ಬಿಹಾರದಲ್ಲಿ EVM ದುರ್ಬಳಕೆ: ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಸದ DK ಸುರೇಶ್ ಆರೋಪ
ಬೆಂಗಳೂರು: ಬಿಹಾರದ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ. EVM ಮೇಲೆ ದುರ್ಬಳಕೆ ಆರೋಪ ಕೇಳಿಬರ್ತಿದೆ. ಅಮೆರಿಕಾದಲ್ಲೂ ಬ್ಯಾಲೆಟ್ ಪೇಪರ್ ಮುಖಾಂತರ ಮತದಾನ ನಡೆಯುತ್ತೆ. ಅಲ್ಲದೆ ಇವಿಎಂ ಯಾರು ಮಾಡಿರೋದು? ಮನುಷ್ಯರೇ ಮಾಡಿರುವುದು. ಹಾಗಾಗಿ ಇವಿಎಂ ದುರ್ಬಳಕೆ ಮಾಡಿಕೊಳ್ಳೋಕೆ ಅವಕಾಶವಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪ ಮಾಡಿದ್ದಾರೆ. ಆರ್.ಆರ್. ನಗರದಲ್ಲೂ ಡೌಟು: ಈ ವಿಚಾರವಾಗಿ ಚುನಾವಣಾ ಆಯೋಗ ಮೂಕಪ್ರೇಕ್ಷಕವಾಗಿದೆ. ಇದೇ ರೀತಿ ಆದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. […]
ಬೆಂಗಳೂರು: ಬಿಹಾರದ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.
EVM ಮೇಲೆ ದುರ್ಬಳಕೆ ಆರೋಪ ಕೇಳಿಬರ್ತಿದೆ. ಅಮೆರಿಕಾದಲ್ಲೂ ಬ್ಯಾಲೆಟ್ ಪೇಪರ್ ಮುಖಾಂತರ ಮತದಾನ ನಡೆಯುತ್ತೆ. ಅಲ್ಲದೆ ಇವಿಎಂ ಯಾರು ಮಾಡಿರೋದು? ಮನುಷ್ಯರೇ ಮಾಡಿರುವುದು. ಹಾಗಾಗಿ ಇವಿಎಂ ದುರ್ಬಳಕೆ ಮಾಡಿಕೊಳ್ಳೋಕೆ ಅವಕಾಶವಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪ ಮಾಡಿದ್ದಾರೆ.
ಆರ್.ಆರ್. ನಗರದಲ್ಲೂ ಡೌಟು: ಈ ವಿಚಾರವಾಗಿ ಚುನಾವಣಾ ಆಯೋಗ ಮೂಕಪ್ರೇಕ್ಷಕವಾಗಿದೆ. ಇದೇ ರೀತಿ ಆದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಹಾಗಾಗಿ ಇವಿಎಂ ರದ್ಧು ಮಾಡಿ ಬ್ಯಾಲೆಟ್ ತರಬೇಕು. ಎಲ್ಲಾ ಪಕ್ಷಗಳು ಇದನ್ನ ಒತ್ತಾಯಿಸುವುದರ ಜೊತೆಗೆ ಸುಪ್ರೀಂ ಕೋರ್ಟ್ಗೆ ಪತ್ರ ಅಭಿಯಾನ ಮಾಡಬೇಕು ಎಂದಿದ್ದಾರೆ. ಆರ್.ಆರ್. ನಗರದಲ್ಲಿ ಅಷ್ಟೊಂದು ಅಂತರದ ಸೋಲು ಸಾಧ್ಯವಿಲ್ಲ. ವೋಟಿಂಗ್ ಪ್ಯಾಟ್ರನ್ ಚೇಂಜ್ ಆಗಿದೆ ಎಂದು ಬೆಂಗಳೂರಿನಲ್ಲಿ ಇವಿಎಂ ಹ್ಯಾಕ್ ಬಗ್ಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
Published On - 12:51 pm, Fri, 13 November 20