ಚುನಾವಣೆ ಮೂಲಕ ಪಕ್ಷದ ಅಧ್ಯಕ್ಷರನ್ನ ಆಯ್ಕೆ ಮಾಡುವ ವ್ಯವಸ್ಥೆ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ: ಜೈರಾಮ್ ರಮೇಶ್

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಇದೇ ಅಕ್ಟೋಬರ್ 17ರಂದು ಮತದಾನ ನಡೆಯಲಿದೆ. ಇನ್ನು ಈ ಬಗ್ಗೆ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.

ಚುನಾವಣೆ ಮೂಲಕ ಪಕ್ಷದ ಅಧ್ಯಕ್ಷರನ್ನ ಆಯ್ಕೆ ಮಾಡುವ ವ್ಯವಸ್ಥೆ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ: ಜೈರಾಮ್ ರಮೇಶ್
Jairam ramesh
TV9kannada Web Team

| Edited By: Ramesh B Jawalagera

Sep 30, 2022 | 6:23 PM

ಚಾಮರಾಜನಗರ: ತೀವ್ರ ಕುತೂಹಲ ಮೂಡಿಸಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ (AICC President Election) ಮೂವರು ಸ್ಪರ್ಧೆ ಮಾಡಿದ್ದಾರೆ. ಆದ್ರೆ, ಕಣದಲ್ಲಿ ತ್ರಿಪಾಠಿ ಹೊರತುಪಡಿಸಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಬಗ್ಗೆ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ (Jairam Ramesh) ಮಾತನಾಡಿ, ಚುನಾವಣೆ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ. ಗುರುತಿನ ಚೀಟಿ ಮೂಲಕವೇ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಕಟ್ಟಾಳು, ಕನ್ನಡದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಪಟ್ಟ ಬಹುತೇಕ ಖಚಿತ?

ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ನಮ್ಮಲ್ಲಿ ಮಾತ್ರ ಇದೆ. ಬೇರೆ ಪಕ್ಷದಲ್ಲಿ ಎಲೆಕ್ಷನ್ ಇಲ್ಲ. ನಮ್ಮ ಪಾರ್ಟಿಯಲ್ಲಿ ಸಿಸ್ಟಮ್ ಇದೆ. ಮಲ್ಲಿಕಾರ್ಜುನ್ ಖರ್ಗೆ ಆದ್ರೂ ಆಗಲಿ, ಶಶಿ ಥರೂರ್ ಆದ್ರೂ ಆಗಲಿ. ನಮಗೆ ಚುನಾವಣೆ ‌ಸಂಜೀವಿನಿ ಅಲ್ಲ, ಭಾರತ್ ಜೋಡೊ ಯಾತ್ರೆಯೇ ಸಂಜೀವಿನಿ. ಆಗ ಸಂಜೀವಿನಿ ಚಿಕ್ಕಮಗಳೂರಿನಿಂದ ಸಿಕ್ಕಿತ್ತು. ಈಗ ಮತ್ತೆ ಭಾರತ್ ಜೋಡೊ ಯಾತ್ರೆ ಮೂಲಕ ಸಂಜಿವಿನಿ ಸಿಗಲಿದೆ ಎಂದು ತಿಳಿಸಿದರು.

ನಾನು ವೈಯುಕ್ತಿಕವಾಗಿ ಒಬ್ಬರ ಬಗ್ಗೆ ಮಾತನಾಡಲ್ಲ. ನನಗೆ ಶಶಿ ತರೂರ್ ಗೊತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಗೊತ್ತು. ನಮ್ಮಲ್ಲಿ ದಲಿತ ಮತ್ತೊಂದು ಯಾವುದು ಇಲ್ಲ. ದಲಿತ ಎಂಬ ದೃಷ್ಟಿಕೋನದಿಂದ ನೋಡಬಾರದು. ಎಲ್ಲಾ ದೃಷ್ಟಿಕೋನಗಳಿಂದ‌ ನೋಡಬೇಕು ಎಂದರು.

ಖರ್ಗೆ ಅವರಿಗೆ 50 ವರ್ಷದ ರಾಜಕೀಯ ಇತಿಹಾಸ ಇದೆ. ಅವರನ್ನು ಎಲ್ಲಾ ದೃಷ್ಟಿಕೋನದಿಂದಲೂ ನೋಡಬೇಕು. ಖರ್ಗೆ ಅವರಿಗೆ ಎಲ್ಲಾ ಅರ್ಹತೆಗಳಿವೆ. ಅದೇ ರೀತಿ ಶಶಿ ತರೂರ್ ಅವರಿಗೂ ಎಲ್ಲ ಅರ್ಹತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತರೂರ್-ಖರ್ಗೆ ನಡುವೆ ಜಿದ್ದಾಜಿದ್ದಿ

ಎಐಸಿಸಿ ಅಧ್ಯಕ್ಷ ಚುನಾವಣೆ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸಿದೆ. ಅವರು ಸ್ಪರ್ಧೆ ಮಾಡ್ತಾರೆ. ಇವರು ಸ್ಪರ್ಧೆ ಮಾಡ್ತಾರೆ ಎನ್ನುವ ಸುದ್ದಿ, ಚರ್ಚೆಗಳ ಮಧ್ಯೆ ಕೊನೆ ಕ್ಷಣದಲ್ಲಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ.

ಹೌದು….ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್ ಸೇರಿದಂತೆ ಇನ್ನು ಕೆಲವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಇನ್ನು ತ್ರಿಪಾಠಿ ಸಹ ಚುನಾವಣೆ ಅಖಾಡಕ್ಕಿಳಿದ್ದಾರೆ. ಆದ್ರೆ, ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿದ್ದು, ಇದೇ ಅಕ್ಟೋಬರ್ 17ರಂದು ಮತದಾನ ನಡೆಯಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada