ಅಂಗೈಯಲ್ಲೇ ಮೊಬೈಲಿನಲ್ಲಿ ಸಕಲವೂ ಸಿಗುವಾಗ ರವಿವರ್ಮನ ಕ್ಯಾಲೆಂಡರ್ ನೋಡೋರು ಯಾರು?​

ರವಿ ವರ್ಮನ ಕುಂಚದ ಕಲೆ ಭಲೆ ಸಾಕಾರವೋ ಅಂತಾ PB ಶ್ರೀನಿವಾಸ್ ಅವ​ರ ಮಧುರ ಕಂಠದಲ್ಲಿ ಮೂಡಿಬಂದಿರುವ ಅಮರ ಕನ್ನಡ ಚಿತ್ರಗೀತೆಯನ್ನ ಕೇಳದವರು ಯಾರೂ ಇಲ್ಲ. ಅದೇ ಧಾಟಿಯಲ್ಲಿ ಹೇಳುವುದಾದರೆ ಮಹಾನ್​ ಕಲಾವಿದ ರಾಜಾ ರವಿ ವರ್ಮರ ಅದ್ಭುತ ಕಲಾಕೃತಿಗಳನ್ನ ನೋಡಿರದವರೇ ಇಲ್ಲ. ಹೌದು, ಜನಸಾಮಾನ್ಯರು ಬಹು ಸುಲಭವಾಗಿ ಗುರುತಿಸುವ ಚಿತ್ರಕಲೆಗಳು ಎಂದರೆ ಅದು ರಾಜಾ ರವಿ ವರ್ಮ ಅವರ ಕುಂಚದಲ್ಲಿ ಅರಳಿದ ಕಲಾಕೃತಿಗಳು. ಇದಕ್ಕೆ ಒಂದು ಪ್ರಮುಖ ಕಾರಣ ಈ ಕಲಾಕೃತಿಗಳು ಅತಿ ಸುಲಭವಾಗಿ ಜನರಿಗೆ […]

ಅಂಗೈಯಲ್ಲೇ ಮೊಬೈಲಿನಲ್ಲಿ ಸಕಲವೂ ಸಿಗುವಾಗ ರವಿವರ್ಮನ ಕ್ಯಾಲೆಂಡರ್ ನೋಡೋರು ಯಾರು?​
Follow us
KUSHAL V
|

Updated on:Jul 16, 2020 | 4:15 PM

ರವಿ ವರ್ಮನ ಕುಂಚದ ಕಲೆ ಭಲೆ ಸಾಕಾರವೋ ಅಂತಾ PB ಶ್ರೀನಿವಾಸ್ ಅವ​ರ ಮಧುರ ಕಂಠದಲ್ಲಿ ಮೂಡಿಬಂದಿರುವ ಅಮರ ಕನ್ನಡ ಚಿತ್ರಗೀತೆಯನ್ನ ಕೇಳದವರು ಯಾರೂ ಇಲ್ಲ. ಅದೇ ಧಾಟಿಯಲ್ಲಿ ಹೇಳುವುದಾದರೆ ಮಹಾನ್​ ಕಲಾವಿದ ರಾಜಾ ರವಿ ವರ್ಮರ ಅದ್ಭುತ ಕಲಾಕೃತಿಗಳನ್ನ ನೋಡಿರದವರೇ ಇಲ್ಲ.

ಹೌದು, ಜನಸಾಮಾನ್ಯರು ಬಹು ಸುಲಭವಾಗಿ ಗುರುತಿಸುವ ಚಿತ್ರಕಲೆಗಳು ಎಂದರೆ ಅದು ರಾಜಾ ರವಿ ವರ್ಮ ಅವರ ಕುಂಚದಲ್ಲಿ ಅರಳಿದ ಕಲಾಕೃತಿಗಳು. ಇದಕ್ಕೆ ಒಂದು ಪ್ರಮುಖ ಕಾರಣ ಈ ಕಲಾಕೃತಿಗಳು ಅತಿ ಸುಲಭವಾಗಿ ಜನರಿಗೆ ಕಾಣಸಿಗುವಂತೆ ಆಗಿದ್ದು. ಅದೂ ಯಾವುದರ ಮುಖಾಂತರ ಗೊತ್ತಾ? ಹಿಂದಿನ ತಲೆಮಾರಿನವರ ಮನೆಗಳಲ್ಲಿ ಗೋಡೆಯ ಮೇಲೆ ನೇತು ಹಾಕಿರುವ ದೇವರ ಚಿತ್ರವಿರುವ ಹಳೆಯ ಕ್ಯಾಲೆಂಡರ್​ಗಳಲ್ಲಿ.

ಕ್ಯಾಲೆಂಡರ್​ ಮೂಲಕ ಜನಸಾಮಾನ್ಯರಿಗೆ ಎಟುಕಿದ ಕಲೆ ಹೌದು, 19ನೇ ಶತಮಾನದಲ್ಲಿ ಹಿಂದೂ ದೇವತೆಗಳು, ಪೌರಾಣಿಕ ಪ್ರಸಂಗಗಳು ಹಾಗೂ ಪ್ರಾಕೃತಿಕ ಸೊಬಗನ್ನು ಒಳಗೊಂಡ ನಯನ ಮನೋಹರ ಚಿತ್ರಕಲೆಗಳನ್ನು ರಚಿಸಿ, ಖ್ಯಾತಿ ಪಡೆದ ಮಹಾನ್​ ಕಲಾವಿದ ರಾಜಾ ರವಿ ವರ್ಮ. ಆದರೆ, ತಮ್ಮ ಕಲಾ ಸಂಪತ್ತನ್ನು ಕೇವಲ ಶ್ರೀಮಂತರಿಗೆ ಸೀಮಿತವಾಗಿಸದೆ ಬಡವರಿಗೂ ತಲುಪುವಂಥ ಕೆಲಸಕ್ಕೆ ಮುಂದಾದರು. ದೇಶದ ಮೊಟ್ಟಮೊದಲ ಶಿಲಾಮುದ್ರಣ ಅಥವಾ ಲಿಥೋಗ್ರಾಫಿಕ್​ ಪ್ರೆಸ್​ ಸ್ಥಾಪಿಸಿ ತಮ್ಮ ಕಲಾಕೃತಿಯ ಪ್ರತಿಗಳನ್ನ ಅತಿ ಕಡಿಮೆ ಬೆಲೆಯಲ್ಲಿ ಜನರಿಗೆ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿದರು. ಹೀಗಾಗಿ, ಇವುಗಳು ಅಂದಿನ ಕ್ಯಾಲಂಡರ್​ಗಳಲ್ಲೂ ಸೇರಿ ಜನಸಾಮಾನ್ಯರ ಮನೆಯ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿತು.

Digital India ಕಾಲದಲ್ಲಿ ಗೋಡೆ ಕ್ಯಾಲೆಂಡರ್​ಗೆ ಎಲ್ಲಿಯ ಜಾಗ? ಹೀಗೆ ಜನಸಾಮಾನ್ಯರ ಮನೆ ಸೇರಿದ ಈ ಕ್ಯಾಲೆಂಡರ್​ ಚಿತ್ರಕಲೆ (Calendar Art) ಕಾಲಕ್ರಮೇಣ ಕ್ಷೀಣಿಸುತ್ತಾ ಬಂದಿದೆ. ಅಲ್ಲಿ ಇಲ್ಲಿ ದೇವರ ಚಿತ್ರಗಳಿರುವ ಕ್ಯಾಲೆಂಡರ್​ಗಳು ಬಿಟ್ಟರೆ ಬೇರೆಲ್ಲೂ ಅವು ಕಾಣಸಿಗುವುದಿಲ್ಲ. ಈಗಂತೂ ಬಿಡಿ.. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕ್ರಾಂತಿಯಿಂದಾಗಿ ಅನೇಕ ಪಾರಂಪರಿಕ ರೂಢಿಗಳು ಮೂಲೆಗುಂಪಾಗಿವೆ. ಕುಳಿತಲ್ಲಿಯೇ ಕಂಪ್ಯೂಟರ್ ಪರದೆಯ ಮುಂದೆ ಎಲ್ಲವೂ ತೇಲಿಬಂದುಬಿಡುತ್ತದೆ. ಇನ್ನು ಮೊಬೈಲ್ ಕ್ಷಿಪ್ರಕ್ರಾಂತಿಯ ಯುಗದಲ್ಲಿ ಎಲ್ಲವೂ ಅಂಗೈಯಲ್ಲೇ ಕಾಣಸಿಗುತ್ತಿರುವಾಗ ಗೋಡೆಯ ಮೇಲಿನ ರಾಜಾ ರವಿವರ್ಮ ಕಲಾಕೃತಿಯ ಕ್ಯಾಲೆಂಡರ್​ ನೋಡುವ ವ್ಯವಧಾನ, ಪುರುಸೊತ್ತು ಯಾರಿಗಿದೆ? ಹಾಗಾಗಿ, ಕ್ಯಾಲೆಂಡರ್​ ಕಲೆ ಎಂದೇ ಪ್ರಸಿದ್ಧಿ ಪಡೆದ ಈ ಕಲಾ ವಿಭಾಗ ಸದ್ದಿಲ್ಲದೆ ಅವಸಾನದತ್ತ ಹೆಜ್ಜೆಯಿಡುತ್ತಿದೆ.

Published On - 4:04 pm, Thu, 16 July 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ