ಬೆಂಗಳೂರು: ಕೊರೊನಾ ರಣಕೇಕೆಗೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಂಕಿನ ಕೊನೆ ಹಂತವಾದ ತೀವ್ರ ಉಸಿರಾಟದ ಸಮಸ್ಯೆ ತಲುಪಿ ವೆಂಟಿಲೇಟರ್ಗಳ ಮೊರೆ ಹೋಗುತ್ತಿರೋರಲ್ಲಿ ಬದುಕುಳಿಯುತ್ತಿರೋರ ಸಂಖ್ಯೆ ಬಹಳ ವಿರಳವಂತೆ. ಈ ಆತಂಕಕಾರಿ ಮಾಹಿತಿಯನ್ನ ಖುದ್ದು ವೈದ್ಯರೇ ನೀಡಿದ್ದಾರೆ.
‘ವೆಂಟಿಲೇಟರ್ಗೆ ಹೋದ ರೋಗಿ ಉಳಿಯೋದೇ ಡೌಟ್’
ಹೌದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನೆರವು ಪಡೆದು ಉಸಿರಾಡುತ್ತಿದ್ದ ರೋಗಿಗಳಲ್ಲಿ ಬದುಕುಳಿದಿದ್ದು ಕೇವಲ ಒಬ್ಬರೇ. ಇದುವರೆಗೂ ಸುಮಾರು ಐಸಿಯುಗೆ ಸುಮಾರು 205 ಮಂದಿ ಸೋಂಕಿತರು ದಾಖಲಾಗಿದ್ದರಂತೆ. ಅವುಗಳಲ್ಲಿ, 91 ಸೋಂಕಿತರು ವೆಂಟಿಲೇಟರ್ ನೆರವು ಪಡೆದಿದ್ದರಂತೆ. ಈ ಪೈಕಿ 90 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಹೀಗಾಗಿ, ವೆಂಟಿಲೇಟರ್ಗೆ ಹೋದ ರೋಗಿ ಉಳಿಯೋದೇ ಡೌಟ್ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ.