ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕೂದಲಿಗೆ ಕತ್ತರಿ! ಇದು ಹೊಸಾ ಪನಿಶ್​ಮೆಂಟ್​?

ಕಲರ್ಸ್​ ಕನ್ನಡ ವಾಹಿನಿ ಇಂದು ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೋ ಒಂದನ್ನು ಪೋಸ್ಟ್​ ಮಾಡಿದೆ. ಈ ಪ್ರೋಮೋದಲ್ಲಿ ಶಮಂತ್​ ಅವರ ಚಿನ್ನದಂಥಾ ಕೂದಲನ್ನು ಮಂಜು ಪಾವಗಡ ಕತ್ತರಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕೂದಲಿಗೆ ಕತ್ತರಿ! ಇದು ಹೊಸಾ ಪನಿಶ್​ಮೆಂಟ್​?
ಶಮಂತ್​ ಗೌಡ
Edited By:

Updated on: Mar 23, 2021 | 12:34 PM

ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಸೀಸನ್​ 8ರ ವೇದಿಕೆ ಏರಿದಾಗ ಅವರ ಕೂದಲನ್ನು ನೋಡಿ ಕಿಚ್ಚ ಸುದೀಪ್​ ಅಚ್ಚರಿ ವ್ಯಕ್ತಪಡಿಸಿದ್ದರು. ಇದು ವಿಗ್​ ಅಥವಾ ನಿಜವಾದ ಕೂದಲಾ ಎಂದು ಪ್ರಶ್ನೆ ಮಾಡಿದ್ದರು. ಬಿಗ್​ ಬಾಸ್​ ಮನೆ ಸೇರಿದ ನಂತರವೂ ಶಮಂತ್​ ತಮ್ಮ ಕೂದಲು ಹಾಗೂ ಗಡ್ಡದ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಆದರೆ, ಈಗ ಅವರ ಕೂದಲಿಗೆ ಕತ್ತರಿ ಬಿದ್ದಿದೆ! ಇದು ಶಮಂತ್​ಗೆ ನೀಡಿದ ಹೊಸ ಪನಿಶ್​ಮೆಂಟಾ ಎಂದು ಪ್ರೇಕ್ಷಕರು ಕೇಳಿಕೊಳ್ಳುತ್ತಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಇಂದು ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೋ ಒಂದನ್ನು ಪೋಸ್ಟ್​ ಮಾಡಿದೆ. ಈ ಪ್ರೋಮೋದಲ್ಲಿ ಶಮಂತ್​ ಅವರ ಚಿನ್ನದಂಥಾ ಕೂದಲನ್ನು ಮಂಜು ಪಾವಗಡ ಕತ್ತರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ನೀನು ಪೂರ್ತಿ ಕೂದಲನ್ನೇ ತೆಗೆದು ಹಾಕುತ್ತೀಯಾ ಎಂದು ಶುಭಾ ಪೂಂಜಾ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಮಂಜು, ಕೂದಲು ಕಟ್​ ಮಾಡಿಸಿಕೊಳ್ಳುವವನೇ ಸುಮ್ಮನಿದ್ದಾನೆ, ನಿಮ್ಮದೇನು? ನಿಜ ಹೇಳಬೇಕೆಂದರೆ ನನಗೂ ಇದು ಹೊಸತು ಎಂದು ಹೇಳಿದ್ದಾರೆ. ಕೊನೆಯಲ್ಲಿ ಮಾತನಾಡಿರುವ ಅರವಿಂದ್​, ಮಂಜು ಒಂದೇ ಗಂಟೆಗೆ ಮಶ್ರೂಂ ಆಗಿ ಬಿಟ್ಟರು ಎಂದು ನಕ್ಕಿದ್ದಾರೆ……

ಇನ್ನು, ಶಮಂತ್​ಗೆ ಬಿಗ್​ ಬಾಸ್​ ಶಿಕ್ಷೆ ನೀಡಿದೆಯಾ ಎನ್ನುವ ಅನುಮಾನ ಕೂಡ ಮೂಡಿದೆ. ಕಳೆದ ವಾರ ಶಮಂತ್​ ನೇರವಾಗಿ ನಾಮಿನೇಟ್​ ಆಗಬೇಕು ಇಲ್ಲವೇ ಮನೆ ಮಂದಿಯೆಲ್ಲ ಬೆಡ್​ರೂಂ ಬಿಟ್ಟುಕೊಡಬೇಕು ಎಂದು ಹೇಳಿದ್ದರು. ಆದರೆ, ಶಮಂತ್​ ಅವರನ್ನು ಸೇವ್​ ಮಾಡಲು ಹೋಗಿ ಮನೆ ಮಂದಿಯೆಲ್ಲ ಕಷ್ಟ ಅನುಭವಿಸಿದ್ದರು. ಈಗ ಈವಾರವೂ ಅದೇ ರೀತಿ ಶಮಂತ್​ಗೆ ಏನಾದರೂ ಪನಿಶ್​ಮೆಂಟ್​ ನೀಡಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ…..

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಗೀತಾಗೆ ಲವ್​ ಆಗಿದ್ದು ಯಾರ ಮೇಲೆ? ಮನೆ ಬಿಟ್ಟು ಹೋಗುವಾಗ ಕಿಚ್ಚನ ಎದುರು ರಟ್ಟಾಯ್ತು ಗುಟ್ಟು

Published On - 7:03 pm, Mon, 22 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us