ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು, ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ಭಾರಿ ಕುಸಿತ!

ಮಂಡ್ಯ: ಲಾಕ್​ಡೌನ್​​ನಲ್ಲಿ ಮದ್ಯಪ್ರಿಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಣ್ಣೆ ಸಿಗದೆ ಎರಡೆರಡು ತಿಂಗಳು ಪರದಾಡಿದ್ರು. ಅದೆಷ್ಟೋ ಕುಡುಕರು ಮದ್ಯಕ್ಕಾಗಿ ಜೀವತೆತ್ತರು. ಆದ್ರೀಗ ಸಕ್ಕರೆನಾಡಲ್ಲಿ ಜನರು ಬಾರ್​ಗಳತ್ತ ಸುಳಿತಾನೇ ಇಲ್ಲ. ಮೇ 4.. ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟ ದಿನ. ಎಣ್ಣೆ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ ನಿಂತಿದ್ದ ದಿನ.. ಮದ್ಯಕ್ಕಾಗಿ ಜನ ಮುಗಿಬಿದ್ದು ದಾಂದಲೆ ನಡೆಸಿದ ದಿನ.. ಮದ್ಯಪ್ರಿಯರ ಕುಡಿತದ ಚಟ ನೋಡಿ ದೇಶದ ಜನರೇ ಬೆಚ್ಚಿಬಿದ್ದಿದ್ದ ದಿನ.. ಆದ್ರೀಗ ಕೆಲವೆಡೆ ಈ ಸೀನ್ […]

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು, ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ಭಾರಿ ಕುಸಿತ!
Follow us
ಆಯೇಷಾ ಬಾನು
|

Updated on: Aug 04, 2020 | 6:45 AM

ಮಂಡ್ಯ: ಲಾಕ್​ಡೌನ್​​ನಲ್ಲಿ ಮದ್ಯಪ್ರಿಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಣ್ಣೆ ಸಿಗದೆ ಎರಡೆರಡು ತಿಂಗಳು ಪರದಾಡಿದ್ರು. ಅದೆಷ್ಟೋ ಕುಡುಕರು ಮದ್ಯಕ್ಕಾಗಿ ಜೀವತೆತ್ತರು. ಆದ್ರೀಗ ಸಕ್ಕರೆನಾಡಲ್ಲಿ ಜನರು ಬಾರ್​ಗಳತ್ತ ಸುಳಿತಾನೇ ಇಲ್ಲ.

ಮೇ 4.. ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟ ದಿನ. ಎಣ್ಣೆ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ ನಿಂತಿದ್ದ ದಿನ.. ಮದ್ಯಕ್ಕಾಗಿ ಜನ ಮುಗಿಬಿದ್ದು ದಾಂದಲೆ ನಡೆಸಿದ ದಿನ.. ಮದ್ಯಪ್ರಿಯರ ಕುಡಿತದ ಚಟ ನೋಡಿ ದೇಶದ ಜನರೇ ಬೆಚ್ಚಿಬಿದ್ದಿದ್ದ ದಿನ.. ಆದ್ರೀಗ ಕೆಲವೆಡೆ ಈ ಸೀನ್ ಕಂಪ್ಲೀಟ್ ಉಲ್ಟಾ ಆಗಿದೆ.

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು! ಲಾಕ್​ಡೌನ್​ನಲ್ಲಿ ಮದ್ಯ ಮಾರಾಟವನ್ನ ನಿಷೇಧಿಸಲಾಗಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಎಣ್ಣೆಪ್ರಿಯರು ಮದ್ಯ ಸಿಗದೆ ಪರದಾಡಿದ್ರು. ತೊಟ್ಟು ಎಣ್ಣೆಗಾಗಿ ಕಂಡ ಕಂಡವರ ಬಳಿ ಮನವಿ ಮಾಡ್ಕೊಂಡ್ರು. ಅದ್ರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕದ್ದುಮುಚ್ಚಿ ಮಾರಾಟ ಮಾಡಲಾಗ್ತಿದೆ ಅನ್ನೋ ಆರೋಪಗಳು ಸಹ ಕೇಳಿ ಬಂದಿದ್ವು.

ಆಗ ಮಂಡ್ಯದ ಉಪವಿಭಾಗಾಧಿಕಾರಿ ಸೂರಜ್ & ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆದ್ರೆ ಮೇ 4ರಂದು ಎಣ್ಣೆ ಅಂಗಡಿ ತೆಗೆದಿದ್ದೇ ತಡ, ಮಂಡ್ಯದಲ್ಲಿ ನಾ ಮುಂದು ತಾ ಮುಂದು ಅಂತಾ ಎಣ್ಣೆಗಾಗಿ ಮುಗಿಬಿದ್ದಿದ್ರು. ತದನಂತ್ರ ಬಾರ್​ಗಳತ್ತ ಮದ್ಯಪ್ರಿಯರು ಬಾರ್​ಗಳತ್ತ ತಲೆನೇ ಹಾಕ್ತಿಲ್ಲ. ಇದ್ರಿಂದ ಸ್ಟಾಕ್ ಹಾಗೇ ಇದ್ದು, ಮೂರು ತಿಂಗಳಲ್ಲಿ ಮದ್ಯ ಮಾರಾಟ ಶೇ.30ರಷ್ಟು ಕುಸಿದಿದೆ.

ಇನ್ನು ಲಾಕ್​ಡೌನ್ ಬಳಿಕ ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಕೈಯಲ್ಲಿ ದುಡ್ಡಿಲ್ಲದೆ, ಮಾಡೋಕೆ ಕೆಲ್ಸನೂ ಇಲ್ಲದೆ ಆರ್ಥಿಕ ಸಂಕಷ್ಟದಿಂದ ಪರದಾಡ್ತಿದ್ದಾರೆ. ಇದ್ರ ಜೊತೆಗೆ ಕೊರೊನಾ ಭೀತಿ ಇರೋದ್ರಿಂದ ಜನ ಬಾರ್​ಗಳತ್ತ ಬರ್ತಿಲ್ಲ. ಇದ್ರಿಂದ ಕುಡುಕರ ಸಂಖ್ಯೆ ಕಮ್ಮಿಯಾಗಿದೆ ಎನ್ನಲಾಗ್ತಿದೆ.

ಒಟ್ನಲ್ಲಿ ಕ್ರೂರಿ ಕೊರೊನಾ ಹಾವಳಿ ಉದ್ಯಮಗಳ ಮೇಲೆ ಅಷ್ಟೇ ಅಲ್ಲದೆ ಸದ್ಯ ಮದ್ಯ ಮಾರಾಟದ ಮೇಲೆಯೂ ತೀವ್ರ ಪರಿಣಾಮ ಬೀರಿದೆ. ಇದ್ರಿಂದ ಸದಾ ಲಾಭದಲ್ಲಿ ಇರ್ತಿದ್ದ ಬಾರ್ ಮಾಲೀಕರು ಇರೋ ಸ್ಟಾಕ್ ಕ್ಲಿಯರ್ ಆಗದೆ ಚಿಂತೆಗೀಡಾಗಿದ್ದಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್