AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 ವ್ಯಕ್ತಿ-ವ್ಯಕ್ತಿತ್ವ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ

ಇಸವಿ 2006. ನಿರ್ಮಲಾ ಸೀತಾರಾಮನ್ ರಾಜಕೀಯಕ್ಕೆ ಬಲಗಾಲಿಟ್ಟ ವರ್ಷ. ಬಿಜೆಪಿ ಸೇರಿದ ಅವರು 2008ರಲ್ಲಿ ಪಕ್ಷದ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ನೇಮಕವಾದರು. ಜತೆಗೆ, 2010ರಲ್ಲಿ ವರ್ಷ ಅವರನ್ನು ಮಾಧ್ಯಮ ವಕ್ತಾರರನ್ನಾಗಿಯೂ ಬಿಜೆಪಿ ನೇಮಿಸಿತು.

Budget 2021 ವ್ಯಕ್ತಿ-ವ್ಯಕ್ತಿತ್ವ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೀವನದ ಪ್ರಮುಖ ಘಟ್ಟಗಳು
guruganesh bhat
| Edited By: |

Updated on:Feb 01, 2021 | 8:46 AM

Share

ನಗುಮೊಗದ, ಕಣ್ಣುಗಳಲ್ಲಿ ಆತ್ಮವಿಶ್ವಾಸದ ಛಾಯೆ, ನೋಡಿದರೆ ಗೌರವಾನ್ವಿತ ಮಹಿಳೆಯೆಂದು ಅನಿಸುವ ಶುಭ್ರ ಉಡುಗೆಯ ದಿಟ್ಟ ಮಹಿಳೆ ನಿರ್ಮಲಾ ಸೀತಾರಾಮನ್. ಒಂದು ವಾರದಿಂದ ಅತಿಹೆಚ್ಚು ಬಾರಿ ಕೇಳಿರುವ ಹೆಸರು, ಅತಿಹೆಚ್ಚು ಬಾರಿ ನೋಡಿರುವ ಮುಖ ನಿರ್ಮಲಾ ಸೀತಾರಾಮನ್ ಅವರದು.

2014ರಿಂದ ರಾಜ್ಯಸಭಾ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರು ಎಂಬ ಶ್ರೇಯಕ್ಕೆ ಪಾತ್ರರಾದವರು. ಇಂದಿರಾ ಗಾಂಧಿ ನಂತರ ರಕ್ಷಣಾ ಇಲಾಖೆ ನಿರ್ವಹಿಸಿದ ಮೊದಲ ಮಹಿಳೆಯೂ ಹೌದು. ಫೋರ್ಬ್ಸ್​ನ 2020ರ ಜಗತ್ತಿನ ನೂರು ಪ್ರಭಾವಿ ಮಹಿಳೆಯರಲ್ಲಿ 41ನೇ ಸ್ಥಾನ ಪಡೆದಿದ್ದರು.

ತಮಿಳುನಾಡಿನ ಮಧುರೈಯ ನಿರ್ಮಲಾ ಸೀತಾರಾಮನ್ ತಿರುಚಿನಾಪಳ್ಳಿಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು ದೆಹಲಿಯ ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನ ವಿಶೇಷ ವಿದ್ಯಾರ್ಥಿ ವೇತನ ಪಡೆದರು. ನಂತರ, 1991ರಲ್ಲಿ ಅವರ ಕುಟುಂಬ ಲಂಡನ್​ನಿಂದ ಮರಳಿ ಭಾರತಕ್ಕೆ ಮರಳಿತು.

ಇದನ್ನೂ ಓದಿ : Explainer | ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ, ಅದರರ್ಥವೇನು?

NIRMALA SITHARAMAN RARE PHOTO

ಮಗಳು ಪರಕಾಲ ವಾಙ್ಮಯಿ ಜತೆ ನಿರ್ಮಲಾ ಸೀತಾರಾಮನ್ (ಚಿತ್ರ ಸೌಜನ್ಯ: ಟ್ವಿಟರ್)

ಬಿಜೆಪಿಗೆ ಪದಾರ್ಪಣೆ ಇಸವಿ 2006. ನಿರ್ಮಲಾ ಸೀತಾರಾಮನ್ ರಾಜಕೀಯಕ್ಕೆ ಬಲಗಾಲಿಟ್ಟ ವರ್ಷ. ಬಿಜೆಪಿ ಸೇರಿದ ಅವರು 2008ರಲ್ಲಿ ಪಕ್ಷದ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ನೇಮಕವಾದರು. ಜತೆಗೆ, 2010ರಲ್ಲಿ ವರ್ಷ ಅವರನ್ನು ಮಾಧ್ಯಮ ವಕ್ತಾರರನ್ನಾಗಿಯೂ ಬಿಜೆಪಿ ನೇಮಿಸಿತು.

2014ರಲ್ಲಿ ರಚನೆಯಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಮಲಾ ಸೀತಾರಾಮನ್​ ಅವರನ್ನು ಇನ್ನಷ್ಟು ಉನ್ನತ ಸ್ಥಾನಕ್ಕೇರಿಸಿತು. ವಾಣಿಜ್ಯ ಮತ್ತು ಉದ್ಯಮಗಳ ಇಲಾಖೆಯ ರಾಜ್ಯ ಖಾತೆಯ (ಸ್ವತಂತ್ರ ನಿರ್ವಹಣೆ) ಸಚಿವರಾದರು. 2017ರಲ್ಲಿ ದೇಶದ ರಕ್ಷಣೆಯ ಜವಾಬ್ದಾರಿಯೂ ಲಭಿಸಿತು. ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿ, 2019ರಲ್ಲಿ ಹಣಕಾಸು ಸಚಿವರಾಗಿ ಮುಂಬಡ್ತಿ ಪಡೆದರು. ಅದೇ ವರ್ಷ ಮೊದಲ ಬಾರಿಗೆ ದೇಶದ ಬಜೆಟ್ ಮಂಡಿಸಿದರು.

ನಿಮಗೆ ಗೊತ್ತೇ, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯೆ.

ಸೇಲ್ಸ್ ಪರ್ಸನ್ ಆಗಿಯೂ ಕೆಲಸ ಮಾಡಿದ್ದರು! ಲಂಡನ್​ನಲ್ಲಿ ವಾಸಿಸುವಾಗ ಅಲ್ಲಿನ ರೀಜೆಂಟ್ ಸ್ಟ್ರೀಟ್​ನಲ್ಲಿ ಸೇಲ್ಸ್ ಪರ್ಸನ್ ಆಗಿಯೂ ಕೆಲಸ ಮಾಡಿದ್ದರು ನಿರ್ಮಲಾ ಸೀತಾರಾಮನ್. ಕೃಷಿ ಎಂಜಿನಿಯರ್​ಗಳ ಸಮಿತಿಯ ಅರ್ಥಶಾಸ್ತ್ರಜ್ಞರಿಗೆ ಸಹಾಯಕಿಯಾಗಿ, ಬಿಬಿಸಿ ವರ್ಲ್ಡ್ ಸರ್ವೀಸ್​ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಹಿರಿಯ ಮ್ಯಾನೇಜರ್ ಆಗಿ, 2017ರಲ್ಲಿ ರಾಷ್ಟ್ರೀಯ ಮಹಿಳಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ನಮ್ಮ ಹಣಕಾಸು ಸಚಿವರು.

ಇದನ್ನೂ ಓದಿ: ದುಡಿಯುವ ಭರವಸೆ ಬಿತ್ತುವುದೇ ನಿರ್ಮಲಾ ಸೀತಾರಾಮನ್ ಎದುರಿಗಿರುವ ಅತಿದೊಡ್ಡ ಸವಾಲು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಪತಿ ಪರಕಾಲ ಪ್ರಭಾಕರ ಅವರ ಜತೆ

ನಿರ್ಮಲಾ ಸೀತಾರಾಮನ್ ದೆಹಲಿಯ ಜವಾಹರ್​ಲಾಲ್ ನೆಹರು ವಿವಿಯಲ್ಲಿ ಅಧ್ಯಯನ ನಡೆಸುವಾಗ ಪರಕಾಲ ಪ್ರಭಾಕರ್ ಅವರನ್ನು ಭೇಟಿಯಾದರು. 1986ರಲ್ಲಿ ಬಿಜೆಪಿ ಪರ ಒಲವು ಬೆಳೆಸಿಕೊಂಡಿದ್ದ ನಿರ್ಮಲಾ ಸೀತಾರಾಮನ್​ಗೂ ಪರಕಾಲ ಪ್ರಭಾಕರ್​ ಅವರಿಗೂ ಒಲವು ಬೆಳೆದು ಮದುವೆಯಾಯಿತು. ಹೆಣ್ಣು ಮಗುವಿನ ತಾಯಿಯೂ ಆದರು. ಮಗಳ ಹೆಸರು ಪರಕಾಲ ವಾಙ್ಮಯಿ.

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರಿಗೆ, ಆಂಧ್ರಪ್ರದೇಶ ಬಿಜೆಪಿ ಘಟಕಗಳಿಗೆ ಸಂವಹನ ಸಲಹೆಗಾರರಾಗಿಯೂ ನಿರ್ಮಲಾ ಪತಿ ಪರಕಾಲ ಪ್ರಭಾಕರ್ ಸೇವೆ ಸಲ್ಲಿಸಿದ್ದರು. ಆಂಧ್ರಪ್ರದೇಶದ ಟಿವಿ ಮಾಧ್ಯಮಗಳಲ್ಲಿ ಚರ್ಚೆಗಳನ್ನು ನಡೆಸಿಕೊಡುತ್ತಿದ್ದರು.

NIRMASITHARAMAN DAUGHER

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಗಳು ಪರಕಾಲ ವಾಙ್ಮಯಿ

ದಕ್ಷಿಣ ಭಾರತದ ಮಹಿಳೆಯ ಕೈಲಿದೆ ದೇಶದ ಆರ್ಥಿಕತೆ ಈ ವರ್ಷ ಎರಡನೇ ಬಾರಿಗೆ ಹಣಕಾಸು ಸಚಿವರಾಗಿ ದೇಶದ ಆಯವ್ಯಯ ಮಂಡಿಸುತ್ತಿದ್ದಾರೆ ನಿರ್ಮಲಾ ಸೀತಾರಾಮನ್. ಕರ್ನಾಟಕ ಸಂಗೀತದ ಅಭಿಮಾನಿಯಾಗಿರುವ ಅವರು ದಿನಕ್ಕೆ ಮೂರು ಗಂಟೆಯನ್ನು ಓದುವಿಕೆಗೆ ಮೀಸಲಿಡುತ್ತಾರಂತೆ. ಜತೆಗೆ, ಅಡುಗೆ, ಚಾರಣ, ಪ್ರವಾಸಗಳಲ್ಲೂ ಅತೀವ ಆಸಕ್ತಿ ಹೊಂದಿದ್ದಾರೆ. ಹಿಂದಿಗಿಂತ ಇಂಗ್ಲೀಷಿನಲ್ಲೇ ಹೆಚ್ಚು ಪರಿಣಿತಿ ಹೊಂದಿರುವ ಅವರು ಕೇಂದ್ರ ಸರ್ಕಾರದಲ್ಲಿ ದಕ್ಷಿಣ ಭಾರತದ ಅತಿ ಪ್ರಮುಖ ಪ್ರತಿನಿಧಿ. ಇಡೀ ದೇಶದ ಆರ್ಥಿಕ ಸ್ಥಿತಿಗತಿ ದಕ್ಷಿಣ ಭಾರತೀಯ ಮಹಿಳೆಯ ಕೈಲಿದೆ ಎಂದು ಖುಷಿಯಾಗಿ, ಅಷ್ಟೇ ಜವಾಬ್ದಾರಿಯುತವಾಗಿ ಹೇಳಬಹುದು.

Budget 2021 | ಅತ್ತ ಪಾಕಿಸ್ತಾನ, ಇತ್ತ ಚೀನಾ; ಈ ಬಾರಿಯಾದರೂ ರಕ್ಷಣೆಗೆ ಸಿಗುತ್ತಾ ಬೇಕಿರುವಷ್ಟು ಅನುದಾನ

Budget 2021 | ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್​ನಲ್ಲಿ ಏನು ನಿರೀಕ್ಷಿಸಬಹುದು?

Published On - 8:42 pm, Sun, 31 January 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು