ಸಿಡಿಮದ್ದು ಸಿಡಿದು ಗಂಭೀರವಾಗಿ ಗಾಯಗೊಂಡ ಹಸು
ಯಾರಿಗೋ ಬಿಟ್ಟ ಬಾಣ ಯಾರಿಗೋ ತಾಕಿದ ಹಾಗೆ ಹಂದಿಗೆ ಇಟ್ಟ ಸಿಡಿಮದ್ದು ಸಿಡಿದು ಹಸುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ರಾಯರದೊಡ್ಡಿಯಲ್ಲಿ ನಡೆದಿದೆ.
ರಾಮನಗರ: ಪ್ರಾಣಿಗಳ ಮೇಲಿನ ಮನುಷ್ಯನ ಕ್ರೌರ್ಯ, ಅಟ್ಟಹಾಸ ಮುಂದುವರೆದಿದೆ. ಹಂದಿಗಳ ಕಾಟವನ್ನು ನಿಗ್ರಹಿಸಲು ಅವುಗಳಿಗೆ ಉರುಳು ಇಡುವುದು ಮಾಡಲಾಗುತ್ತಿದೆ. ಇನ್ನೊಂದೆಡೆ ಅವುಗಳನ್ನು ಬೇಟೆಯಾಡಲಾಗುತ್ತಿದೆ. ಅದರಂತೆ ಕಿರಾತಕರ ಗುಂಪೊಂದು ಜಮೀನಲ್ಲಿಟ್ಟ ಹಂದಿಯನ್ನು ಬೇಟೆಯಾಡುವ ನಿಟ್ಟಿನಲ್ಲಿ ಸಿಡಿಮದ್ದು ಇಟ್ಟಿದ್ದಾರೆ. ಯಾರಿಗೋ ಬಿಟ್ಟ ಬಾಣ ಯಾರಿಗೋ ತಾಕಿದ ಹಾಗೆ ಹಂದಿಗೆ ಇಟ್ಟ ಸಿಡಿಮದ್ದು ಸಿಡಿದು ಹಸುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ರಾಯರದೊಡ್ಡಿಯಲ್ಲಿ ನಡೆದಿದೆ.
ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಂದಿಗಳು ಇರುವುದನ್ನು ಗಮನಿಸಿದ ಕಿರಾತಕರು ಅವುಗಳನ್ನು ಬೇಟೆಯಾಡುವ ನಿಟ್ಟಿನಲ್ಲಿ ರಾಮಚಂದ್ರ ಎಂಬುವವರ ಜಮೀನಿನಲ್ಲಿ ಸಿಡಿಮದ್ದನ್ನು ತಂದಿಟ್ಟಿದ್ದಾರೆ. ಆದರೆ ಅದೇ ಜಮೀನಿನ ಮಾಲೀಕ ತಾನು ಸಾಕಿದ ಹಸುವಿನ ಹೊಟ್ಟೆ ತುಂಬಲಿ ಎಂದು ಮೇಯಲು ಬಿಟ್ಟಿದ್ದಾರೆ. ಅದರಂತೆ ಹಸು ತನ್ನ ಪಾಡಿಗೆ ಮೇವು ತಿನ್ನುತ್ತಾ ಮುಂದಕ್ಕೆ ಸಾಗಿದೆ. ಹೊಟ್ಟೆ ತುಂಬಿಸುವ ಭರದಲ್ಲಿ ಮೇಯುತ್ತಾ ಮುಂದಕ್ಕೆ ಸಾಗುತ್ತಿದ್ದ ಹಸುವಿಗೆ ಗೊತ್ತಿಲ್ಲದೆಂತೆ ಸಿಡಿಮದ್ದನ್ನು ಕಚ್ಚಿದ್ದು, ಬಾಯಿಯಲ್ಲೇ ಸಿಡಿದಿದೆ. ಪರಿಣಾಮವಾಗಿ ಹಸು ಗಂಭೀರವಾಗಿ ಗಾಯಗೊಂಡಿದೆ.
ಊಟದ ಎಲೆ ತಯಾರಿಸುವ ಶೆಡ್ಗೆ ಆಕಸ್ಮಿಕ ಬೆಂಕಿ
ಬಾಗಲಕೋಟೆ: ಊಟದ ಎಲೆ ತಯಾರಿಸುವ ಶೆಡ್ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಭಸ್ಮವಾಗಿರುವ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ. ಪರಯ್ಯ ತೆಳಗಿನಮನಿ ಎಂಬುವರು ತೇರದಾಳದ ದೇವರಾಜ ನಗರದಲ್ಲಿ ಊಟದ ಎಲೆ ತಯಾರಿಸುವ ಶೆಡ್ ಹೊಂದಿದ್ದು, ಮಧ್ಯಾಹ್ನ ಕಾರ್ಮಿಕರು ಊಟಕ್ಕೆ ತೆರಳಿದ್ದ ವೇಳೆ ಯಂತ್ರದ ಕಿಡಿಹಾರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುತ್ತಿದ್ದು, ಅಕ್ಕಪಕ್ಕದ ಅಂಗಡಿ, ಮನೆಗಳಿಗೆ ಬೆಂಕಿ ಆವರಿಸದಂತೆ ಎಚ್ಚರವಹಿಸಲಾಗಿದೆ. ಘಟನೆಯಲ್ಲಿ ಊಟದ ಎಲೆ ತಯಾರಿಸುವ ಯಂತ್ರ ಹಾಗೂ ಕಚ್ಚಾ ವಸ್ತುಗಳೆಲ್ಲ ಹಾನಿಗೊಳಗಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಚ್ಚಾ ಸಾಮಗ್ರಿ ಹಾಗೂ ಯಂತ್ರ ಸುಟ್ಟು ಕರಕಲಾಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Thu, 29 September 22