ಖೋಟಾ ನೋಟು ನೀಡಿ ವಂಚನೆಗೆ ಯತ್ನಿಸಿದ್ದ ಗ್ಯಾಂಗ್ ಅಂದರ್​

|

Updated on: Feb 22, 2020 | 11:35 AM

ಬೆಳಗಾವಿ: ಇತ್ತೀಚೆಗೆ ಖೋಟಾ ನೋಟು ದಂಧೆಕೋರರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಹುಕ್ಕೇರಿ ತಾಲೂಕಿನ ಕಮತನೂರ ಬಳಿ ನಕಲಿ ನೋಟು ನೀಡಿ ವಂಚಿಸಲು ಹೋರಟಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಮರ್ ಅಂಬೇಕರ(27), ಧೈರ್ಯಶೀಲ ಪಾಟೀಲ್(42), ಬಾಬಾಸೋ ವಸಂತ ಪಾಟೀಲ(31), ರಾಜೇಶ ಮೋಹಿತೆ(48) ಹಾಗೂ ಅಶೋಕ ತೇಲಿ(50) ಬಂಧಿತ ಆರೋಪಿಗಳು. ಒಂದು ಲಕ್ಷ ರೂಪಾಯಿ ಅಸಲಿ ನೋಟಿಗೆ ಮೂರು ಪಟ್ಟು ನಕಲಿ ನೋಟು ನೀಡಿ ಜನಸಾಮಾನ್ಯರನ್ನು ಖದೀಮರು ವಂಚಿಸುತ್ತಿದ್ದರು. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ […]

ಖೋಟಾ ನೋಟು ನೀಡಿ ವಂಚನೆಗೆ ಯತ್ನಿಸಿದ್ದ ಗ್ಯಾಂಗ್ ಅಂದರ್​
Follow us on

ಬೆಳಗಾವಿ: ಇತ್ತೀಚೆಗೆ ಖೋಟಾ ನೋಟು ದಂಧೆಕೋರರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಹುಕ್ಕೇರಿ ತಾಲೂಕಿನ ಕಮತನೂರ ಬಳಿ ನಕಲಿ ನೋಟು ನೀಡಿ ವಂಚಿಸಲು ಹೋರಟಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಮರ್ ಅಂಬೇಕರ(27), ಧೈರ್ಯಶೀಲ ಪಾಟೀಲ್(42), ಬಾಬಾಸೋ ವಸಂತ ಪಾಟೀಲ(31), ರಾಜೇಶ ಮೋಹಿತೆ(48) ಹಾಗೂ ಅಶೋಕ ತೇಲಿ(50) ಬಂಧಿತ ಆರೋಪಿಗಳು.

ಒಂದು ಲಕ್ಷ ರೂಪಾಯಿ ಅಸಲಿ ನೋಟಿಗೆ ಮೂರು ಪಟ್ಟು ನಕಲಿ ನೋಟು ನೀಡಿ ಜನಸಾಮಾನ್ಯರನ್ನು ಖದೀಮರು ವಂಚಿಸುತ್ತಿದ್ದರು. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ಡಿಸಿಬಿ ಪೊಲೀಸರು ಐವರು ವಂಚಕರನ್ನು ಬಂಧಿಸಿದ್ದಾರೆ. ಆರೋಪಿಗಳು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯವರು ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ 12ಸಾವಿರ ರೂ. ಅಸಲಿ ನೋಟುಗಳು ಮತ್ತು 23ಲಕ್ಷ 88ಸಾವಿರ ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.