ಶೀಲ ಶಂಕಿಸಿ ಅಣ್ಣನಿಂದಲೇ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ, ಚಿಕಿತ್ಸೆ ಫಲಿಸದೆ ಸಾವು

ಬಳ್ಳಾರಿ: ತಂಗಿಯ ಮೇಲೆ ಅನುಮಾನಪಟ್ಟು ಅಣ್ಣನೇ ತಂಗಿಯನ್ನು ಮಚ್ಚಿನಿಂದ ದಾಳಿ ನಡೆಸಿ ಕೊಂದ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ(28) ಮೃತ ತಂಗಿ. ಹನಮಂತಪ್ಪ(34) ಆರೋಪಿ ಅಣ್ಣ. ಅನುಮಾನಂ ಪೆದ್ದ ರೋಗಂ ಅನ್ನೋ ಮಾತಿದೆ. ಅದರಂತೆ ಒಮ್ಮೆ ಅನುಮಾನ ಹುಟ್ಟಿದ್ರೆ ಸಾಕು ಅದರ ಅಂತ್ಯ ಘನ ಘೋರವಾಗಿರುತ್ತೆ. ಅಕ್ಟೋಬರ್ 19ರಂದು ಸಹ ಇದೇ ರೀತಿ ಒಂದು ಭಯಾನಕ ಕೃತ್ಯ ನಡೆದಿತ್ತು. ಕರಡಿದುರ್ಗ ಗ್ರಾಮದಲ್ಲಿ ತಂಗಿಯ ಶೀಲ ಶಂಕಿಸಿ ಅಣ್ಣನೇ ತಂಗಿಯ ಮೇಲೆ ಮಾರಣಾಂತಿಕ […]

ಶೀಲ ಶಂಕಿಸಿ ಅಣ್ಣನಿಂದಲೇ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ, ಚಿಕಿತ್ಸೆ ಫಲಿಸದೆ ಸಾವು

Updated on: Oct 27, 2020 | 8:47 AM

ಬಳ್ಳಾರಿ: ತಂಗಿಯ ಮೇಲೆ ಅನುಮಾನಪಟ್ಟು ಅಣ್ಣನೇ ತಂಗಿಯನ್ನು ಮಚ್ಚಿನಿಂದ ದಾಳಿ ನಡೆಸಿ ಕೊಂದ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ(28) ಮೃತ ತಂಗಿ. ಹನಮಂತಪ್ಪ(34) ಆರೋಪಿ ಅಣ್ಣ.

ಅನುಮಾನಂ ಪೆದ್ದ ರೋಗಂ ಅನ್ನೋ ಮಾತಿದೆ. ಅದರಂತೆ ಒಮ್ಮೆ ಅನುಮಾನ ಹುಟ್ಟಿದ್ರೆ ಸಾಕು ಅದರ ಅಂತ್ಯ ಘನ ಘೋರವಾಗಿರುತ್ತೆ. ಅಕ್ಟೋಬರ್ 19ರಂದು ಸಹ ಇದೇ ರೀತಿ ಒಂದು ಭಯಾನಕ ಕೃತ್ಯ ನಡೆದಿತ್ತು. ಕರಡಿದುರ್ಗ ಗ್ರಾಮದಲ್ಲಿ ತಂಗಿಯ ಶೀಲ ಶಂಕಿಸಿ ಅಣ್ಣನೇ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಕುತ್ತಿಗೆ ಹಾಗೂ ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ದಾವಣಗೆರೆ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ರತ್ನಮ್ಮ ಮೃತಪಟ್ಟಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಮರುದಿನವೇ ಆರೋಪಿ ಅಣ್ಣ ಹನಮಂತಪ್ಪನನ್ನು ಪೊಲೀಸರು ಬಂಧಿಸಿದ್ದರು.