ಮೂಢನಂಬಿಕೆ ಬದಿಗಿಟ್ಟು.. ಸದ್ಯದಲ್ಲೇ ಚಾಮರಾಜನಗರಕ್ಕೆ CM ಯಡಿಯೂರಪ್ಪ ಭೇಟಿ

ಚಾಮರಾಜನಗರ: ಜಿಲ್ಲೆಯ ಸುತ್ತ ಹೆಣೆಯಲಾಗಿರುವ ಮೂಢನಂಬಿಕೆಯನ್ನು ಬದಿಗಿಟ್ಟು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಾರಿ ಜಿಲ್ಲೆಗೆ ಭೇಟಿ ಕೊಡಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಟ್ಟರೆ ತಮ್ಮ ಸಿಎಂ ಸ್ಥಾನ ಕಳೆದುಕೊಳ್ಳುವುದು ಪಕ್ಕಾ ಎಂಬ ಮೂಢನಂಬಿಕೆ ಬಹಳಷ್ಟು ಚಾಲ್ತಿಯಲ್ಲಿದ್ದು ಇದಕ್ಕೆ ಈ ಹಿಂದೆ ಸಿಎಂ ಸಿದ್ದರಾಮಯ್ಯ ತಿಲಾಂಜಲಿ ಹಾಡಿದ್ದರು. ಇದೀಗ, ಸಿಎಂ ಯಡಿಯೂರಪ್ಪ ಸರದಿ. ಈ ಬಾರಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಯಡಿಯೂರಪ್ಪ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ ಹನೂರು […]

ಮೂಢನಂಬಿಕೆ ಬದಿಗಿಟ್ಟು.. ಸದ್ಯದಲ್ಲೇ ಚಾಮರಾಜನಗರಕ್ಕೆ CM ಯಡಿಯೂರಪ್ಪ ಭೇಟಿ
Edited By:

Updated on: Nov 13, 2020 | 4:04 PM

ಚಾಮರಾಜನಗರ: ಜಿಲ್ಲೆಯ ಸುತ್ತ ಹೆಣೆಯಲಾಗಿರುವ ಮೂಢನಂಬಿಕೆಯನ್ನು ಬದಿಗಿಟ್ಟು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಾರಿ ಜಿಲ್ಲೆಗೆ ಭೇಟಿ ಕೊಡಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಟ್ಟರೆ ತಮ್ಮ ಸಿಎಂ ಸ್ಥಾನ ಕಳೆದುಕೊಳ್ಳುವುದು ಪಕ್ಕಾ ಎಂಬ ಮೂಢನಂಬಿಕೆ ಬಹಳಷ್ಟು ಚಾಲ್ತಿಯಲ್ಲಿದ್ದು ಇದಕ್ಕೆ ಈ ಹಿಂದೆ ಸಿಎಂ ಸಿದ್ದರಾಮಯ್ಯ ತಿಲಾಂಜಲಿ ಹಾಡಿದ್ದರು.

ಇದೀಗ, ಸಿಎಂ ಯಡಿಯೂರಪ್ಪ ಸರದಿ. ಈ ಬಾರಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಯಡಿಯೂರಪ್ಪ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಸುಪ್ರಸಿದ್ಧ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ನವೆಂಬರ್ 25 ಮತ್ತು 26 ರಂದು ಎರಡು ದಿನಗಳ ಕಾಲ ಸಿಎಂ ಭೇಟಿ ಕೊಡಲಿದ್ದು ನ. 25 ರ ಸಂಜೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನ. 26 ರಂದು 13 ಕೋಟಿ 84 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಹ ನೆರವೇರಿಸಲಿದ್ದಾರೆ. ಇದಲ್ಲದೆ, 109 ಕೋಟಿ 96 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Published On - 4:02 pm, Fri, 13 November 20