ಮತ್ತದೇ.. BBMP ನಿರ್ಲಕ್ಷ್ಯ! ಪಾಸಿಟೀವ್ ಬಂದು 3 ದಿನ ಆದರೂ ಸಿಗ್ತಾಯಿಲ್ಲ ಚಿಕಿತ್ಸೆ

ಬೆಂಗಳೂರು: ಕೊರೊನಾ ಸೋಂಕು ಧೃಡಪಟ್ಟು ಮೂರು ದಿನ ಕಳೆದಿದ್ದರೂ, ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೀರಸಂದ್ರದಲ್ಲಿ ನೆಲೆಸಿರುವ ಇಬ್ಬರು ಸ್ನೇಹಿತರು ಇದೇ ತಿಂಗಳು 8 ನೇ ತಾರೀಖಿನಂದು ಎಚ್ಎಸ್ಆರ್ ಲೇಔಟ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು, ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿದೆ. ತದನಂತರ ಮತ್ತೊಮ್ಮೆ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ ಆದರೆ ಅಲ್ಲೂ ಸಹ ಪಾಸಿಟಿವ್ ವರದಿ ಬಂದಿದೆ. […]

ಮತ್ತದೇ.. BBMP ನಿರ್ಲಕ್ಷ್ಯ! ಪಾಸಿಟೀವ್ ಬಂದು 3 ದಿನ ಆದರೂ ಸಿಗ್ತಾಯಿಲ್ಲ ಚಿಕಿತ್ಸೆ
ಸಾಧು ಶ್ರೀನಾಥ್​

Updated on: Aug 11, 2020 | 11:21 AM

ಬೆಂಗಳೂರು: ಕೊರೊನಾ ಸೋಂಕು ಧೃಡಪಟ್ಟು ಮೂರು ದಿನ ಕಳೆದಿದ್ದರೂ, ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೀರಸಂದ್ರದಲ್ಲಿ ನೆಲೆಸಿರುವ ಇಬ್ಬರು ಸ್ನೇಹಿತರು ಇದೇ ತಿಂಗಳು 8 ನೇ ತಾರೀಖಿನಂದು ಎಚ್ಎಸ್ಆರ್ ಲೇಔಟ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು, ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿದೆ. ತದನಂತರ ಮತ್ತೊಮ್ಮೆ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ ಆದರೆ ಅಲ್ಲೂ ಸಹ ಪಾಸಿಟಿವ್ ವರದಿ ಬಂದಿದೆ.

ಹೀಗಾಗಿ ಇಬ್ಬರು ಯುವಕರು ತಮ್ಮನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದು ಬಿಬಿಎಂಪಿ ಹೆಲ್ಪ್ ಲೈನ್ ಗೆ ಕರೆ ಮಾಡಿದ್ದಾರೆ.ಆದರೆ BBMP ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಇದರಿಂದಾಗಿ ಮೂರು ದಿನಗಳಿಂದ ಮನೆಯಲ್ಲಿಯೇ ನರಳುತ್ತಿರುವ ಸೋಂಕಿತರು, ಮನೆಯಿಂದ ಹೊರಗೆ ಹೋಗಲಾಗದೆ, ದಿನನಿತ್ಯದ ವಸ್ತುಗಳನ್ನು ಖರೀದಿಸಲಾಗದೇ ಪರದಾಡುವಂತಹ ಸ್ಥಿತಿ ಎದುರಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us