BIEC ಕೊವಿಡ್ ಸೆಂಟರ್​ಗೆ ಮೊದಲು ಎಂಟ್ರಿ ಕೊಟ್ಟಿದ್ದು ಇವರೇ..!

BIEC ಕೊವಿಡ್ ಸೆಂಟರ್​ಗೆ ಮೊದಲು ಎಂಟ್ರಿ ಕೊಟ್ಟಿದ್ದು ಇವರೇ..!

ಬೆಂಗಳೂರು: ಬಹಳಷ್ಟು ವಿಘ್ನ, ವಿಳಂಬಗಳ ಬಳಿಕ ನಗರದ BIEC ಕೊವಿಡ್​ ಕೇರ್​ ಸೆಂಟರ್​ ಕೊನೆಗೂ ಪ್ರಾರಂಭವಾಗಿದೆ. ಆದರೆ, ಕೊವಿಡ್​ ಸೆಂಟರ್​ಗೆ ಪೇಷಂಟ್​ಗಳು ಬರುವ ಮೊದಲೇ ಎಂಟ್ರಿ ಕೊಟ್ಟಿದ್ದು ಯಾರು ಗೊತ್ತಾಪ್ಪಾ? ನಾಗಪ್ಪಾ! ನಾಗಪ್ಪನ ಎಂಟ್ರಿ ಶುಭನಾ ಅಥವಾ ಆಶುಭನಾ ಅಂತಾ! ಹೌದು, ಸೋಂಕಿತರನ್ನ ಕರೆ ತರುವ ಮೊದಲೇ ಹಾಲ್​ ನಂ. 5ರಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಮಾದವಾರದಲ್ಲಿರುವ BIEC ಕೋವಿಡ್ ಕೇರ್ ಸೆಂಟರ್​ನ ಹಾಲ್ ನಂ5 ರಲ್ಲಿ ನಾಗರಹಾವು ಕಂಡ ಸಿಬ್ಬಂದಿ ಒಂದು ಕ್ಷಣ ಬೆಚ್ಚಿಬಿದ್ದರು. ಆದರೆ, ಇದೆಲ್ಲದರ […]

KUSHAL V

| Edited By:

Jul 28, 2020 | 12:27 PM

ಬೆಂಗಳೂರು: ಬಹಳಷ್ಟು ವಿಘ್ನ, ವಿಳಂಬಗಳ ಬಳಿಕ ನಗರದ BIEC ಕೊವಿಡ್​ ಕೇರ್​ ಸೆಂಟರ್​ ಕೊನೆಗೂ ಪ್ರಾರಂಭವಾಗಿದೆ. ಆದರೆ, ಕೊವಿಡ್​ ಸೆಂಟರ್​ಗೆ ಪೇಷಂಟ್​ಗಳು ಬರುವ ಮೊದಲೇ ಎಂಟ್ರಿ ಕೊಟ್ಟಿದ್ದು ಯಾರು ಗೊತ್ತಾಪ್ಪಾ? ನಾಗಪ್ಪಾ!

ನಾಗಪ್ಪನ ಎಂಟ್ರಿ ಶುಭನಾ ಅಥವಾ ಆಶುಭನಾ ಅಂತಾ! ಹೌದು, ಸೋಂಕಿತರನ್ನ ಕರೆ ತರುವ ಮೊದಲೇ ಹಾಲ್​ ನಂ. 5ರಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಮಾದವಾರದಲ್ಲಿರುವ BIEC ಕೋವಿಡ್ ಕೇರ್ ಸೆಂಟರ್​ನ ಹಾಲ್ ನಂ5 ರಲ್ಲಿ ನಾಗರಹಾವು ಕಂಡ ಸಿಬ್ಬಂದಿ ಒಂದು ಕ್ಷಣ ಬೆಚ್ಚಿಬಿದ್ದರು.

ಆದರೆ, ಇದೆಲ್ಲದರ ಪರಿವೇ ಇಲ್ಲದ ನಾಗಪ್ಪ ತನ್ನ ಪಾಡಿಗೆ ತಾನು ಹಾಯಾಗಿ ಸರಿದಾಡುತ್ತ ಹೊರಟುಹೋದನು. ಇದರಿಂದ ಸ್ವಲ್ಪ ಸಮಾಧಾನಗೊಂಡ ಸಿಬ್ಬಂದಿಗೆ ಕೂಡಲೇ ಕಾಡಿದ ಪ್ರಶ್ನೆ: ಕೊವಿಡ್​ ಸೆಂಟರ್​ ಆರಂಭಕ್ಕೂ ಮೊದಲು ನಾಗಪ್ಪನ ಎಂಟ್ರಿ ಶುಭನಾ ಅಥವಾ ಆಶುಭನಾ ಅಂತಾ!

Follow us on

Related Stories

Most Read Stories

Click on your DTH Provider to Add TV9 Kannada