
ಬೆಂಗಳೂರು: ಕೊರೊನಾ ಮಹಾಮಾರಿಗೆ ರಾಜಧಾನಿ ಬೆಚ್ಚಿಬಿದ್ದಿದೆ. ಕೊರೊನಾ ಸೋಂಕನ್ನು ಕಡಿಮೆ ಮಾಡಲು ಬಿಬಿಎಂಪಿ ಹರಸಾಹಸ ಪಡುತ್ತಿದೆ. ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್, ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಆದರೆ ಇಷ್ಟೆಲ್ಲಾ ಕಠಿಣ ಕ್ರಮಗಳನ್ನು ಹೇರಿದ್ದರೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾನೂನು ಉಲ್ಲಂಘಿಸಿದವರಿಂದ ಇದುವರೆಗೆ 1.5 ಕೋಟಿ ದಂಡ ವಸೂಲಿ ಮಾಡಲಾಗಿದೆ.
ಬಿಬಿಎಂಪಿ ಮಾರ್ಷಲ್ಗಳು ನಗರದಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದೇ ಇರುವವರ ಬಳಿ ದಂಢ ವಸೂಲಿ ಮಾಡುತ್ತಿದೆ. ಆದರೆ ಅಚ್ಚರಿಯಂತೆ 1.5 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ. ಮಾಸ್ಕ್ ಧರಿಸದವರಿಂದ 1,31,86,404 ರೂ. ದಂಡ ವಸೂಲಿಯಾದ್ರೆ, ದೈಹಿಕ ಅಂತರ ಕಾಯ್ದುಕೊಳ್ಳದವರಿಂದ 18,33,049 ರೂಪಾಯಿ ವಸೂಲಿಯಾಗಿದೆ.
Published On - 11:40 am, Tue, 28 July 20