ಕೊರೊನಾ ಫ್ರಂಟ್ ಲೈನ್ ವಾರಿಯರ್​ಗೂ ಸಿಗಲಿಲ್ಲ ಸರಿಯಾದ ಚಿಕಿತ್ಸೆ, ಎಲ್ಲಿ​?

ಕೊರೊನಾ ಫ್ರಂಟ್ ಲೈನ್ ವಾರಿಯರ್​ಗೂ ಸಿಗಲಿಲ್ಲ ಸರಿಯಾದ ಚಿಕಿತ್ಸೆ, ಎಲ್ಲಿ​?

ಬೆಂಗಳೂರು:ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ. SK ಗಾರ್ಡನ್ ನ ಸರ್ಕಾರಿ ಉರ್ದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಮೊದಲು ಜ್ವರ ಕಾಣಿಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಜ್ವರ ಕಡಿಮೆಯಾಗಿತ್ತು. ಆದರೆ ನಿನ್ನೆ ಸಂಜೆಯಿಂದ ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಶಿಕ್ಷಕಿಯನ್ನು ಶಿಫಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಶಿಕ್ಷಕಿಯನ್ನು ವಾಪಸ್ ಕಳಿಸಲಾಗಿದೆ. ಹೀಗಾಗಿ ಜೈನ್ ಆಸ್ಪತ್ರೆಗೆ ಕರೆದುಕೊಂಡು […]

sadhu srinath

| Edited By:

Jul 26, 2020 | 2:09 AM

ಬೆಂಗಳೂರು:ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ.

SK ಗಾರ್ಡನ್ ನ ಸರ್ಕಾರಿ ಉರ್ದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಮೊದಲು ಜ್ವರ ಕಾಣಿಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಜ್ವರ ಕಡಿಮೆಯಾಗಿತ್ತು. ಆದರೆ ನಿನ್ನೆ ಸಂಜೆಯಿಂದ ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಶಿಕ್ಷಕಿಯನ್ನು ಶಿಫಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಶಿಕ್ಷಕಿಯನ್ನು ವಾಪಸ್ ಕಳಿಸಲಾಗಿದೆ.

ಹೀಗಾಗಿ ಜೈನ್ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲಿ ಕೋವಿಡ್ ವರದಿ ಇಲ್ಲದ ಕಾರಣ ಹೇಳಿ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ನಂತರ ಸೆಂಟ್ ಮಾರ್ಥಾಸ್, ರಾಜೀವ್ ಗಾಂಧಿ, ಫ್ರಂಟ್ ಲೈನ್ ಆಸ್ಪತ್ರೆ, ಪೀಪಲ್ ಟ್ರೀ ಸೇರಿದಂತೆ ಹತ್ತು ಆಸ್ಪತ್ರೆಗಳಿಗೆ ಅಲೆದ್ರು ಯಾರೂ ದಾಖಲು ಮಾಡಿಕೊಳ್ಳಲಿಲ್ಲ.

ಕೊನೆಗೆ ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿ ರಾತ್ರಿಯಿಡೀ ಆರೈಕೆ‌ ಮಾಡಲಾಗಿದೆ. ಇಂದು ಬೆಳಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಕರೆ ಮಾಡಿದರೆ ಎಷ್ಟು ಸಮಯ ಕಳೆದರು ಆಂಬುಲೆನ್ಸ್ ಬಂದಿಲ್ಲ.

ಹೀಗಾಗಿ ಕುಟುಂಬಸ್ಥರೇ ಶಿಕ್ಷಕಿಯನ್ನು ಆಟೋದಲ್ಲಿ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಶಿಕ್ಷಕಿ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಶಿಕ್ಷಕಿ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಿತ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದರು. ಇಂತಹ ಫ್ರಂಟ್ ಲೈನ್ ವಾರಿಯರ್ ಗೆ ಸರ್ಕಾರ ಸೂಕ್ತ ಚಿಕಿತ್ಸೆ ನೀಡಲು ವಿಫಲವಾಗಿದೆ. ಹೀಗಾಗಿ ಇನ್ನು ಜನಸಾಮಾನ್ಯರ ಗತಿಯೇನು ಎಂದು ಶಿಕ್ಷಕಿಯ ಕುಟುಂಬಸ್ಥರು ಆಸ್ಪತ್ರೆಗಳ ಮೇಲೆ ದೂರಿನ ಸುರಿಮಳೆಗೈದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada