ಕ್ಯಾನ್ಸರ್‌ನಿಂದ ಬಳಲ್ತಿದ್ದ ದರೋಡೆಕೋರ ಮುರುಗನ್ ಸಾವು

  • TV9 Web Team
  • Published On - 10:14 AM, 27 Oct 2020
ಕ್ಯಾನ್ಸರ್‌ನಿಂದ ಬಳಲ್ತಿದ್ದ ದರೋಡೆಕೋರ ಮುರುಗನ್ ಸಾವು

ಆನೇಕಲ್: ಕ್ಯಾನ್ಸರ್‌ನಿಂದ ಬಳಲ್ತಿದ್ದ ದರೋಡೆಕೋರ ಮುರುಗನ್ ಸಾವಿಗೀಡಾಗಿದ್ದಾನೆ. ಚಿಕಿತ್ಸೆ ಫಲಿಸದೆ ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

10 ಕೆಜಿ ಚಿನ್ನ ದರೋಡೆ ಮಾಡಿದ್ದ
ದರೋಡೆಕೋರ ಮುರುಗನ್ 100ಕ್ಕೂ ಹೆಚ್ಚು ದರೋಡೆ ಕೇಸ್‌ನಲ್ಲಿ ಭಾಗಿಯಾಗಿದ್ದನು. ಮುರುಗನ್‌ನಿಂದ 10 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು. ಈತ ಕಳೆದ ವರ್ಷ ಪೊಲೀಸರಿಗೆ ಶರಣಾಗಿದ್ದ. ಪರಪ್ಪನ ಅಗ್ರಹಾರ ಜೈಲಲ್ಲಿದ್ದ ಮುರುಗನ್​ಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿನ್ನೆಲೆ ಮುರುಗನ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಸಾವು ಕಂಡಿದ್ದಾನೆ.