Bigg Boss Kannada Day 1: ಬ್ರೋ ಗೌಡಗೆ ದಿವ್ಯಾ ಸುರೇಶ್ ಮೇಲೆ ಪ್ರೀತಿ?; ಬಿಗ್​ ಬಾಸ್​ ಮನೆಯಲ್ಲಿ ತ್ರಿಕೋನ ಪ್ರೇಮ ಕಥೆ!

ಶಮಂತ್​ ಅಲಿಯಾಸ್​ ಬ್ರೋ ಗೌಡ ಪ್ರೀತಿ ವಿಚಾರ ಹರಿಬಿಟ್ಟಿದ್ದರು. ಗೀತಾ ಹಾಗೂ ನಿರ್ಮಾಲಾ ಜತೆ ಸುದ್ದಿ ಹೇಳುವಾಗ ಮಾತನಾಡಿದ್ದ ಬ್ರೋ ಗೌಡ, ತಾವು ಬಿಗ್​ ಬಾಸ್​ ಮನೆಯಲ್ಲಿ ಒಬ್ಬರನ್ನು ಪ್ರೀತಿ ಮಾಡುತ್ತಿದ್ದೇವೆ ಎಂದರು.

Bigg Boss Kannada Day 1: ಬ್ರೋ ಗೌಡಗೆ ದಿವ್ಯಾ ಸುರೇಶ್ ಮೇಲೆ ಪ್ರೀತಿ?; ಬಿಗ್​ ಬಾಸ್​ ಮನೆಯಲ್ಲಿ ತ್ರಿಕೋನ ಪ್ರೇಮ ಕಥೆ!
Follow us
ರಾಜೇಶ್ ದುಗ್ಗುಮನೆ
|

Updated on:Mar 02, 2021 | 3:46 PM

ಬಿಗ್​ ಬಾಸ್ ಮನೆಯಲ್ಲಿ ಪ್ರೇಮ ಕಥೆಗಳಿಗೇನೂ ಬರಗಾಲ ಇರುವುದಿಲ್ಲ. ಪ್ರತಿ ಸೀಸನ್​ನಲ್ಲೂ ಒಂದೊಂದು ಲವ್​ ಸ್ಟೋರಿ ಹುಟ್ಟಿಕೊಳ್ಳುತ್ತದೆ. ಕೆಲವು ಅರ್ಧಕ್ಕೆ ನಿಂತರೆ ಇನ್ನೂ ಕೆಲವು ಮದುವೆಯಲ್ಲಿ ಪೂರ್ಣಗೊಂಡಿವೆ. ಈ ಬಾರಿಯ ಬಿಗ್​ ಬಾಸ್​ ಮನೆಯಲ್ಲಿ ತ್ರಿಕೋನ ಪ್ರೇಮ ಸರಣಿ ಹುಟ್ಟಿಕೊಳ್ಳುವ ಎಲ್ಲಾ ಲಕ್ಷಣ ಗೋಚರವಾಗಿದೆ. ಇದಕ್ಕೆಲ್ಲ ಕೇಂದ್ರಬಿಂದು ದಿವ್ಯಾ ಸುರೇಶ್​! ಮೊದಲನೇ ದಿನ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ದಿವ್ಯಾ ಸುರೇಶ್​ ಬಟ್ಟೆ ಮಡಚುವಾಗ ತೆರಳಿದ್ದ ಮಂಜು, ನೇರವಾಗಿ ಫ್ಲರ್ಟ್​ ಮಾಡಿದ್ದರು. ನಿಮಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಇಬ್ಬರೂ ಅನೇಕ ಬಾರಿ ತುಂಬಾನೇ ಕ್ಲೋಸ್​ ಆಗಿ ಕಾಣಿಸಿಕೊಂಡಿದ್ದರಿಂದ, ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗುಸುಗುಸು ಹರಿದಾಡಿತ್ತು.

ಇದಾದ ಬೆನ್ನಲ್ಲೇ ರಾತ್ರಿ, ಶಮಂತ್​ ಅಲಿಯಾಸ್​ ಬ್ರೋ ಗೌಡ ಪ್ರೀತಿ ಹುಟ್ಟಿರುವ ವಿಚಾರ ಬಹಿರಂಗ ಮಾಡಿದ್ದರು. ಗೀತಾ ಹಾಗೂ ನಿರ್ಮಾಲಾ ಜತೆ ಸುದ್ದಿ ಹೇಳುವಾಗ ಮಾತನಾಡಿದ್ದ ಬ್ರೋ ಗೌಡ, ತಾವು ಬಿಗ್​ ಬಾಸ್​ ಮನೆಯಲ್ಲಿ ಒಬ್ಬರನ್ನು ಪ್ರೀತಿ ಮಾಡುತ್ತಿದ್ದೇವೆ ಎಂದರು. ಇದಕ್ಕೆ ಉತ್ತರಿಸಿದ್ದ ನಿರ್ಮಲಾ, ಈ ಮನೆಯಲ್ಲಿ ಬೆಳ್ಳಗೆ ಚೆನ್ನಾಗಿ ಇರುವವರು ಮೂವರೇ. ಧನುಶ್ರೀ ಮತ್ತು ಇಬ್ಬರು ಚೈತ್ರಾ ಎಂದರು.

ಬ್ರೋ ಗೌಡ, ಧನುಶ್ರೀ ನನಗೆ ಮೊದಲ ದಿನವೇ ಅಣ್ಣಾ ಎಂದಿದ್ದಾರೆ ಎಂದು ಬೇಸರ ಹೊರ ಹಾಕಿದರು. ಆಗ ನಿರ್ಮಲಾ, ಹಾಗಿದ್ರೆ ಉಳಿದುಕೊಂಡವರು ಈಗ ದಿವ್ಯಾ ಸುರೇಶ್​, ದಿವ್ಯಾ ಉರುಡಗ ಮಾತ್ರ. ಅವರಲ್ಲಿ ಯಾರು ಹೇಳು ಎಂದು ಎಷ್ಟೇ ಬೇಡಿಕೊಂಡರೂ ಬ್ರೋ ಗೌಡ ಉತ್ತರ ನೀಡಲಿಲ್ಲ. ಒಂದೊಮ್ಮೆ, ಬ್ರೋ ಗೌಡನಿಗೆ ಲವ್​ ಆಗಿದ್ದು ಚೈತ್ರಾ ಸುರೇಶ್​ ಮೇಲೆ ಆದರೆ, ಬಿಗ್ ಬಾಸ್​ ಮನೆಯಲ್ಲಿ ತ್ರಿಕೋನ ಪ್ರೀತಿ ಕಥೆ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ

Published On - 3:43 pm, Tue, 2 March 21