ಕೊರೊನಾ ಆರ್ಥಿಕ ಸಂಕಷ್ಟದಲ್ಲೂ ಭ್ರಷ್ಟಾಚಾರ? BBMP ಕಮಿಷನರ್ ವಿರುದ್ಧ ದೂರು

|

Updated on: May 18, 2020 | 12:18 PM

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲೂ ಭ್ರಷ್ಟಾಚಾರ ಎಸಗಿದ್ದಾರೆಂದು BBMP ಆಯುಕ್ತ ಅನಿಲ್ ಕುಮಾರ್ ವಿರುದ್ಧ ಆರ್‌ಟಿಐ ಕಾರ್ಯಕರ್ತ ವೀರೇಶ್ ಎಸಿಬಿಗೆ ದೂರು ನೀಡಿದ್ದಾರೆ. ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಯಾವುದೇ ಕಾಮಗಾರಿಗಳಿಗೆ ಬಿಲ್ ಅನುಮೋದನೆ ನೀಡದಂತೆ ಆರ್ಥಿಕ ಇಲಾಖೆ ಆದೇಶ ಮಾಡಿತ್ತು. ಆದ್ರೂ, ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಸಂಬಳಕ್ಕೆ ಮೀಸಲಿಟ್ಟಿದ್ದ ಅನುದಾನ ಬೇರೆ ಕಾರ್ಯಕ್ಕೆ ಬಳಕೆ ಮಾಡಲಾಗಿದೆ. ಕಸದ ನಿರ್ವಹಣೆಗಿಟ್ಟಿದ್ದ ಅನುದಾನವೂ ಬೇರೆ ಕಾಮಗಾರಿಗೆ ಬಳಕೆಯಾಗಿದೆ. ಈ ಸಂಬಂಧ ಎಸಿಬಿಗೆ ಆರ್​ಟಿಐ ಕಾರ್ಯಕರ್ತ […]

ಕೊರೊನಾ ಆರ್ಥಿಕ ಸಂಕಷ್ಟದಲ್ಲೂ ಭ್ರಷ್ಟಾಚಾರ? BBMP ಕಮಿಷನರ್ ವಿರುದ್ಧ ದೂರು
Follow us on

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲೂ ಭ್ರಷ್ಟಾಚಾರ ಎಸಗಿದ್ದಾರೆಂದು BBMP ಆಯುಕ್ತ ಅನಿಲ್ ಕುಮಾರ್ ವಿರುದ್ಧ ಆರ್‌ಟಿಐ ಕಾರ್ಯಕರ್ತ ವೀರೇಶ್ ಎಸಿಬಿಗೆ ದೂರು ನೀಡಿದ್ದಾರೆ. ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಯಾವುದೇ ಕಾಮಗಾರಿಗಳಿಗೆ ಬಿಲ್ ಅನುಮೋದನೆ ನೀಡದಂತೆ ಆರ್ಥಿಕ ಇಲಾಖೆ ಆದೇಶ ಮಾಡಿತ್ತು. ಆದ್ರೂ, ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಸಂಬಳಕ್ಕೆ ಮೀಸಲಿಟ್ಟಿದ್ದ ಅನುದಾನ ಬೇರೆ ಕಾರ್ಯಕ್ಕೆ ಬಳಕೆ ಮಾಡಲಾಗಿದೆ. ಕಸದ ನಿರ್ವಹಣೆಗಿಟ್ಟಿದ್ದ ಅನುದಾನವೂ ಬೇರೆ ಕಾಮಗಾರಿಗೆ ಬಳಕೆಯಾಗಿದೆ. ಈ ಸಂಬಂಧ ಎಸಿಬಿಗೆ ಆರ್​ಟಿಐ ಕಾರ್ಯಕರ್ತ ವೀರೇಶ್ ಒಟ್ಟು ಏಳು ಪ್ರತ್ಯೇಕ ದೂರು ನೀಡಿದ್ದಾರೆ.

Published On - 12:10 pm, Mon, 18 May 20