ಪಿಪಿಇ ಕಿಟ್ ಧರಿಸಿ ಮುನ್ನೆಚ್ಚರಿಕೆ ವಹಿಸಿದರೂ ವೈದ್ಯರಿಗೆ ಸೋಂಕು, ಕಿಟ್​ನಲ್ಲೂ ಇದೆಯಾ ಎಡವಟ್ಟು!

|

Updated on: Jun 07, 2020 | 3:34 PM

ದಾವಣಗೆರೆ: ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜೀವದ ಹಂಗು ತೊರೆದು ಕೋವಿಡ್ ವಾರ್ಡ್​ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಅಗತ್ಯ ರಕ್ಷಾ ಕವಚವಿಲ್ಲದೆ ಮಹಾಮಾರಿ ಸೋಂಕು ಅಂಟಿಸಿಕೊಂಡವರಿಗೆ ಚಿಕಿತ್ಸೆ ನೀಡುವುದು ಕಷ್ಟ. ಒಮ್ಮೆ ಪಿಪಿಇ ಕಿಟ್ ಧರಿಸಿದರೇ ಕನಿಷ್ಠ ಆರು ಗಂಟೆಗಳ ಕಾಲ ಅದನ್ನ ತೆಗೆಯುವಂತಿಲ್ಲ. ಅದನ್ನ ಧರಿಸುವಾಗ ಮತ್ತು ಬಿಚ್ಚುವಾಗ ಆದಷ್ಟು ಜಾಗೃತಿ ವಹಿಸಲೇ ಬೇಕು. ಆದ್ರೆ ಈ ಕಿಟ್​ನಲ್ಲೂ ಯಡವಟ್ಟು ಇರುವುದು ಗೊತ್ತಾಗಿದೆ. ಸರ್ಕಾರ ನೀಡಿದ ಕಿಟ್ ಧರಿಸಿಯೇ ಮೂರು ವೈದ್ಯರು ಒಂದು ವಾರಗಳ ಕಾಲ […]

ಪಿಪಿಇ ಕಿಟ್ ಧರಿಸಿ ಮುನ್ನೆಚ್ಚರಿಕೆ ವಹಿಸಿದರೂ ವೈದ್ಯರಿಗೆ ಸೋಂಕು, ಕಿಟ್​ನಲ್ಲೂ ಇದೆಯಾ ಎಡವಟ್ಟು!
Follow us on

ದಾವಣಗೆರೆ: ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜೀವದ ಹಂಗು ತೊರೆದು ಕೋವಿಡ್ ವಾರ್ಡ್​ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಅಗತ್ಯ ರಕ್ಷಾ ಕವಚವಿಲ್ಲದೆ ಮಹಾಮಾರಿ ಸೋಂಕು ಅಂಟಿಸಿಕೊಂಡವರಿಗೆ ಚಿಕಿತ್ಸೆ ನೀಡುವುದು ಕಷ್ಟ. ಒಮ್ಮೆ ಪಿಪಿಇ ಕಿಟ್ ಧರಿಸಿದರೇ ಕನಿಷ್ಠ ಆರು ಗಂಟೆಗಳ ಕಾಲ ಅದನ್ನ ತೆಗೆಯುವಂತಿಲ್ಲ. ಅದನ್ನ ಧರಿಸುವಾಗ ಮತ್ತು ಬಿಚ್ಚುವಾಗ ಆದಷ್ಟು ಜಾಗೃತಿ ವಹಿಸಲೇ ಬೇಕು. ಆದ್ರೆ ಈ ಕಿಟ್​ನಲ್ಲೂ ಯಡವಟ್ಟು ಇರುವುದು ಗೊತ್ತಾಗಿದೆ.

ಸರ್ಕಾರ ನೀಡಿದ ಕಿಟ್ ಧರಿಸಿಯೇ ಮೂರು ವೈದ್ಯರು ಒಂದು ವಾರಗಳ ಕಾಲ ದಾವಣಗೆರೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರು. ಇವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ರೆ ಅವರಿಗೆ ಕಿಟ್ ಯಡವಟ್ಟಿನಿಂದಲೇ ಸೋಂಕು ತಗುಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದ್ರೆ ಕಿಟ್​ಗಳಲ್ಲಿ ಗಾಗಲ್, ಗೌನ್, ಎರಡು ರೀತಿಯ ಮಾಸ್ಕ್ ಸೇರಿದಂತೆ ಕನಿಷ್ಠ ಹತ್ತು ವಸ್ತುಗಳು ಇರುತ್ತವೆ. ಈ ಕಿಟ್​ಗಳಿಂದ ಕೊರೊನಾ ಚಿಕಿತ್ಸೆಗೆ ತೆರಳುವ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ಸಿಗುತ್ತದೆ ಎಂದು ವೈದ್ಯಕೀಯ ಲೋಕ ಸ್ಪಷ್ಟ ಪಡಿಸಿದೆ.

ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ನೀಡಿರುವ ಕಿಟ್​ಗಳಲ್ಲಿ 10 ಅವಶ್ಯಕ ಸಾಮಾಗ್ರಿಗಳ ಬದಲಾಗಿ ಏಳು ಸಾಮಾಗ್ರಿಗಳಿವೆ. ಹಾಗೂ ಜೀವ ಉಳಿಸುತ್ತಿರುವ ವೈದ್ಯರ ಜೀವನದ ಜೊತೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕಳಪೆ ಮಟ್ಟದ ಕಿಟ್​ಗಳನ್ನು ನೀಡಲಾಗುತ್ತಿದೆ. ಹೀಗಾಗಿಯೇ ವೈದ್ಯರಿಗೂ ಸೋಂಕು ತಗುಲುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ ಸ್ವತಃ ವೈದ್ಯರೇ ತಿಳಿಸಬೇಕಿದೆ. ಹಾಗೂ ಸೂಕ್ತ ರೀತಿಯಲ್ಲಿ ಅದನ್ನ ಧರಿಸುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯವಿದೆ.

Published On - 10:25 am, Sun, 7 June 20