ಕೊರೊನಾ ಭೀತಿ ಇದ್ರೂ ಪ್ರವಾಸಿಗರ ಮೋಜು ಮಸ್ತಿ
ಚಿಕ್ಕಬಳ್ಳಾಪುರ: ಕೊರೊನಾ ಭೀತಿ ಇದ್ರೂ ಪ್ರವಾಸಿಗರು ಮಾತ್ರ ಮೋಜು ಮಸ್ತಿ ಕಡಿಮೆ ಮಾಡಿಲ್ಲ. ಅನ್ಲಾಕ್ ಆರಂಭವಾಗುತ್ತಿದ್ದಂತೆ ಫುಲ್ ರಿಲಾಕ್ಸ್ ಮಾಡುತ್ತಿದ್ದಾರೆ. ಕೊರೊನಾ ಮರೆತು ತಮ್ಮ ನೆಚ್ಚಿನ ತಾಣಗಳಿಗೆ ಪ್ರವಾಸ ಬೆಳೆಸುತ್ತಿದ್ದಾರೆ. ವೀಕೆಂಡ್ಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇವರ ಈ ನಿರ್ಲಕ್ಷ್ಯಕ್ಕೆ ಮುಂದೆ ದೊಡ್ಡ ಕಂಟಕವೇ ಎದುರಾಗಬಹುದು. ಹಲವು ತಿಂಗಳು ಮನೆಯಲ್ಲೇ ಕುಳಿತು ಬೇಜಾರಾಗಿ ಪ್ರವಾಸಿ ತಾಣದತ್ತ ಮುಖ ಮಾಡಿರುವ ಪ್ರವಾಸಿಪ್ರವಾಸಿಗರಿಂದ ಆತಂಕ ಎದುರಾಗಿದೆ. ಕೊರೊನಾವನ್ನು ಸಂಪೂರ್ಣ ಮರೆತಂತೆ ಪ್ರವಾಸಿಗರು ವರ್ತಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ […]

ಚಿಕ್ಕಬಳ್ಳಾಪುರ: ಕೊರೊನಾ ಭೀತಿ ಇದ್ರೂ ಪ್ರವಾಸಿಗರು ಮಾತ್ರ ಮೋಜು ಮಸ್ತಿ ಕಡಿಮೆ ಮಾಡಿಲ್ಲ. ಅನ್ಲಾಕ್ ಆರಂಭವಾಗುತ್ತಿದ್ದಂತೆ ಫುಲ್ ರಿಲಾಕ್ಸ್ ಮಾಡುತ್ತಿದ್ದಾರೆ. ಕೊರೊನಾ ಮರೆತು ತಮ್ಮ ನೆಚ್ಚಿನ ತಾಣಗಳಿಗೆ ಪ್ರವಾಸ ಬೆಳೆಸುತ್ತಿದ್ದಾರೆ. ವೀಕೆಂಡ್ಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇವರ ಈ ನಿರ್ಲಕ್ಷ್ಯಕ್ಕೆ ಮುಂದೆ ದೊಡ್ಡ ಕಂಟಕವೇ ಎದುರಾಗಬಹುದು.
ಹಲವು ತಿಂಗಳು ಮನೆಯಲ್ಲೇ ಕುಳಿತು ಬೇಜಾರಾಗಿ ಪ್ರವಾಸಿ ತಾಣದತ್ತ ಮುಖ ಮಾಡಿರುವ ಪ್ರವಾಸಿಪ್ರವಾಸಿಗರಿಂದ ಆತಂಕ ಎದುರಾಗಿದೆ. ಕೊರೊನಾವನ್ನು ಸಂಪೂರ್ಣ ಮರೆತಂತೆ ಪ್ರವಾಸಿಗರು ವರ್ತಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ 80 ಅಡಿ ಎತ್ತರದಿಂದ ಬೀಳುವ ನೀರಿಗೆ ಮೈಯೊಡ್ಡಿ ಪ್ರವಾಸಿಗರು ಯಾವುದೇ ಅಂತರ ಇಲ್ಲದೆ ಒಬ್ಬರ ಮೇಲೆ ಒಬ್ಬರು ಬಿದ್ದುಕೊಂಡು ನೀರಿನಲ್ಲಿ ಆಟವಾಡಿ ಮೋಜು ಮಸ್ತಿ ಮಾಡುತ್ತಿದ್ದಾರೆ.
ಎಲ್ಲಾ ವಯೋಮಾನದ ಪ್ರವಾಸಿಗರು ಜಲಾಶಯದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.








Published On - 10:47 am, Tue, 27 October 20
