ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಚಿತ್ರಮಂದಿರ ಸಂಪೂರ್ಣ ಬಂದ್ ಆಗಿತ್ತು. ಈ ಸಮಯದಲ್ಲಿ ಒಟಿಟಿಗೆ ತುಂಬಾನೇ ಬೇಡಿಕೆ ಹೆಚ್ಚಿತ್ತು. ಈ ಬೆಳವಣಿಗೆ ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳದೆ ಆನ್ಲೈನ್ನಲ್ಲೇ ಸಿನಿಮಾ ವೀಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಆರಂಭಿಸಿದ್ದಾರೆ. ಹೀಗಾಗಿ, ಟಿಕೆಟ್ ಬುಕಿಂಗ್ ತಾಣ BookMyShow ಸೇರಿ ಸಾಕಷ್ಟು ಆ್ಯಪ್ಗಳು ನಷ್ಟ ಅನುಭವಿಸಲು ಆರಂಭಿಸಿದ್ದವು. ಆದರೆ, ಬುಕ್ ಮೈ ಶೋ ಈ ಬೆಳವಣಿಗೆಯಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಒಟಿಟಿ ಮಾದರಿಯಲ್ಲೇ ಹಣ ಕೊಟ್ಟು ಸಿನಿಮಾ ವೀಕ್ಷಣೆ ಮಾಡುವ ಆಯ್ಕೆಯನ್ನು ಬುಕ್ಮೈ ಶೋ ತಂದಿದೆ.
ಇತ್ತೀಚೆಗೆ ರಿಲೀಸ್ ಆದ ಕ್ರಿಸ್ಟೋಫರ್ ನೋಲನ್ ಅವರ ಟೆನೆಟ್, ವಂಡರ್ ವುಮನ್ 1984 ಸೇರಿ ಸುಮಾರು 600 ಸಿನಿಮಾಗಳು ಬುಕ್ ಮೈ ಶೋನಲ್ಲಿದೆ. ಕೆಲ ಸಿನಿಮಾಗಳನ್ನು ನೀವು ಕೊಂಡು ನೋಡಬಹುದು, ಇಲ್ಲವೇ ರೆಂಟ್ ಕೂಡ ಪಡೆಯಬಹುದು.
ಪ್ರತಿ ಶುಕ್ರವಾರ ಸಿನಿಮಾ ರಿಲೀಸ್ ಆಗುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಪದ್ಧತಿಯನ್ನು ಬುಕ್ ಮೈ ಶೋ ಕೂಡ ಅನುಸರಿಸುತ್ತಿದೆ. ಅಂದರೆ, ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ಬುಕ್ ಮೈ ಶೋನಲ್ಲಿ ರಿಲೀಸ್ ಆಗಲಿವೆ.
ಉಳಿದ ಒಟಿಟಿಗೆ ಹೋಲಿಸಿದರೆ ಬುಕ್ಮೈಶೋ ನೀಡುತ್ತಿರುವ ಆಯ್ಕೆ ತುಂಬಾನೇ ಭಿನ್ನವಾಗಿದೆ. ಏಕೆಂದರೆ, ಉಳಿದ ಒಟಿಟಿಗಳಲ್ಲಿ ಒಂದು ಸಿನಿಮಾ ನೋಡಬೇಕು ಎಂದರೂ ನೀವು ಕನಿಷ್ಠ ಒಂದು ತಿಂಗಳ ಚಂದಾದಾರತ್ವ ಪಡೆಯಲೇಬೇಕು. ಆದರೆ, ಬುಕ್ ಮೈ ಶೋನಲ್ಲಿ ನೀವು ಒಂದು ಸಿನಿಮಾವನ್ನು ಕೂಡ ಕೊಂಡು ನೋಡಬಹುದು. ಒಂದು ಸಿನಿಮಾ ಬೆಲೆ ಕನಿಷ್ಠ 40 ರೂಪಾಯಿಯಿಂದ ಗರಿಷ್ಠ 700 ರೂಪಾಯಿ ವರೆಗೂ ಇದೆ.
ನೋಡೋದು ಹೇಗೆ?