ಡ್ರಗ್ಸ್ ಮಾಫಿಯಾಗೆ ಮೇಜರ್ ಟ್ವಿಸ್ಟ್: ಮಾದಕ ದೊರೆ VT ಅರೆಸ್ಟ್

  • Publish Date - 9:38 am, Tue, 27 October 20
ಡ್ರಗ್ಸ್ ಮಾಫಿಯಾಗೆ ಮೇಜರ್ ಟ್ವಿಸ್ಟ್: ಮಾದಕ ದೊರೆ VT ಅರೆಸ್ಟ್

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಈಗ ಮೇಜರ್ ಟ್ವಿಸ್ಟ್ಟಿ ಸಿಕ್ಕಿದೆ. ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರಕರಣದ ಉಸ್ತುವಾರಿ, ಮಾದಕ ದೊರೆಯನ್ನೇ ಹಿಡಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಟ್ರ್ಯಾಕ್ ಮಾಡಿ ಕೊನೆಗೂ ಡ್ರಗ್ಸ್ ಪೂರೈಸುತ್ತಿದ್ದ ಭೂಪನನ್ನು ಬಂಧಿಸಿದ್ದಾರೆ.

ಪೊಲೀಸರು ನೈಜೀರಿಯಾ ಪ್ರಜೆ VT ಹೆಸರಿನ ಡ್ರಗ್ಸ್ ಡಾನ್​ನನ್ನು ಬಂಧಿಸಿದ್ದು ಈತನೇ ಕನ್ನಡ ಸಿನಿ ತಾರೆಯರಿಗೆ ಡ್ರಗ್ಸ್ ರುಚಿ ಹತ್ತಿಸಿದ್ದ ಭೂಪ. ಈತ ತನ್ನ ಮನೆಯಲ್ಲೇ ಡ್ರಗ್ಸ್ ಪ್ರೊಡ್ಯೂಸ್ ಮಾಡ್ತಿದ್ದ. ಕಳೆದ 7 ವರ್ಷಗಳಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ. ಇವನಿಗೆ ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 42 ಪೆಡ್ಲರ್​ಗಳ ಬಿಗ್ ನೆಟ್ವರ್ಕ್ ಇದೆ. ಅವರಿಂದಲೇ ಎಲ್ಲಾ ಕಡೆ ಡ್ರಗ್ಸ್ ಸಪ್ಲೈ ಮಾಡಿಸುತ್ತಿದ್ದ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳೇ ಈತನ ಅಡ್ಡೆಯಾಗಿದ್ದವು. ರಾಜಕಾರಣಿ, ವಿಐಪಿ, ಬ್ಯುಸಿನೆಸ್ ಮ್ಯಾನ್ ಮಕ್ಕಳೇ ಈತನ ಟಾರ್ಗೆಟ್. ಹಾಗೂ ಬಂಧಿತ ಲೂಮ್ ಪೆಪ್ಪರ್, ಪ್ರತೀಕ್ ಶೆಟ್ಟಿ ಜತೆ ಲಿಂಕ್ ಹೊಂದಿದ್ದಾನೆ.

ಮನೆಯಲ್ಲೇ ಡ್ರಗ್ಸ್ ತೂಕ ಮಾಡಲು ವೈಯಿಂಗ್ ಮಿಷಿನ್ ಇಟ್ಟಿದ್ದ:
ಬೆಂಗಳೂರಿನ ಡ್ರಗ್ಸ್ ಮಾಫಿಯಾ ಬಿಗ್ ಡಾನ್ ಬಂಧಿಸಲು ಪೊಲೀಸರು ಒಂದು ತಿಂಗಳಿನಿಂದ ಡ್ರಗ್ಸ್ ಡಾನ್ ಫೋನ್ ಕಾಲ್ಸ್ ಟ್ರೇಸ್ ಮಾಡಿ ಅವನ ಚಲನ ವಲನದ ಮೇಲೆ ಕಣ್ಣಿಟ್ಟಿದ್ದರು. ಬಳಿಕ ಪ್ಲಾನ್ ಮಾಡಿ ಮಾದಕ ದೊರೆ ಮನೆಗೆ ನುಗ್ಗಿ ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಆತ ಪಾಸ್ ಪೋರ್ಟ್ ಅವಧಿ ಮುಗಿದಿದ್ದರೂ 7 ವರ್ಷಗಳಿಂದ ಅಕ್ರಮವಾಗಿ ಬೆಂಗಳೂರಿನಲ್ಲಿ ಠಿಕಾಣಿ ಹೂಡಿರುವುದು ಗೊತ್ತಾಗಿದೆ. ಇನ್ನು ಆತನ ಮನೆಯಲ್ಲೇ ಡ್ರಗ್ಸ್ ತೂಕ ಮಾಡಲು ವೈಯಿಂಗ್ ಮಿಷಿನ್ ಇಟ್ಟಿದ್ದ. ಮನೆಯಲ್ಲೇ ಡ್ರಗ್ಸ್ ಸ್ಟಾಕ್ ಪ್ಯಾಕ್ ಮಾಡುತ್ತಿದ್ದ ಎಂದು ಮಾಹಿತಿ ಸಿಕ್ಕಿದೆ.