Cyber Crime: 283 ರೂಪಾಯಿ ಬಟ್ಟೆಗಾಗಿ 4 ಲಕ್ಷ ಹಣ ಕಳೆದುಕೊಂಡ್ರು..
ಬೆಂಗಳೂರು: ಕೊರೊನಾದಿಂದಾಗಿ ಆಚೆ ಹೋಗಲಾಗದೆ ಮನೆಯಲ್ಲೇ ಕೂತಿರುವ ಮಂದಿ ಆನ್ಲೈನ್ ಮೊರೆ ಹೋಗಿದ್ದಾರೆ. ಆಚೆ ಹೋಗಿ ಸೋಂಕು ತಗುಲಿಸಿಕೊಳ್ಳುವುದೇಕೆ ಎಂದು ಬಹುತೇಕರು ಬಟ್ಟೆ, ಊಟ ಎಲ್ಲವನ್ನೂ ಆನ್ಲೈನ್ನಲ್ಲೆ ಬುಕ್ ಮಾಡಿ ಖರೀದಿಸುತ್ತಿದ್ದಾರೆ. ಆದರೆ ಇದರ ನಡುವೆ ದಿನದಿಂದ ದಿನಕ್ಕೆ ಸೈಬರ್ ಖದೀಮರ ಹಾವಳಿ ಹೆಚ್ಚಾಗ್ತಿದೆ. ಆನ್ಲೈನ್ ಶಾಪಿಂಗ್ ಮೇಲೆ ಸೈಬರ್ ಕಳ್ಳರ ಕಣ್ಣು ಬಿದ್ದಿದೆ. ಮಹಿಳೆಯೊಬ್ಬರು 283 ರೂಪಾಯಿ ಬಟ್ಟೆಗಾಗಿ 4 ಲಕ್ಷ ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ರಿಂಕಿ ಠಾಕೂರ್ ಎಂಬುವವರು ಕ್ಲಬ್ ಫ್ಯಾಕ್ಟರಿಯಲ್ಲಿ […]

ಬೆಂಗಳೂರು: ಕೊರೊನಾದಿಂದಾಗಿ ಆಚೆ ಹೋಗಲಾಗದೆ ಮನೆಯಲ್ಲೇ ಕೂತಿರುವ ಮಂದಿ ಆನ್ಲೈನ್ ಮೊರೆ ಹೋಗಿದ್ದಾರೆ. ಆಚೆ ಹೋಗಿ ಸೋಂಕು ತಗುಲಿಸಿಕೊಳ್ಳುವುದೇಕೆ ಎಂದು ಬಹುತೇಕರು ಬಟ್ಟೆ, ಊಟ ಎಲ್ಲವನ್ನೂ ಆನ್ಲೈನ್ನಲ್ಲೆ ಬುಕ್ ಮಾಡಿ ಖರೀದಿಸುತ್ತಿದ್ದಾರೆ. ಆದರೆ ಇದರ ನಡುವೆ ದಿನದಿಂದ ದಿನಕ್ಕೆ ಸೈಬರ್ ಖದೀಮರ ಹಾವಳಿ ಹೆಚ್ಚಾಗ್ತಿದೆ.
ಆನ್ಲೈನ್ ಶಾಪಿಂಗ್ ಮೇಲೆ ಸೈಬರ್ ಕಳ್ಳರ ಕಣ್ಣು ಬಿದ್ದಿದೆ. ಮಹಿಳೆಯೊಬ್ಬರು 283 ರೂಪಾಯಿ ಬಟ್ಟೆಗಾಗಿ 4 ಲಕ್ಷ ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ರಿಂಕಿ ಠಾಕೂರ್ ಎಂಬುವವರು ಕ್ಲಬ್ ಫ್ಯಾಕ್ಟರಿಯಲ್ಲಿ ಆನ್ಲೈನ್ ಮೂಲಕ ಬಟ್ಟೆ ಬುಕ್ ಮಾಡಿದ್ದರು. ಈ ವೇಳೆ ಆಕೆ ಬುಕ್ ಮಾಡಿದ್ದ ಎಲ್ಲದಕ್ಕೂ ಸಕ್ಸಸ್ ಫುಲ್ ಎಂಬ ಮೆಸೇಜ್ ಬಂದಿತ್ತು. ಒಂದು ವಾರದ ನಂತರ ಬಟ್ಟೆ ಡಿಲವರಿ ಆಗಿದೆ ಎಂದು ಮೆಸೆಜ್ ಬಂದಿದೆ. ಆದರೆ ಚೆಕ್ ಮಾಡಿದಾಗ ಬುಕ್ ಮಾಡಿದ್ದ ಬಟ್ಟೆಯೊಂದು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ರಿಂಕಿ ಠಾಕೂರ್ ಕಸ್ಟಮರ್ ಕೇರ್ಗೆ ಕರೆ ಮಾಡಿದ್ದಾರೆ.
ಅಕೌಂಟ್ನಲ್ಲಿದ್ದ ಹಣ ಮಂಗಮಾಯ ಆಗ ವ್ಯಕ್ತಿಯೋರ್ವ ನಿಮ್ಮ ಹಣ ರೀಫಂಡ್ ಆಗುತ್ತೆ ಅಂದಿದ್ದಾನೆ. ರೀಫಂಡ್ಗಾಗಿ ನಿಮ್ಮ ಕೆಲ ಡೀಟೇಲ್ಸ್ ಹಾಕಬೇಕು ಇದು ಕ್ಲಬ್ ಫ್ಯಾಕ್ಟರಿಯಲ್ಲಿರುವ ಪ್ರೊಸೀಜರ್ ಅಂದಿದ್ದಾನೆ. ಇದಕ್ಕೆ ಒಪ್ಪಿದ್ದ ರಿಂಕಿ ಠಾಕೂರ್, ಡೀಟೇಲ್ಸ್ ಹಾಕಲು ಮುಂದಾಗಿದ್ದಾರೆ. ಎನಿ ಡೆಸ್ಕ್ ಡೌನ್ಲೌಡ್ ಮಾಡಿಕೊಳ್ಳಿ ನಿಮ್ಮ ಅಕೌಂಟಾ ನಂಬರ್ ಕೇಳುತ್ತೆ ಅದನ್ನು ಹಾಕಿ ಎಂದಿದ್ದಾರೆ.
ವ್ಯಕ್ತಿ ಹೇಳಿದ ಮಾತನ್ನು ಕೇಳಿದ ರಿಂಕಿ ಠಾಕೂರ್ ಅಕೌಂಟ್ ನಂಬರ್ ಹಾಕುತ್ತಿದ್ದಂತೆ ಖಾತೆಯಲ್ಲಿದ್ದ ಎಲ್ಲಾ ಹಣ ಮಾಯವಾಗಿದೆ. ಅಕೌಂಟ್ ಹ್ಯಾಕ್ ಮಾಡಿ ಖದೀಮರು ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
Published On - 9:48 am, Tue, 28 July 20




