ಈಜಲು ಹೋಗುತ್ತೇನೆ ಎಂದು ನಿನ್ನೆ ಮನೆಯಿಂದ ತೆರಳಿದ್ದ ಬಾಲಕ.. ಇಂದು ಕೆರೆಯಲ್ಲಿ ಶವವಾಗಿ ಪತ್ತೆ

ಕೆರೆಯಲ್ಲಿ‌ ಈಜಲು ಹೋದ ಬಾಲಕನೊಬ್ಬ ನೀರುಪಾಲಾಗಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಹಾರುಗೇರಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಶ್ರೀಕಾಂತ ಬಸವರಾಜ ಮುರಳ್ಳಿ (14) ಎಂದು ಗುರುತಿಸಲಾಗಿದೆ.

  • TV9 Web Team
  • Published On - 17:06 PM, 24 Jan 2021
ಈಜಲು ಹೋಗುತ್ತೇನೆ ಎಂದು ನಿನ್ನೆ ಮನೆಯಿಂದ ತೆರಳಿದ್ದ ಬಾಲಕ.. ಇಂದು ಕೆರೆಯಲ್ಲಿ ಶವವಾಗಿ ಪತ್ತೆ
ಬಾಲಕನ ಮೃತದೇಹಕ್ಕಾಗಿ ನಡೆದ ಶೋಧಕಾರ್ಯ

ಧಾರವಾಡ: ಕೆರೆಯಲ್ಲಿ‌ ಈಜಲು ಹೋದ ಬಾಲಕನೊಬ್ಬ ನೀರುಪಾಲಾಗಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಹಾರುಗೇರಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಶ್ರೀಕಾಂತ ಬಸವರಾಜ ಮುರಳ್ಳಿ (14) ಎಂದು ಗುರುತಿಸಲಾಗಿದೆ.

ಶ್ರೀಕಾಂತ ಗ್ರಾಮದ ದೊಡ್ಡ ಕೆರೆಯಲ್ಲಿ ಈಜಲು ಹೋದ ವೇಳೆ ಮುಳುಗಿ ಸಾವನ್ನಪ್ಪಿದ್ದಾನೆ. ಈತ ನಿನ್ನೆ ಮನೆಯಿಂದ ಈಜಲು ಹೋಗುತ್ತೇನೆ ಎಂದು ತೆರಳಿದ್ದನಂತೆ. ಆದರೆ, ಇಂದು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸವದತ್ತಿ ಸಮೀಪ ಬಸ್-ಕಾರು ಮುಖಾಮುಖಿ: ನಾಲ್ವರ ಸಾವು