ನಗರದಲ್ಲಿ ನಿಲ್ಲದ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿ, ತಂದೆಗಾಗಿ ಮಗನ ಪರದಾಟ..
ಬೆಂಗಳೂರು: ನಾನ್ ಕೋವಿಡ್ ಪೇಷಂಟ್ ಆದರೂ ಸಹ ಯಾವೊಂದು ಆಸ್ಪತ್ರೆಯು ಲೋ ಬಿಪಿಯಿಂದ ನರಳುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ತಂದೆಯನ್ನು ಉಳಿಸಿಕೊಳ್ಳಲು ಮಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ಘಟನೆ ಇಂದು ನಗರದಲ್ಲಿ ನಡೆದಿದೆ. ಜಾಲಹಳ್ಳಿ ಕ್ರಾಸ್ ನ 58 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ, ನಗರದ ಆಸ್ಪತ್ರೆಗಳಾದ ದಾಸರಹಳ್ಳಿ ಪ್ರಕ್ರಿಯ ಹಾಸ್ಪಿಟಲ್ ನಿಂದ ಹಿಡಿದು ರಾಮಯ್ಯ, ಕೊಲಂಬಿಯ ಏಷಿಯಾ, ಪೀಪಲ್ ಟ್ರೀ, ಸಪ್ತಗಿರಿ, ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಅಂಗಲಾಚಿದರು, ಕೋವಿಡ್ […]

ಬೆಂಗಳೂರು: ನಾನ್ ಕೋವಿಡ್ ಪೇಷಂಟ್ ಆದರೂ ಸಹ ಯಾವೊಂದು ಆಸ್ಪತ್ರೆಯು ಲೋ ಬಿಪಿಯಿಂದ ನರಳುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ತಂದೆಯನ್ನು ಉಳಿಸಿಕೊಳ್ಳಲು ಮಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.
ಜಾಲಹಳ್ಳಿ ಕ್ರಾಸ್ ನ 58 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ, ನಗರದ ಆಸ್ಪತ್ರೆಗಳಾದ ದಾಸರಹಳ್ಳಿ ಪ್ರಕ್ರಿಯ ಹಾಸ್ಪಿಟಲ್ ನಿಂದ ಹಿಡಿದು ರಾಮಯ್ಯ, ಕೊಲಂಬಿಯ ಏಷಿಯಾ, ಪೀಪಲ್ ಟ್ರೀ, ಸಪ್ತಗಿರಿ, ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಅಂಗಲಾಚಿದರು, ಕೋವಿಡ್ ಟೆಸ್ಟ್ ಇಲ್ಲ ಎಂಬ ಕಾರಣ ಹೇಳಿ ಯಾವೊಂದು ಆಸ್ಪತ್ರೆಯು ಚಿಕಿತ್ಸೆ ನೀಡಲು ಮುಂದಾಗಿಲ್ಲ.
ಇದರಿಂದ ತಂದೆಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡುತ್ತಿರುವ ಮಗ, ನಮ್ಮ ತಂದೆಗೆ ಶುಗರ್ ಜಾಸ್ತಿ ಆಯ್ತು, ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈಗ ಪಲ್ಸ್ ರೇಟ್ ಕಡಿಮೆಯಾಗುತ್ತಿದೆ, ತುರ್ತಾಗಿ ವೆಂಟಿಲೇಟರ್ ಅವಶ್ಯಕತೆ ಇದ್ದು ಯಾವೊಂದು ಆಸ್ಪತ್ರೆಯ ಚಿಕಿತ್ಸೆಯು ನೀಡಲು ಮುಂದಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿರುವ ಅನಾರೋಗ್ಯಪೀಡಿತ ವ್ಯಕ್ತಿಗೆ ಅಲ್ಲು ಸಹ ಐಸಿಯು ವ್ಯವಸ್ಥೆ ಇಲ್ಲ. ಹೀಗಾಗಿ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ನರಳುವಂತಾಗಿದೆ.
Published On - 11:04 am, Tue, 28 July 20




