ಪ್ರಿಯಕರನ ಜೊತೆ 3 ಮಕ್ಕಳ ತಾಯಿ ಪರಾರಿ: ಅನಾಥರಾದ ಮಕ್ಕಳು, ಯಾವೂರಲ್ಲಿ?

ಪ್ರಿಯಕರನ ಜೊತೆ 3 ಮಕ್ಕಳ ತಾಯಿ ಪರಾರಿ: ಅನಾಥರಾದ ಮಕ್ಕಳು, ಯಾವೂರಲ್ಲಿ?

[lazy-load-videos-and-sticky-control id=”0H4i5Vyynuk”]

ಚಿಕ್ಕಬಳ್ಳಾಪುರ: ಆಕೆ ಮೂರು ಮಕ್ಕಳ ತಾಯಿ.. ಜೊತೆಗೆ ಪ್ರಾಣಕ್ಕೂ ಹೆಚ್ಚು ಪ್ರೀತಿಸೋ ಗಂಡ. ಆದ್ರೆ, ಆಕೆಗೆ ಅದೇನ್ ಕೊರತೆ ಆಯ್ತೋ ಏನೋ.. ತನ್ನ ಮಕ್ಕಳು-ಗಂಡನನ್ನ ಬಿಟ್ಟು ಮತ್ತೊಬ್ಬನ ಜೊತೆ ಪರಾರಿಯಾಗಿದ್ದಾಳೆ! ಇದ್ರಿಂದ ಆಕೆಯ ಗಂಡ, ಮಕ್ಕಳು, ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದಾರೆ.

ತಾಯಿ ಆಗಮನಕ್ಕಾಗಿ ಕಾದು ಕುಳಿತ ಮೂರು ಮಕ್ಕಳು..
ತಾಯಿಯ ಆರೈಕೆಯಲ್ಲಿ ಆಡಿಕೊಂಡಿರಬೇಕಾದ ಮಕ್ಕಳು, ತಮ್ಮ ತಾಯಿ ಆಗಮನಕ್ಕಾಗಿ ಕಾದು ಕುಳಿತಿವೆ. ಹೆಂಡತಿ ಎಲ್ಲಿ ಹೋದ್ಲೋ ಅಂತಾ ಗೊತ್ತಾಗದೆ ಗಂಡನಿಗೆ ಚಿಂತೆ ಕಾಡ್ತಿದೆ. ಆಕೆಯ ಕುಟುಂಬಸ್ಥರು ತಮ್ಮ ಮಗಳಿಗೆ ಏನಾಯ್ತೋ ಏನೋ ಅಂತಾ ಗಲಿಬಿಲಿಗೊಂಡಿದ್ದಾರೆ.

ಚಿಕ್ಕಬಳ್ಳಾಪುರ ನಗರದ ದರ್ಗಾ ಮೊಹಲ್ಲಾದಲ್ಲಿ ಈ ಘಟನೆ ನಡೆದಿದ್ದು, ದರ್ಗಾ ಮೊಹಲ್ಲಾದ 23 ವರ್ಷದ ತಸ್ಮಿಯಾ ತಾಜ್​ಳನ್ನ, 8 ವರ್ಷದ ಹಿಂದೆ ಚಿಕ್ಕಬಳ್ಳಾಪುರದ ನಕ್ಕಲಕುಂಟೆ ಬಡಾವಣೆಯ ಆಸೀಫುಲ್ಲಾ ಅನ್ನೋರಿಗೆ ಕೊಟ್ಟು ಮದುವೆ ಮಾಡಿದ್ರು.

ಇವರ ಸುಂದರ ಸಂಸಾರಕ್ಕೆ ಮೂರು ಮಕ್ಕಳು ಸಾಕ್ಷಿಯಾಗಿದ್ದಾರೆ. ಆದ್ರೂ ಆ ಗೃಹಿಣಿಗೆ ಅದೇನ್ ಕೊರತೆಯಾಗಿತ್ತೊ ಗೊತ್ತಿಲ್ಲ. ಇದೆ ತಿಂಗಳ ಆರನೇ ತಾರೀಖು ಮೆಡಿಕಲ್ ಶಾಪ್​ಗೆ ಹೋಗಿ ಬರ್ತಿನಿ ಅಂತ ಹೋದೋಳು ಮನೆಗೆ ವಾಪಸ್ ಬಂದಿಲ್ಲ. ಇದಕ್ಕೆ ಶಬ್ಬೀರ್ ಅನ್ನೋನು ಕಾರಣ ಅಂತಾ ಆಕೆಯ ಗಂಡ ಆಸೀಫ್ ಆರೋಪಿಸಿದ್ದಾರೆ.

ನನ್ನ ಮಗಳು ಶಬ್ಬೀರ್ ಕಿರುಕುಳದ ಬಗ್ಗೆ ನಮಗೆ ಹೇಳಿದ್ದಳು..
ತಸ್ಮಿಯಾ ನಾಪತ್ತೆಯಾಗಿರೋ ಕುರಿತು ಮಾತನಾಡಿರೋ ತಾಯಿ ನಗೀನ್ ತಾಜ್, ಶಬ್ಬೀರ್ ಇದೇ ರೀತಿ ಈ ಹಿಂದೆ ಹಲವು ಹೆಣ್ಣು ಮಕ್ಕಳ ತಲೆ ಕೆಡಿಸಿ ಕರೆದುಕೊಂಡು ಹೋಗಿದ್ದ. ನನ್ನ ಮಗಳು ಶಬ್ಬೀರ್ ಕಿರುಕುಳದ ಬಗ್ಗೆ ನಮಗೆ ಹೇಳಿದ್ಲು. ನಾವು ಇದನ್ನ ನಿರ್ಲಕ್ಷಿಸಿದ್ವಿ. ಈಗ ಅವನೇ ಆಕೆಯನ್ನ ಕರೆದುಕೊಂಡು ಹೋಗಿದ್ದಾನೆ. ನಮ್ಮ ಮಗಳು ಮನೆಗೆ ವಾಪಸ್ ಬರುವಂತೆ ಮಾಡಿ ಅಂತಾ ಮನವಿ ಮಾಡಿದ್ದಾರೆ.

ನಕ್ಕಲಕುಂಟೆಯ ಶಬ್ಬೀರ್​ಗೆ ಗೃಹಿಣಿಯರ ತಲೆ ಕೆಡಿಸಿ ಕರೆದುಕೊಂಡು ಹೋಗೋ ಅಭ್ಯಾಸವಿದೆ. ಈಗ ಅವನೇ ತಸ್ಮಿಯಾ ತಾಜ್​ಳನ್ನ ಕರೆದುಕೊಂಡು ಹೋಗಿದ್ದಾನೆ ಅಂತಾ ತಸ್ಮಿಯಾ ಪೋಷಕರು ಮತ್ತು ಆಕೆಯ ಗಂಡ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತಸ್ಮಿಯಾಗಾಗಿ ಶೋಧ ಕಾರ್ಯ ನಡೆಸುದ್ದಾರೆ.
-ಭೀಮಪ್ಪ ಪಾಟೀಲ

Click on your DTH Provider to Add TV9 Kannada