ಕಾಫಿ ತೋಟದ ರಸ್ತೆಯಲ್ಲಿ ಧುತ್ತನೆ ಎದುರಾದ ಕಾಡಾನೆ; ಬೈಕ್ ಸವಾರ ಬಚಾವ್!

ಹಾಸನ: ಕಾಫಿತೋಟದಿಂದ ದಿಢೀರನೆ ಕಾಡಾನೆಯೊಂದು ರಸ್ತೆಗೆ ನುಗ್ಗಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾಗಿರುವ ಘಟನೆ ನಡೆದಿದೆ. ಧುತ್ತನೆ ಎದುರಿಗೇ ಆನೆ ಕಾಣಿಸಿಕೊಂಡಿದ್ದು, ಅತ್ಯಂತ ಸಮೀಪದಿಂದ ಬೈಕ್ ಸವಾರ ಪಾರಾಗಿದ್ದಾನೆ. ಆನೆ ಕಂಡು ಜನರು ಕೂಗಾಡತೊಡಗಿದ್ದಾಗ ಸವಾರ ಬೈಕ್ ತಿರುಗಿಸಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗಿದ್ದಾನೆ. ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಮಠದ ಕೊಪ್ಪಲು ಗ್ರಾಮದ ಬಳಿ ಈ ಘಟನೆ ನಡೆದಿದೆ. ಒಂಟಿ ಸಲಗವೊಂದು ಈ ಭಾಗದಲ್ಲಿ ಹಲವು ದಿನಗಳಿಂದ ಸಂಚರಿಸುತ್ತಿರುವ ಬಗ್ಗೆ […]

ಕಾಫಿ ತೋಟದ ರಸ್ತೆಯಲ್ಲಿ ಧುತ್ತನೆ ಎದುರಾದ ಕಾಡಾನೆ; ಬೈಕ್ ಸವಾರ ಬಚಾವ್!
ಅನಾಹುತದಿಂದ ಪಾರಾದ ಬೈಕ್​ ಸವಾರ
Follow us
ಸಾಧು ಶ್ರೀನಾಥ್​
| Updated By: ಪೃಥ್ವಿಶಂಕರ

Updated on:Jan 23, 2021 | 11:00 AM

ಹಾಸನ: ಕಾಫಿತೋಟದಿಂದ ದಿಢೀರನೆ ಕಾಡಾನೆಯೊಂದು ರಸ್ತೆಗೆ ನುಗ್ಗಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾಗಿರುವ ಘಟನೆ ನಡೆದಿದೆ.

ಧುತ್ತನೆ ಎದುರಿಗೇ ಆನೆ ಕಾಣಿಸಿಕೊಂಡಿದ್ದು, ಅತ್ಯಂತ ಸಮೀಪದಿಂದ ಬೈಕ್ ಸವಾರ ಪಾರಾಗಿದ್ದಾನೆ. ಆನೆ ಕಂಡು ಜನರು ಕೂಗಾಡತೊಡಗಿದ್ದಾಗ ಸವಾರ ಬೈಕ್ ತಿರುಗಿಸಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗಿದ್ದಾನೆ. ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಮಠದ ಕೊಪ್ಪಲು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಒಂಟಿ ಸಲಗವೊಂದು ಈ ಭಾಗದಲ್ಲಿ ಹಲವು ದಿನಗಳಿಂದ ಸಂಚರಿಸುತ್ತಿರುವ ಬಗ್ಗೆ ಮಾಹಿತಿಯಿದೆ. ಈವರೆಗೆ ಈ ಆನೆಯಿಂದ ಯಾರಿಗೂ ತೊಂದರೆ ಆಗದಿದ್ದರೂ ಕಾಡಾನೆ ಸಂಚಾರದಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಿದೆ. ರಸ್ತೆ, ಗ್ರಾಮ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸುತ್ತಿರೋ ಕಾಡಾನೆ ಸ್ಥಳಾಂತರಕ್ಕೆ ಜನರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Published On - 10:59 am, Sat, 23 January 21