ಜೋಡೋ ಯಾತ್ರೆಗೆ ಬಂದಿದ್ದ ಖಾಸಗಿ ಬಸ್​ ಹರಿದು ಕೈ ಕಾರ್ಯಕರ್ತ ಸಾವು

| Updated By: ವಿವೇಕ ಬಿರಾದಾರ

Updated on: Oct 10, 2022 | 11:05 PM

ಭಾರತ್ ಜೋಡೋ ಯಾತ್ರೆಗೆ ಕಾರ್ಯಕರ್ತರನ್ನು ಕರೆ ತಂದಿದ್ದ ಖಾಸಗಿ ಬಸ್ ಡಿಕ್ಕಿಯಾಗಿ, ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಹಿರಿಯೂರು ಪಟ್ಟಣದ ಟಿ.ಬಿ.ವೃತ್ತದ ಬಳಿ ನಡೆದಿದೆ.

ಜೋಡೋ ಯಾತ್ರೆಗೆ ಬಂದಿದ್ದ ಖಾಸಗಿ ಬಸ್​ ಹರಿದು ಕೈ ಕಾರ್ಯಕರ್ತ ಸಾವು
Follow us on

ಚಿತ್ರದುರ್ಗ: ಭಾರತ್ ಜೋಡೋ ಯಾತ್ರೆಗೆ ಕಾರ್ಯಕರ್ತರನ್ನು ಕರೆ ತಂದಿದ್ದ ಖಾಸಗಿ ಬಸ್ ಡಿಕ್ಕಿಯಾಗಿ, ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಹಿರಿಯೂರು ಪಟ್ಟಣದ ಟಿ.ಬಿ.ವೃತ್ತದ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ರಮೇಶ(38) ಮೃತ ದುರ್ದೈವಿ. ಖಾಸಗಿ ಬಸ್​ ಭಾರತ ಜೋಡೋ ಯಾತ್ರೆಗೆ ಕಾರ್ಯಕರ್ತನನ್ನು ಕರೆದುಕೊಂಡು ಬಂದಿತ್ತು. ಸಾವನ್ನಪ್ಪಿದ ರಮೇಶ ಕೂಡ ಜೋಡೋ ಯಾತ್ರೆಯಲ್ಲಿ ಭಾಗವಿಸಲೆಂದು ಆಗಮಿಸಿದ್ದರು. ರಮೇಶ ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಹಿರಿಯೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿದ್ಯುತ್​ ತಂತಿ ತಗುಲಿ ಗೃಹಿಣಿ ಸಾವು

ತುಮಕೂರು:  ವಿದ್ಯುತ್​ ತಂತಿ ತಗುಲಿ ಗೃಹಿಣಿ ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿ  ಗ್ರಾಮದಲ್ಲಿ  ನಡೆದಿದೆ.  ಮಂಗಳ ಗೌರಮ್ಮ(26) ಮೃತ ಮಹಿಳೆ. ಕೆಲ ದಿನಗಳಿಂದ ಕಡಿತಗೊಂಡು ಹೊಲದಲ್ಲಿ ಕಡಿತಗೊಂಡು ವಿದ್ಯುತ್​ ತಂತಿ ನೇತಾಡುತ್ತಿತ್ತು.  ಬೆಸ್ಕಾಂಗೆ ದೂರು ನೀಡಿದ್ದರೂ ಕ್ರಮಗೊಂಡಿಲ್ಲ ಎಂದು ಗ್ರಾಮಸ್ಥರು  ಆರೋಪಿಸಿದ್ದಾರೆ. ಕುಟುಂಬಸ್ಥರು ಬೆಸ್ಕಾಂ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.

ಲಾರಿ ಚಾಸಿ  ತಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಲಾರಿ ಚಾಸಿ ತಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿಯ
ಉದ್ಯಾವರ ಸೇತುವೆ ಬಳಿ ನಡೆದಿದೆ.  ಕಟಪಾಡಿಯ ಮೂಡಬೆಟ್ಟು ನಿವಾಸಿ ಮಹಮ್ಮದ್ ರಫೀಕ್ ಬಾವಾ ಮೃತ ದುರ್ದೈವಿ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಸ್ಥಳ  ತಪಾಸಣೆ ನಡೆಸಿದ್ದಾರೆ.

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಬಳ್ಳಾರಿ: ವ್ಯಕ್ತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ  ಬಳ್ಳಾರಿಯ ರೈಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿ ಜನನಿ ಬಿಡ ಪ್ರದೇಶದಲ್ಲೇ ಪೆಟ್ರೋಲ್ ಸುರಿದುಕೊಂಡು ಆಹತ್ಮಹತ್ಯಗೆ ಯತ್ನಿಸಿದ್ದಾನೆ. ಇದರಿಂದ ವ್ಯಕ್ತಿ ಭಾಗಶಃ ಸುಟ್ಟು ಕರಕಲಾಗಿದ್ದಾನೆ. ಕೂಡಲೇ ಬೆಂಕಿ ನಂದಿಸಿದ ಸ್ಥಳೀಯರು, ವಿಮ್ಸ್ ಆಸ್ಪತ್ರೆಗೆ  ದಾಖಲಿಸಿದ್ದಾರೆ. ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಬ್ರೂಸ್‌ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಹದಿನಾರು ಕುರಿಗಳ ಸಾವು 

ಹಾವೇರಿ: ವಿಷಪೂರಿತ ಆಹಾರ ಸೇವಿಸಿ ಹದಿನಾರು ಕುರಿಗಳು ಸಾವನ್ನಪ್ಪಿರುವ ಘಟನೆ ರಟ್ಟೀಹಳ್ಳಿ ತಾಲೂಕಿನ ದೊಡ್ಡಗುಬ್ಬಿ ಗ್ರಾಮದ ಬಳಿ ನಡೆದಿದೆ. ಮೃತ ಕುರಿಗಳು ಸಂಚಾರಿ ಕುರುಬರಾಗಿರೋ ಚಿಕ್ಕೋಡಿ ಮೂಲದ ಕುರಿಗಾಯಿ ಹುಲಿಯಪ್ಪ ಮದ್ನಳ್ಳಿ ಎಂಬುವರಿಗೆ ಸೇರಿವೆ. ಕುರಿಗಳು ದೊಡ್ಡಗುಬ್ಬಿ ಗ್ರಾಮದ ಬಳಿ ಮೇಯಲು ಹೋಗಿದ್ದ ವೇಳೆ ವಿಷಪೂರಿತ ಆಹಾರ ಸೇವಿಸಿ ಸಾವನ್ನಪ್ಪಿವೆ. ಎರಡೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಕುರಿಗಳು ಸಾವನ್ನಪ್ಪಿದ್ದರಿಂದ ಕುರಿಗಾಯಿ ಕಂಗಾಲಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಹಲವು ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Mon, 10 October 22