ಇನ್ಮುಂದೆ, ಮನೆಯಲ್ಲಿ ಮೃತಪಟ್ಟವರಿಗೂ ಕೊವಿಡ್ ಟೆಸ್ಟ್
ಬೆಂಗಳೂರು: ನಗರದಲ್ಲಿ ನಾನ್ ಕೊವಿಡ್ ಕಾರಣಗಳಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿವಿ9 ಇದರ ಮೇಲೆ ಬೆಳಕು ಚೆಲ್ಲಿತ್ತು. ಇದೀಗ, ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮನೆಯಲ್ಲಿ ಮೃತಪಟ್ಟವರಿಗೂ ಕೊವಿಡ್ ಟೆಸ್ಟ್ ಮಾಡಲು ನಿರ್ಧರಿಸಿದ್ದಾರೆ. ಸೋಂಕಿನ ಲಕ್ಷಣ ಅಥವಾ ಇತರೆ ಸಮಸ್ಯೆಯಿಂದ ವ್ಯಕ್ತಿ ಮೃತಪಟ್ಟಿದ್ದರೆ ಅವರಿಗೂ ಕೊವಿಡ್ ಪರೀಕ್ಷೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ಹಾಗಾಗಿ, ಮನೆಯಲ್ಲಿ ಮೃತಪಟ್ಟವರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಕುಟುಂಬದವರಿಗೆ ಸೂಚಿಸಿದೆ. ಮಾಹಿತಿ ದೊರೆತ […]
ಬೆಂಗಳೂರು: ನಗರದಲ್ಲಿ ನಾನ್ ಕೊವಿಡ್ ಕಾರಣಗಳಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿವಿ9 ಇದರ ಮೇಲೆ ಬೆಳಕು ಚೆಲ್ಲಿತ್ತು. ಇದೀಗ, ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮನೆಯಲ್ಲಿ ಮೃತಪಟ್ಟವರಿಗೂ ಕೊವಿಡ್ ಟೆಸ್ಟ್ ಮಾಡಲು ನಿರ್ಧರಿಸಿದ್ದಾರೆ.
ಸೋಂಕಿನ ಲಕ್ಷಣ ಅಥವಾ ಇತರೆ ಸಮಸ್ಯೆಯಿಂದ ವ್ಯಕ್ತಿ ಮೃತಪಟ್ಟಿದ್ದರೆ ಅವರಿಗೂ ಕೊವಿಡ್ ಪರೀಕ್ಷೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ಹಾಗಾಗಿ, ಮನೆಯಲ್ಲಿ ಮೃತಪಟ್ಟವರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಕುಟುಂಬದವರಿಗೆ ಸೂಚಿಸಿದೆ.
ಮಾಹಿತಿ ದೊರೆತ ಕೂಡಲೇ ವೈದ್ಯರ ತಂಡ ಮೃತರ ಮನೆಗೆ ಬಂದು ಗಂಟಲು ದ್ರವ ಸಂಗ್ರಹಿಸಲಿದ್ದಾರೆ. ಫಲಿತಾಂಶ ಬಂದ ನಂತರ ಪಾಸಿಟಿವ್ ಇದ್ದರೆ ಕುಟುಂಬಸ್ಥರನ್ನ ಕ್ವಾರಂಟೈನ್ ಮಾಡಲಾಗುವುದು. ಆದರೆ, ಟೆಸ್ಟ್ ವರದಿ ಬರುವವರೆಗೂ ಕುಟುಂಬಸ್ಥರು ಕಾಯುವ ಅವಶ್ಯಕತೆ ಇಲ್ಲ. ಸ್ವ್ಯಾಬ್ ಪಡೆದ ತಕ್ಷಣ ಮೃತರ ಅಂತ್ಯಸಂಸ್ಕಾರ ನೆರವೇರಿಸಬಹುದು ಎಂದು ಬಿಬಿಎಂಪಿಯ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published On - 10:42 am, Sun, 19 July 20