AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್​ನಲ್ಲೂ ಶುರುವಾಯ್ತಾ ರಾಜಕೀಯ?

ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್​ನಿಂದ ಪ್ರತಿಯೊಬ್ಬರು ಮಾಸ್ಕ್​ ಧರಿಸಬೇಕಾಗಿದೆ. ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದ್ರೆ, ಮಾಸ್ಕ್​ನಲ್ಲೂ ರಾಜಕೀಯ ಸಿಂಬಲ್ ಬೇಕಾ ಎಂದು ಚರ್ಚೆಗೆ ಗ್ರಾಸವಾಗಿದೆ. ಕೊಪ್ಪಳ ಜಿಲ್ಲೆ ಕಾರಟಗಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮಿಸಿದ್ದರು. ಈ ವೇಳೆ ರಾಜ್ಯಾಧ್ಯಕ್ಷರ ಮಾಸ್ಕ್ ಮೇಲಿನ ಚಿಹ್ನೆ‌ ಕಂಡು ಜನ ಬೆರಗಾಗಿದ್ದಾರೆ. ಏಕೆಂದರೆ ನಳಿನ್ ಕುಮಾರ್ ಕಟೀಲ್ ಧರಿಸಿರುವ ಮಾಸ್ಕ್ ಮೇಲೆ ಬಿಜೆಪಿ ಚಿಹ್ನೆ ಇದೆ. ಸೇಫ್ಟಿ ಮಾಸ್ಕ್​ನಲ್ಲೂ ಇವರು ಬಿಜೆಪಿ‌ ಸಿಂಬಲ್ ಬಳಸಿದ್ದಾರೆ. ಹೀಗಾಗಿ […]

ಮಾಸ್ಕ್​ನಲ್ಲೂ ಶುರುವಾಯ್ತಾ ರಾಜಕೀಯ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: ಆಯೇಷಾ ಬಾನು|

Updated on:Jun 08, 2020 | 2:39 PM

Share

ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್​ನಿಂದ ಪ್ರತಿಯೊಬ್ಬರು ಮಾಸ್ಕ್​ ಧರಿಸಬೇಕಾಗಿದೆ. ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದ್ರೆ, ಮಾಸ್ಕ್​ನಲ್ಲೂ ರಾಜಕೀಯ ಸಿಂಬಲ್ ಬೇಕಾ ಎಂದು ಚರ್ಚೆಗೆ ಗ್ರಾಸವಾಗಿದೆ.

ಕೊಪ್ಪಳ ಜಿಲ್ಲೆ ಕಾರಟಗಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮಿಸಿದ್ದರು. ಈ ವೇಳೆ ರಾಜ್ಯಾಧ್ಯಕ್ಷರ ಮಾಸ್ಕ್ ಮೇಲಿನ ಚಿಹ್ನೆ‌ ಕಂಡು ಜನ ಬೆರಗಾಗಿದ್ದಾರೆ. ಏಕೆಂದರೆ ನಳಿನ್ ಕುಮಾರ್ ಕಟೀಲ್ ಧರಿಸಿರುವ ಮಾಸ್ಕ್ ಮೇಲೆ ಬಿಜೆಪಿ ಚಿಹ್ನೆ ಇದೆ. ಸೇಫ್ಟಿ ಮಾಸ್ಕ್​ನಲ್ಲೂ ಇವರು ಬಿಜೆಪಿ‌ ಸಿಂಬಲ್ ಬಳಸಿದ್ದಾರೆ. ಹೀಗಾಗಿ ಮಾಸ್ಕ್ ಮೂಲಕ‌ ನಳಿನ್ ಕುಮಾರ್ ಕಟೀಲು ಚರ್ಚೆಗೀಡಾಗಿದ್ದಾರೆ.

Published On - 12:39 pm, Mon, 8 June 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು