ಬೈಎಲೆಕ್ಷನ್ ಮೇಲೆ ಕೈ-ಕಮಲದ ಕಣ್ಣು: ಉದ್ಘಾಟನೆ ಆಯ್ತು ‘ರಾಜಕೀಯ ರಣಾಂಗಣ’!
ತುಮಕೂರು: ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯ ಘೋಷಣೆಗೂ ಮುನ್ನ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಭರ್ಜರಿ ಯೋಚನೆಗಳ ಜೊತೆ ಯೋಜನೆಗಳನ್ನ ರೂಪಿಸುತ್ತಿದ್ದಾರೆ. ಇದಕ್ಕೆ ಸಾಕ್ಷೆಯೆಂಬಂತೆ ಇಂದು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮಿನಿ ವಿಧಾನಸೌಧದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಸಚಿವರಾದ ಅರ್.ಅಶೋಕ್ ಹಾಗೂ ಮಾಧುಸ್ವಾಮಿಯವರಿಂದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಶಿರಾ ನಗರದ ಹೊರಭಾಗದಲ್ಲಿರುವ ನೂತನ ಕಟ್ಟಡದ ಎದುರು ಗಿಡಕ್ಕೆ ನೀರು ಎರೆದು ಸಚಿವರಿಬ್ಬರು ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ಬೈಎಲೆಕ್ಷನ್ ಘೋಷಣೆಗೂ ಮುನ್ನ ಶಿರಾ […]

ತುಮಕೂರು: ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯ ಘೋಷಣೆಗೂ ಮುನ್ನ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಭರ್ಜರಿ ಯೋಚನೆಗಳ ಜೊತೆ ಯೋಜನೆಗಳನ್ನ ರೂಪಿಸುತ್ತಿದ್ದಾರೆ.
ಇದಕ್ಕೆ ಸಾಕ್ಷೆಯೆಂಬಂತೆ ಇಂದು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮಿನಿ ವಿಧಾನಸೌಧದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಸಚಿವರಾದ ಅರ್.ಅಶೋಕ್ ಹಾಗೂ ಮಾಧುಸ್ವಾಮಿಯವರಿಂದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಶಿರಾ ನಗರದ ಹೊರಭಾಗದಲ್ಲಿರುವ ನೂತನ ಕಟ್ಟಡದ ಎದುರು ಗಿಡಕ್ಕೆ ನೀರು ಎರೆದು ಸಚಿವರಿಬ್ಬರು ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.
ಇದನ್ನೂ ಓದಿ: ಬೈಎಲೆಕ್ಷನ್ ಘೋಷಣೆಗೂ ಮುನ್ನ ಶಿರಾ ಕ್ಷೇತ್ರ ಗೆಲ್ಲೋಕೆ BJPಯಿಂದ ಆತುರದ ಸಿದ್ಧತೆ ಕಟ್ಟಡ ಉದ್ಘಾಟನೆಗೆ ಕಾಂಗ್ರೆಸ್ ಭಾರಿ ವಿರೋಧ ಈ ನಡುವೆ ಶಿರಾ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯ ಕಾಂಗ್ರೆಸ ಕಾರ್ಯಕರ್ತರಿಂದ ಭಾರಿ ವಿರೋಧ ವ್ಯಕ್ತವಾಯಿತು.
ಬೈಎಲೆಕ್ಷನ್ ಬೆನ್ನಲ್ಲೇ ಉದ್ಘಾಟನೆ ಮಾಡ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರು ಕಾಂಗ್ರೆಸ್ ಅವಧಿಯಲ್ಲಿ ಮಿನಿ ವಿಧಾನಸೌಧ ಮಂಜೂರಾಗಿತ್ತು. ಆದರೆ, ಕಟ್ಟಡವನ್ನು ಮಂಜೂರು ಮಾಡಿಸಿದ ಮಾಜಿ ಸಚಿವ ಟಿ.ಬಿ. ಜಯಚಂದ್ರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಜಯಚಂದ್ರರನ್ನು ಆಹ್ವಾನಿಸದೆ ಉದ್ಘಾಟನೆ ಮಾಡಲಾಗುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಉಪಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಮಾಡುತ್ತಿದ್ದಾರೆಂದು ಅಸಮಧಾನ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಸಹ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ ನಡೆದಿದ್ದು ಉಪಚುನಾವಣೆ ಬೆನ್ನಲ್ಲೇ ಮಿನಿ ವಿಧಾನಸೌಧದ ಉದ್ಘಾಟನೆ ಒಂದು ಗಿಮಿಕ್ ಎಂದು ಪಟ್ಟನಾಯಕನಹಳ್ಳಿ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಸಹ ಆಯೋಜಿಸಲಾಯಿತು.
ಸುಮಾರು 100 ಕ್ಕೂ ಹೆಚ್ಚು ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದ್ದು ಶಿರಾ IB ಸರ್ಕಲ್ನಲ್ಲಿ ಪ್ರತಿಭಟನಕಾರರನ್ನು ತಡೆಯಲು ಪೊಲೀಸರ ಸಿದ್ಧತೆ ಸಹ ನಡೆಸಿಕೊಂಡಿದ್ದರು.
IB ಸರ್ಕಲ್ನಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಭಟನಕಾರರನ್ನ ತಡೆಯಲು ಸಿದ್ಧತೆ ನಡೆಸಿದ ಪೊಲೀಸರು ಒಂದು ವೇಳೆ ಪ್ರತಿಭಟನೆ ತೀವ್ರಗೊಂಡರೆ ಪ್ರತಿಭಟನಕಾರರನ್ನ ಬಂಧಿಸಲು ಸಹ ಸಿದ್ಧತೆ ಮಾಡಿಕೊಂಡಿದ್ದರು.
Published On - 12:55 pm, Thu, 10 September 20