Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 02, 2021 | 3:12 PM

ಧನುಶ್ರೀ ಈ ಸ್ಪರ್ಧೆಯಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿ ನಡೆದುಕೊಂಡಿರಲಿಲ್ಲ. ಹೀಗಾಗಿ, ತಂಡ ಸೋಲಲು ಧನುಶ್ರೀಯೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು.

Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ
ಧನುಶ್ರೀ-ನಿರ್ಮಲಾ
Follow us on

ಬಿಗ್​ ಬಾಸ್​ ಮೊದಲನೇ ದಿನವೇ ಸಾಕಷ್ಟು ಹೈಡ್ರಾಮಾಗಳು ನಡೆದಿವೆ. ಶುಭಾ ಪೂಂಜಾ ಕಣ್ಣೀರಿಟ್ಟರು. ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗರನ್ನು ಎತ್ತಿಕೊಂಡು ಹೋಗಿದ್ದ ವಿಚಾರ ಕೂಡ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ, ಧನುಶ್ರೀ ಮಾಡಿದ ತಪ್ಪಿಗೆ ನಿರ್ಮಲಾ ಶಿಕ್ಷೆ ಅನುಭವಿಸಿದ್ದಾರೆ. ಅಷ್ಟಕ್ಕೂ ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನ ಆಗಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನ 17 ಸದಸ್ಯರು ಮನೆಯೊಳಗೆ ಕೂತಿದ್ದರು. ಈ ವೇಳೆ ಪ್ರತಿಯೊಬ್ಬರಿಗೂ ಒಂದೊಂದು ಬಾಲ್​ಗಳನ್ನು ನೀಡಲಾಯಿತು. ಹೀಗೆ ನೀಡಿದ ಬಾಲ್​ಗಳಲ್ಲಿ ನೀಲಿ, ಕೆಂಪು ಹಸಿರು ಹಾಗೂ ಹಳದಿ ಬಣ್ಣದ ಚಾವಿ ಇತ್ತು. ಬಣ್ಣದ ಆಧಾರದ ಮೇಳೆ ನಾಲ್ಕು ಸದಸ್ಯರ ಒಂದು ಟೀಂ ಮಾಡಲಾಯಿತು. ಶಮಂತ್​ ಅಲಿಯಾಸ್​ ಬ್ರೋ ಗೌಡ ಲೀಡರ್​ ಆದರು. ಈ ವೇಳೆ ಟಾಸ್ಕ್​ ಒಂದನ್ನು ಬಿಗ್​ ಬಾಸ್​ ನೀಡಿತ್ತು.

ಮೂರು ಕಡೆಗಳಲ್ಲಿ ಹಗ್ಗ ಇತ್ತು. ಹಗ್ಗದ ತುದಿ ಸೇರುವ ಜಾಗದಲ್ಲಿ ಒಂದು ಪ್ಲೇಟ್​ ರೀತಿಯ ವಸ್ತು ಇತ್ತು. ಪ್ಲೇಟ್​ ಮೇಲೆ ಸ್ಪಂಜ್​ ಮಾದರಿಯ ಆಯಾತಾಕರದ ವಸ್ತುಗಳನ್ನು ಜೋಡಿಸುತ್ತಾ ಬರಬೇಕು. ಹೀಗೆ ಜೋಡಿಸುವ ಸ್ಪರ್ಧೆಯಲ್ಲಿ, ಶುಭಾ ಪೂಂಜಾ, ನಿರ್ಮಲಾ, ಧನುಶ್ರೀ, ನಿಧಿ ಇದ್ದ ತಂಡ ಸೋತಿತ್ತು.

ಧನುಶ್ರೀ ಈ ಸ್ಪರ್ಧೆಯಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿ ನಡೆದುಕೊಂಡಿರಲಿಲ್ಲ. ಹೀಗಾಗಿ, ತಂಡ ಸೋಲಲು ಧನುಶ್ರೀಯೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಬಿಗ್​ ಬಾಸ್​ ಆದೇಶದಂತೆ ಸೋಲಿನ ಹೊಣೆಯನ್ನು ತಂಡದ ಓರ್ವ ಸದಸ್ಯ ಮಾತ್ರ ಹೊತ್ತುಕೊಳ್ಳಬೇಕಿತ್ತು. ಆಗ ನಿರ್ಮಲಾ ಸೋಲಿನ ಹೊಣೆಯನ್ನು ತಾವೇ ಹೊತ್ತಿಕೊಳ್ಳುತ್ತೇವೆ ಎಂದರು. ಈ ಕಾರಣಕ್ಕೆ, ಈ ವಾರದ ಎಲಿಮಿನೇಷನ್​ಗೆ ನಿರ್ಮಲಾ ನೇರವಾಗಿ ನಾಮಿನೇಟ್​ ಆದರು.

ಈ ವಾರ ನಾಮಿನೇಟ್​ ಆದವರ ಪಟ್ಟಿ..
ಈ ವಾರದ ಎಲಿಮಿನೇಷನ್​ಗೆ ಒಟ್ಟು ಐದು ಜನರು ನಾಮಿನೇಷನ್​ ಆಗಿದ್ದಾರೆ. ನಿರ್ಮಲಾ ನೇರವಾಗಿ ನಾಮಿನೇಟ್​ ಆದರೆ, ಧನುಶ್ರೀ, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ಅವರನ್ನು ಮನೆಯ ಸದಸ್ಯರು ನಾಮಿನೇಟ್​ ಮಾಡಿದ್ದರು. ಶಂಕರ್​ ಅಶ್ವತ್ಥ್​ ಅವರು ಕೂಡ ನಾಮಿನೇಟ್ ಆಗಿದ್ದರು, ಆದರೆ ಮನೆಯ ಲೀಡರ್​ ಬ್ರೋ ಗೌಡ ಅವರಿಗೆ ಇದ್ದ ಅಧಿಕಾರದಿಂದ ಶಂಕರ್​ ಅವರನ್ನು ಉಳಿಸಿದರು.

ಇದನ್ನೂ ಓದಿ: Bigg Boss Kannada Day 1: ಹ್ಯಾಂಡ್ ಶೇಕ್ ಮಾಡಲು ಬಂದ ದಿವ್ಯಾರನ್ನು ಅನಾಮತ್ತು ಎತ್ತಿಕೊಂಡ ಪ್ರಶಾಂತ್ ಸಂಬರಗಿ