Budget 2021 | ಪೆಟ್ರೋಲ್, ಡೀಸೆಲ್ಗೆ ಸೆಸ್ ವಿಧಿಸಿದರೂ ಗ್ರಾಹಕರ ಮೇಲೆ ಹೊರೆ ಬೀಳದು: ನಿರ್ಮಲಾ ಸೀತಾರಾಮನ್
ಕೃಷಿ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸಿರುವುದು ನಿಜವಾದರೂ, ಅವುಗಳ ಮೇಲೆ ಈಗಾಗಲೇ ಇದ್ದ ಇತರ ಸುಂಕಗಳನ್ನು ಕಡಿಮೆ ಮಾಡಿರುವುದರಿಂದ ಗ್ರಾಹಕರ ಮೇಲೆ ಹೊರೆ ಬೀಳುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಕೃಷಿ ಸಂಬಂಧಿತ ಮೂಲ ಸೌಕರ್ಯ ಮತ್ತು ಅಭಿವೃದ್ಧಿಗಾಗಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ₹ 2.5 ಮತ್ತು ಡೀಸೆಲ್ ಮೇಲೆ ₹ 4ರಷ್ಟು ಸೆಸ್ ವಿಧಿಸುವ ಪ್ರಸ್ತಾಪ ಮಾಡಿರುವಾದರೂ ಈ ತೈಲಗಳ ಮೇಲಿನ ಇತರ ತೆರಿಗೆಗಳನ್ನು ಕಡಿತಗೊಳಿಸಿರುವುದರಿಂದ ಗ್ರಾಹಕರ ಮೇಲೆ ಹೊರೆ ಬೀಳುವುದಿಲ್ಲ. ಸರಳವಾಗಿ ಹೇಳಬೇಕೆಂದರೆ, ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆಯಲ್ಲಿ ಹೆಚ್ಚಳವಾಗುವುದಿಲ್ಲ.
ಕೃಷಿ ಸೆಸ್ ಇತರ ವಸ್ತುಗಳ ಮೇಲೂ ವಿಧಿಸಲಾಗಿದೆ. ಮದ್ಯದ ಮೇಲೆ ಶೇ 100, ಚಿನ್ನ ಮತ್ತು ಬೆಳ್ಳಿ ಗಟ್ಟಿಗಳ ಮೇಲೆ ಶೇ 2.5, ಕಚ್ಚಾ ತಾಳೆ ಎಣ್ಣೆಯ ಮೇಲೆ ಶೇ 17.5, ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲೆ ಶೇ 20ರಷ್ಟು, ಸೇಬುಗಳ ಮೇಲೆ ಶೇ 35 ಮತ್ತು ಬಟಾಣಿ ಮೇಲೆ ಶೇ 40ರಷ್ಟು ಸೆಸ್ ವಿಧಿಸಲಾಗಿದೆ. ಈ ಸೆಸ್ಗಳು ನಾಳೆಯಿಂದಲೇ (ಫೆ.2) ಅನ್ವಯವಾಗಲಿವೆ.
‘ಕೃಷಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸಿರುವಂತೆಯೇ, ಅವುಗಳ ಮೇಲಿನ ಮೂಲ ಅಬಕಾರಿ ಸುಂಕ (Basic excise duty – BED) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (Special Additional Excise Duty – SAED) ತಗ್ಗಿಸಲಾಗಿದೆ. ಹೀಗಾಗಿ ಹೊಸ ಸೆಸ್ನ ಹೊರೆ ಗ್ರಾಹಕರ ಮೇಲೆ ಹೊರೆ ಬೀಳುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
‘ಬ್ರ್ಯಾಂಡೆಡ್ ಅಲ್ಲದ ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆಯ ಮೇಲೆ ಅನುಕ್ರಮವಾಗಿ ₹ 1.4 ಮತ್ತು ₹ 1.8ರಷ್ಟು ಅಬಕಾರಿ ಶುಲ್ಕ ಬೀಳುತ್ತಿತ್ತು. ಬ್ರ್ಯಾಂಡೆಡ್ ಅಲ್ಲದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಎಸ್ಎಈಡಿ ಪ್ರತಿ ಲೀಟರ್ಗೆ ಅನುಕ್ರಮವಾಗಿ ₹ 11 ಮತ್ತು ₹ 8ರಷ್ಟು ಬೀಳುತ್ತಿತ್ತು. ಇದೇ ತೆರನಾದ ಬದಲಾವಣೆಗಳನ್ನು ಬ್ರ್ಯಾಂಡೆಡ್ ಪೆಟ್ರೋಲ್ ಮತ್ತು ಡೀಸೆಲ್ಗಳ ಮೇಲೂ ಮಾಡಲಾಗುತ್ತದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದನ್ನು ಎಎನ್ಐ ಸುದ್ದಿಸಂಸ್ಥೆ ಉಲ್ಲೇಖಿಸಿದೆ.
ಈ ಸಂಬಂಧ ಎಎನ್ಐ ಸುದ್ದಿಸಂಸ್ಥೆಯ ಟ್ವೀಟ್ ಇಲ್ಲಿದೆ
Consequent to imposition of Agriculture Infrastructure and Development Cess (AIDC) on petrol and diesel, Basic excise duty (BED) and Special Additional Excise Duty (SAED) rates have been reduced on them so that overall consumerdoes not bear any additional burden: FM Sitharaman pic.twitter.com/2KDBeT5eCL
— ANI (@ANI) February 1, 2021
Budget 2021 | ಮತ್ತಷ್ಟು ದುಬಾರಿಯಾದ ಪೆಟ್ರೋಲ್, ಡೀಸೆಲ್ ಬೆಲೆ: ಕೃಷಿ ಮೂಲಸೌಕರ್ಯ ಸೆಸ್ ಮೂಲಕ ದರ ಏರಿಕೆ
Budget 2021 | ಚಿನ್ನ-ಬೆಳ್ಳಿ ಮೇಲೆ ಕಸ್ಟಮ್ಸ್ ಸುಂಕ ಇಳಿಸಿದ ನಿರ್ಮಲಾ ಸೀತಾರಾಮನ್: ಚಿನ್ನದ ಬೆಲೆ ದಿಢೀರ್ ಇಳಿಕೆ
Published On - 5:58 pm, Mon, 1 February 21