಒಳ್ಳೆಯ ಕಾಲ. ಅದರೂ ಎಚ್ಚರಿಕೆಯಿಂದ ಹೆಜ್ಜೆ ಮುಂದಿರಿಸಬೇಕು. ಶನಿಯೂ ಈ ಕೂಟದ ಭಾಗವಾಗಿರುವುದರಿಂದ ವಿದೇಶ ಪ್ರಯಾಣದ ಯೋಗವಿದೆ ಮತ್ತು ಮುಂದೆ ಒಳ್ಳೆಯ ದಿನಗಳು ಕಾದಿವೆ, ಲಕ್ಷ್ಮಿಯ ಸ್ತೋತ್ರ ಮಾಡಬೇಕು.

ಮೀನ ರಾಶಿ: ಮೀನ ರಾಶಿಯ ಪುರುಷ ಮತ್ತು ಮಹಿಳೆಯರಿಗೆ ಷಷ್ಠಗ್ರಹಕೂಟ ಅದ್ಭುತವಾಗಿದೆ. ವಿದ್ಯಾರ್ಥಿ ಮತ್ತು ರಾಜಕಾರಣಿಗಳಿಗೆ ಒಳ್ಳೆಯ ಕಾಲ. ಅದರೆ, 6 ಗ್ರಹಗಳ ಮಿಲನವು ದೇಶ ಮತ್ತು ರಾಜ್ಯಗಳಿಗೆ ಶುಭವಾಗಿಲ್ಲ. ಹಾಗಾಗಿ ಈ ರಾಶಿಯವರು ಜಾಗ್ರತೆವಹಿಸಬೇಕು. ಸುಬ್ರಮಣ್ಯ ಆರಾಧನೆ ಮಾಡಬೇಕು, ಜಪಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಜೊತೆಗೆ ಶಿವನ ಸ್ತೋತ್ರ ಮಾಡಬೇಕು.

(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937)

Published On - 9:05 pm, Fri, 5 February 21