BBK8: ‘ಲ್ಯಾಗ್​ ಮಂಜು ಅಲ್ಲ ಬ್ಯಾಕಪ್​ ಮಂಜು!’ ಹುಡುಗಿ ವಿಚಾರಕ್ಕೆ ಬಿತ್ತು ಹೊಸ ಹೆಸರು

ಬಿಗ್​ ಬಾಸ್​ ಮನೆಯಲ್ಲಿ 9ನೇ ದಿನ ಬೆಳಗ್ಗೆ ಮಂಜು ದಿವ್ಯಾ ಉರುಡುಗ ಬಳಿ ಎಣ್ಣೆ ಹಚ್ಚಿಸಿಕೊಳ್ಳುತ್ತಾ ಕೂತಿದ್ದರು. ಆಗ ದಿವ್ಯಾ ಸುರೇಶ್​ ಏಕಾಏಕಿ ಎಂಟ್ರಿ ಕೊಟ್ಟಿದ್ದರು. ಇದನ್ನು ನೋಡಿದ ಮಂಜು ಸ್ವಲ್ಪ ಗಲಿಬಿಲಿಗೊಂಡಂತೆ ಕಂಡರು!

BBK8: ಲ್ಯಾಗ್​ ಮಂಜು ಅಲ್ಲ ಬ್ಯಾಕಪ್​ ಮಂಜು! ಹುಡುಗಿ ವಿಚಾರಕ್ಕೆ ಬಿತ್ತು ಹೊಸ ಹೆಸರು
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​

Updated on: Mar 09, 2021 | 10:38 PM

ದಿವ್ಯಾ ಉರುಡುಗ ಜತೆ ಮಂಜು ಫ್ಲರ್ಟ್​ ಮಾಡಿದ್ದ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮಂಜು ಮಾಡಿದ ಫ್ಲರ್ಟ್ ನೋಡಿ ದಿವ್ಯಾ ಸುರೇಶ್​ ಮುಖ ತಿರುಗಿಸಿಕೊಂಡಿದ್ದರು. ಇಷ್ಟು ದಿನ ದಿವ್ಯಾ ಸುರೇಶ್​ ಕಡೆಗೆ ಆಸಕ್ತಿ ತೋರಿಸುತ್ತಿದ್ದ ಮಂಜು ಈಗ ನಿಧಾನವಾಗಿ ದಿವ್ಯಾ ಉರುಡುಗ ಕಡೆಗೆ ವಾಲುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದೇ ವಿಚಾರದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಹೀಗಾಗಿ, ಲ್ಯಾಗ್​ ಮಂಜು ಹೋಗಿ ಬ್ಯಾಕಪ್​ ಮಂಜು ಎನ್ನುವ ಹೊಸ ಹೆಸರು ನಾಮಕರಣಗೊಂಡಿದೆ!

ಬಿಗ್​ ಬಾಸ್​ ಮನೆಯಲ್ಲಿ 9ನೇ ದಿನ ಬೆಳಗ್ಗೆ ಮಂಜು ದಿವ್ಯಾ ಉರುಡುಗ ಬಳಿ ಎಣ್ಣೆ ಹಚ್ಚಿಸಿಕೊಳ್ಳುತ್ತಾ ಕೂತಿದ್ದರು. ಆಗ ದಿವ್ಯಾ ಸುರೇಶ್​ ಏಕಾಏಕಿ ಎಂಟ್ರಿ ಕೊಟ್ಟಿದ್ದರು. ಇದನ್ನು ನೋಡಿದ ಮಂಜು ಸ್ವಲ್ಪ ಗಲಿಬಿಲಿಗೊಂಡಂತೆ ಕಂಡರು! ದಿವ್ಯಾ ಸುರೇಶ್​, ನೀನು ಸ್ನಾನಕ್ಕೆ ಹೋಗ್ತೀನಿ ಅಂದ್ಯಲ್ಲ. ಇದಕ್ಕಾಗಿ ನಾನು ಈ ದಿವ್ಯಾ ಹತ್ತಿರ ಎಣ್ಣೆ ಹಚ್ಚಿಸಿಕೊಳ್ತಾ ಇದ್ದೆ. ಈಗ ಎಣ್ಣೆ ಹಚ್ಚಿಸಿಕೊಂಡು ನಿನ್ನ ಜತೆ ಸ್ನಾನಕ್ಕೆ ಬರೋಣ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ.

ಆಗ ಬಂದ ರಘು, ಮಂಜು, ದಿವ್ಯಾ ಸುರೇಶ್​ ಇಲ್ಲ ಎನ್ನುವ ಕಾರಣಕ್ಕೆ ದಿವ್ಯಾ ಉರುಡುಗ ಬಳಿ ಎಣ್ಣೆ ಮಸಾಜ್​ ಮಾಡಿಸಿಕೊಳ್ಳುತ್ತಿದ್ದಾರೆ. ಈತ ಲ್ಯಾಗ್​ ಮಂಜ ಅಲ್ಲ ಬ್ಯಾಕಪ್​ ಮಂಜ ಎಂದು ಹೊಸ ಹೆಸರು ಇಡಬೇಕು ಎಂದರು. ಇದನ್ನು ಕೇಳಿದವರು ಮನೆಯವರು ನಕ್ಕರು.

ಮಂಜು ಮೇಲೆ ದಿವ್ಯಾಗೆ ಏಕಿಷ್ಟು ಲವ್​?
ದಿವ್ಯಾ ಶಾಲೆಗೆ ಹೋಗುತ್ತಿದ್ದಾಗ ಅವರಿಗೆ ಮಂಜುನಾಥ್​ ಅಂತ ಒಬ್ಬ ಅತ್ಯುತ್ತಮ ಫ್ರೆಂಡ್ ಇದ್ದನಂತೆ. ಅವನ ಜೊತೆ ಈಗ ದಿವ್ಯಾ ಹೆಚ್ಚು ಸಂಪರ್ಕ ಇಟ್ಟುಕೊಂಡಿಲ್ಲ. ಆದರೆ ಬಾಲ್ಯದಲ್ಲಿ ಅವರಿಬ್ಬರ ನಡುವೆ ಸ್ನೇಹ ಗಟ್ಟಿಯಾಗಿತ್ತು.

‘ಅವನು ದೇವಸ್ಥಾನದಲ್ಲಿ ಪೂಜೆ ಮಾಡ್ತಾ ಇದ್ದ. ನನಗೆ ಹುಡುಗರ ಜೊತೆ ಒಳ್ಳೆಯ ಬಾಂಡಿಂಗ್ ಇರುತ್ತಿತ್ತು. ಅದೇ ಥರ ಅವನ ಜೊತೆಗೂ ಇರುತ್ತಿದ್ದೆ. ತುಂಬ ಕಾಮಿಡಿ ಮಾಡುತ್ತಿದ್ದ. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ. ಅವನ ಹೆಸರನ್ನು ನಾನು ಮಂಜ್ ಎಂದು ಕರೆಯುತ್ತಿದ್ದೆ. ಕ್ಲಾಸ್‌ ಅಲ್ಲಿ ಎದ್ದು ನಿಂತಾಗ ನಾನು ಅವನ ಕೆಳಗೆ ಕೈವಾರ ಇಟ್ಟುಬಿಡುತ್ತಿದ್ದೆ. ನನ್ನ ಲೈಫ್‌ನಲ್ಲಿ ಮಂಜುನಾಥ್ ಅನ್ನೋರು ತುಂಬ ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತಾರೆ. ಅವರ ಮೇಲೆ ಪ್ರೀತಿ ಉಕ್ಕಿ ಬರುತ್ತೆ ನಂಗೆ’ ಎಂದು ದಿವ್ಯಾ ಸುರೇಶ್‌ ಹೇಳಿದ್ದರು.

ಇದನ್ನೂ ಓದಿ: Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?