ಶಮಂತ್​ ನಿಮ್ಮ ಕಂಡ್ರೆ ತುಂಬಾ ಇಷ್ಟ… ಬಿಗ್​ ಬಾಸ್​ ಮನೆಯಲ್ಲಿ ಮೊದಲ ಬಾರಿ ಮೌನ ಮುರಿದ ವೈಷ್ಣವಿ ಗೌಡ

ಒಂದು ಕಡೆ ಮಸಿ ಇಡಲಾಗುತ್ತದೆ. ಪ್ರತೀ ಸ್ಪರ್ಧಿಯೂ ಗೇಮ್​ ರದ್ದಾಗಲು ಕಾರಣ ಯಾರು ಎಂದು ಗುರುತಿಸಿ ಅವರಿಗೆ ಮಸಿ ಬಳಿಯಬೇಕು. ವೈಷ್ಣವಿ ಗೌಡ ಪಾಳಿ ಬಂದಾಗ ಅವರು ಶಮಂತ್​ಗೆ ಮಸಿ ಬಳಿಯುವ ನಿರ್ಧಾರಕ್ಕೆ ಬಂದರು.

ಶಮಂತ್​ ನಿಮ್ಮ ಕಂಡ್ರೆ ತುಂಬಾ ಇಷ್ಟ... ಬಿಗ್​ ಬಾಸ್​ ಮನೆಯಲ್ಲಿ ಮೊದಲ ಬಾರಿ ಮೌನ ಮುರಿದ ವೈಷ್ಣವಿ ಗೌಡ
ಬ್ರೋ ಗೌಡ- ವೈಷ್ಣವಿ ಗೌಡ
Edited By:

Updated on: Mar 12, 2021 | 7:50 AM

ಬಿಗ್​ ಬಾಸ್​ ಎರಡನೇ ವಾರದಲ್ಲಿ ನೀಡಲಾಗಿದ್ದ ಕಠಿಣ ಟಾಸ್ಕ್ ​ಅನ್ನು ಯಶಸ್ವಿಗೊಳಿಸಲು ಮನೆಯ ಸದಸ್ಯರು ವಿಫಲರಾಗಿದ್ದರು. ಇದಕ್ಕೆ ಮನೆ ಮಂದಿಗೆ ಬಿಗ್​ ಬಾಸ್​ ಶಿಕ್ಷೆ ಕೂಡ ನೀಡಿದೆ. ಕನ್ನಡ ಹಾಡಿನ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ಮುಂಜಾನೆ ಆರಂಭವಾಗುತ್ತದೆ. ಆದರೆ, ಬಿಗ್​ ಬಾಸ್​ ಮನೆಯಲ್ಲಿ 11ನೇ ದಿನ ಯಾವುದೇ ಹಾಡು ಪ್ಲೇ ಆಗಿಲ್ಲ. ಇದನ್ನು ನೋಡಿ ಮನೆ ಮಂದಿ ತುಂಬಾನೇ ಅಚ್ಚರಿ ಮತ್ತು ಭಯಗೊಂಡಿದ್ದಾರೆ! ಇದಾದ ನಂತರ ಆಟದ ಸೋಲಿಗೆ ಕಾರಣವಾಗಿದ್ದವರಿಗೆ ಮಸಿ ಬಳಿಯುವ ಕಾರ್ಯಕ್ರಮ ನಡೆದಿತ್ತು. ಆಗ ವೈಷ್ಣವಿ ಗೌಡ ಮೊದಲ ಬಾರಿಗೆ ಮೌನ ಮುರಿದಿದ್ದಾರೆ!

ವೈಷ್ಣವಿ ಗೌಡ ಬಿಗ್​ ಬಾಸ್​ ಮನೆ ಒಳಗೆ ಬಂದಾಗಿನಿಂದಲೂ ಒಂದು ಚಾರ್ಮ್​ ಇಟ್ಟುಕೊಂಡಿದ್ದಾರೆ. ಯಾರ ಜತೆ ಎಷ್ಟು ಮಾತನಾಡಬೇಕು ಎಂಬುದನ್ನು ಸರಿಯಾಗಿ ಅರಿತುಕೊಂಡಿದ್ದ ಅವರು, ಅಷ್ಟೇ ಮಾತನಾಡುತ್ತಾ ಬಂದಿದ್ದರು. ಇದೇ ಕಾರಣಕ್ಕೆ ಎಲ್ಲರಿಗೂ ಅವರು ಇಷ್ಟವಾಗಿದ್ದರು. ವೈರಸ್​ ಟಾಸ್ಕ್​ನಲ್ಲಿ ವೈಷ್ಣವಿ ಮೊದಲ ಬಾರಿಗೆ ತಮ್ಮ ತಾಳ್ಮೆ ಕಳೆದುಕೊಂಡು ಕೂಗಾಡಿದ್ದರು.

ಬಿಗ್​ ಬಾಸ್​ ಎರಡನೇ ವಾರದಲ್ಲಿ ನೀಡಲಾಗಿದ್ದ ಕಠಿಣ ಟಾಸ್ಕ್​ ಅನ್ನು ಯಶಸ್ವಿಗೊಳಿಸಲು ಮನೆಯ ಸದಸ್ಯರು ವಿಫಲರಾಗಿದ್ದರು. ಹಾಯಾಗಿ, ನಗು ನಗುತ್ತ ಆಡಬೇಕಿದ್ದ ಟಾಸ್ಕ್​ನಲ್ಲಿ ಒಬ್ಬರಿಗೊಬ್ಬರು ಕಿತ್ತಾಟ ಮಾಡಿಕೊಂಡು, ಪರಸ್ಪರ ದ್ವೇಷ ಬೆಳೆಸಿಕೊಂಡಿದ್ದರು. ಇದಕ್ಕೆ ಸಿಟ್ಟಾದ ಬಿಗ್​ ಬಾಸ್,​ ಟಾಸ್ಕ್ ಕ್ಯಾನ್ಸಲ್​ ಮಾಡಿದ್ದರು. ಇದಕ್ಕೆ ಮನೆ ಮಂದಿಗೆ ಮಸಿ ಬಳಿಯುವ ಶಿಕ್ಷೆ ನೀಡಿತ್ತು.

ಒಂದು ಕಡೆ ಮಸಿ ಇಡಲಾಗುತ್ತದೆ. ಪ್ರತೀ ಸ್ಪರ್ಧಿಯೂ ಗೇಮ್​ ರದ್ದಾಗಲು ಕಾರಣ ಯಾರು ಎಂದು ಗುರುತಿಸಿ ಅವರಿಗೆ ಮಸಿ ಬಳಿಯಬೇಕು. ವೈಷ್ಣವಿ ಗೌಡ ಪಾಳಿ ಬಂದಾಗ ಅವರು ಶಮಂತ್​ಗೆ ಮಸಿ ಬಳಿಯುವ ನಿರ್ಧಾರಕ್ಕೆ ಬಂದರು. ಇದಕ್ಕೆ ವಿರಣೆ ನೀಡಿದ್ದ ವೈಷ್ಣವಿ, ಆಟದಲ್ಲಿ ಹುಡುಗರು ತುಂಬಾನೇ ಸ್ಟ್ರಾಂಗ್​ ಇರುತ್ತಾರೆ. ಈ ಸಂದರ್ಭದಲ್ಲಿ ಹುಡುಗರು ಹುಡುಗಿಯರ ಬಗ್ಗೆ ಕಾಳಜಿ ತೋರಬೇಕಿತ್ತು. ಆದರೆ, ಇದರಲ್ಲಿ ಶಮಂತ್​ ವಿಫಲವಾಗಿದ್ದಾರೆ. ಇದನ್ನು ಬಿಟ್ಟು ಅವರ ಮೇಲೆ ಬೇರೆ ಯಾವುದೇ ದ್ವೇಷವಿಲ್ಲ ಎಂದು ಹೇಳಿ ಮಸಿ ಹಚ್ಚಲು ಬಂದರು.

ಆಗ, ಶಮಂತ್​ ನಿಮ್ಮ ಕಂಡ್ರೆ ತುಂಬಾ ಇಷ್ಟ.. ಎಂದು ಹೇಳಿದರು ವೈಷ್ಣವಿ. ಇದನ್ನು ಕೇಳಿ ಎಲ್ಲರೂ ಓ… ಎಂದು ಕೂಗಿದರು. ಆಗ, ಶಮಂತ್​ ನಿಮ್ಮ ಕಂಡ್ರೆ ತುಂಬಾ ಇಷ್ಟ ಇದೆ ಎಂದು ಹೇಳುವುದಿಲ್ಲ ಎಂದು ಹೇಳಿದರು. ಎಲ್ಲರೂ ಮತ್ತೊಮ್ಮೆ ನಕ್ಕರು.

ಇದನ್ನೂ ಓದಿ: Bigg Boss Kannada: ಅಯ್ಯೋ ಪಾಪ.. ನಿರ್ಮಲಾ ಕೈಗೆ ಇಷ್ಟೊಂದು ಏಟಾಗಿದೆಯಾ?