‘ಅಧಿಕಾರದಲ್ಲಿದ್ದಾಗ ಕಾಂಗ್ರೆಸಿಗರು ಬ್ಲ್ಯಾಕ್‌ಮನಿ ಮಾಡುತ್ತಿದ್ರು.. ಈಗ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದಾರೆ’
ಅಧಿಕಾರದಲ್ಲಿದ್ದಾಗ ಬ್ಲ್ಯಾಕ್‌ಮನಿ ಮಾಡುತ್ತಿದ್ದ ಕಾಂಗ್ರೆಸಿಗರು ಅಧಿಕಾರ ಹೋದ ಮೇಲೆ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದಾರೆ ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಬೇಲ್‌ನಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಬೇಲ್‌ನಲ್ಲಿದ್ದಾರೆಂದು ಕಟೀಲು ವ್ಯಂಗ್ಯವಾಡಿದರು.
ಬೀದರ್: ಅಧಿಕಾರದಲ್ಲಿದ್ದಾಗ ಬ್ಲ್ಯಾಕ್‌ಮನಿ ಮಾಡುತ್ತಿದ್ದ ಕಾಂಗ್ರೆಸಿಗರು ಅಧಿಕಾರ ಹೋದ ಮೇಲೆ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದಾರೆ ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಬೇಲ್‌ನಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಬೇಲ್‌ನಲ್ಲಿದ್ದಾರೆಂದು ಕಟೀಲು ವ್ಯಂಗ್ಯವಾಡಿದರು.
ಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವೇಕೆ ಎಂದು ಪ್ರಶ್ನೆ ಹಾಕುತ್ತಾರೆ. ರಾಮನ ಬಗ್ಗೆ ಮಾತನಾಡುವ ಯೋಗ್ಯತೆ ಆ ಮಾಜಿ ಸಿಎಂಗೆ ಇಲ್ಲ. ನೀವು ಮುಖ್ಯಮಂತ್ರಿ ಆಗುವ ಉದ್ದೇಶದಿಂದಲೇ ಪಕ್ಷ ಬಿಟ್ಟು ಬಂದಿದ್ರಿ ಎಂದು ಹೆಸರು ಹೇಳದೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
‘ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಸು ಹೆಚ್ಚಾಗಿದೆ’ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಸು ಹೆಚ್ಚಾಗಿದೆ. ಬಹಳ ದಿವಸ ‘ಕೈ’ ಉಳಿಯಲ್ಲವೆಂದು ಬಿಜೆಪಿಗೆ ಬರುತ್ತಿದ್ದಾರೆ. ಯಾವಾಗಲೂ ಬಡವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದವರು ಬಡವರ ಅಕೌಂಟ್‌ಗೆ ಹಣ ಹಾಕಲಿಲ್ಲ. ಬದಲಾಗಿ ತಮ್ಮ ಅಕೌಂಟ್ ವಿಸ್ತರಿಸಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿದರು. ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಕಟೀಲು ಮಾತನಾಡಿದರು.
ಸಿಂದಗಿ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಉಸ್ತುವಾರಿಗಳ ನೇಮಕ ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ 8 ಉಸ್ತುವಾರಿಗಳನ್ನು ನೇಮಿಸಿ ರಾಜ್ಯ ಬಿಜೆಪಿಯಿಂದ ಆದೇಶ ಪ್ರಕಟವಾಗಿದೆ. ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜೊಲ್ಲೆ, ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ವಿಜಯಪುರ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ, MLC ಅರುಣ್ ಶಹಾಪುರ ಮತ್ತು ಚಂದ್ರಶೇಖರ್ ಕವಟಗಿ ಅವರನ್ನ ನೇಮಕ ಮಾಡಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಇವರನ್ನು ನೇಮಕ ಮಾಡಲಾಗಿದೆ. ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ನಿಧನದಿಂದ ಬೈಎಲೆಕ್ಷನ್ ನಡೆಯುತ್ತಿದೆ.
ಇದನ್ನೂ ಓದಿ: ‘ಡಿಕೆಶಿ, ಹೆಬ್ಬಾಳ್ಕರ್, ರಮೇಶ್ ಮಧ್ಯೆ ಜಿದ್ದಾಜಿದ್ದಿ ಇತ್ತು; ಇವರೇ ವಿಡಿಯೋ ಚಿತ್ರೀಕರಿಸಿರಬಹುದೆಂಬ ಅನುಮಾನ ಇದೆ’
Published On - 9:05 pm, Sun, 7 March 21