ಖಾಜಿ ರಸ್ತೆಯಲ್ಲಿ ಬೇರು ಸಮೇತ ಧರೆಗೆ ಉರುಳಿದ ಹೆಮ್ಮರ..

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೆರಡು ದಿನದಿಂದ ಮಳೆಯ ಪ್ರತಾಪ ಜೋರಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಬೃಹದಾಕಾರದ ಮರವೊಂದು ಧರೆಗೆ ಉರುಳಿದೆ. ಬೇರು ಸಹಿತ ಬೃಹತ್ ಮರ ಧರೆಗೆ ಉರುಳಿದೆ. ಬಸವನಗುಡಿಯ ಖಾಜಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮರ ಬಿದ್ದಿರೋದ್ರಿಂದ ಖಾಜಿ ರಸ್ತೆ ಬಂದ್ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಅನ್ಯ ಮಾರ್ಗದ ಮೊರೆ ಹೋಗಿದ್ದಾರೆ. ಬೇರೆ ಬೇರೆ ರಸ್ತೆಗಳನ್ನು ಬಳಸಿ ಪಯಾಣ  ಮುಂದುವರಿಸಿದ್ದಾರೆ. ಮರ ಬಿದ್ದಿರೋದ್ರಿಂದ ಇಡೀ ಏರಿಯಾದಲ್ಲಿ ವಿದ್ಯುತ್ ಸಂಪರ್ಕ ಕಟ್ […]

ಖಾಜಿ ರಸ್ತೆಯಲ್ಲಿ ಬೇರು ಸಮೇತ ಧರೆಗೆ ಉರುಳಿದ ಹೆಮ್ಮರ..
Updated By: ಸಾಧು ಶ್ರೀನಾಥ್​

Updated on: Sep 30, 2020 | 11:02 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೆರಡು ದಿನದಿಂದ ಮಳೆಯ ಪ್ರತಾಪ ಜೋರಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಬೃಹದಾಕಾರದ ಮರವೊಂದು ಧರೆಗೆ ಉರುಳಿದೆ.

ಬೇರು ಸಹಿತ ಬೃಹತ್ ಮರ ಧರೆಗೆ ಉರುಳಿದೆ. ಬಸವನಗುಡಿಯ ಖಾಜಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮರ ಬಿದ್ದಿರೋದ್ರಿಂದ ಖಾಜಿ ರಸ್ತೆ ಬಂದ್ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಅನ್ಯ ಮಾರ್ಗದ ಮೊರೆ ಹೋಗಿದ್ದಾರೆ. ಬೇರೆ ಬೇರೆ ರಸ್ತೆಗಳನ್ನು ಬಳಸಿ ಪಯಾಣ  ಮುಂದುವರಿಸಿದ್ದಾರೆ.

ಮರ ಬಿದ್ದಿರೋದ್ರಿಂದ ಇಡೀ ಏರಿಯಾದಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಬಲಿಷ್ಠವಾಗಿ ಬೆಳೆದಿದ್ದ ಹೆಮ್ಮರ ನನ್ನ ಆಯಸ್ಸು ಇಷ್ಟೇ ಅಂತ ಮಂಡಿ ಊರಿ ಧರೆಗೆ ತನ್ನನ್ನು ಸಮರ್ಪಿಸಿಕೊಂಡಂತೆ ಘಟನಾಸ್ಥಳದ ದೃಶ್ಯಗಳಿವೆ. ಸದ್ಯ ಘಟನೆಯಿಂದ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.