IPL 2025: ದುರಹಂಕಾರಿ ಶ್ರೇಯಸ್; ಕೊಹ್ಲಿ ಮಾತಿಗೂ ಬೆಲೆ ಕೊಡದ ಪಂಜಾಬ್ ನಾಯಕ
Virat Kohli vs Shreyas Iyer: ಆರ್ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ನಡುವಿನ ಮಾತಿನ ಚಕಮಕಿ ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಶ್ರೇಯಸ್ ಅಯ್ಯರ್ ಮಾತ್ರ ಕೊಹ್ಲಿಯನ್ನು ಕಡೆಗಣಿಸಿದ್ದು, ಕೊಹ್ಲಿ ಅಭಿಮಾನಿಗಳು ಕೆರಳುವಂತೆ ಮಾಡಿದೆ.
ಐಪಿಎಲ್ 37ನೇ ಪಂದ್ಯದಲ್ಲಿ ಆರ್ಸಿಬಿ, ಪಂಜಾಬ್ ತಂಡವನ್ನು ಮಣಿಸಿದ ಕೂಡಲೇ ವಿರಾಟ್ ಕೊಹ್ಲಿ, ಪಂಜಾಬ್ ನಾಯಕ ಶ್ರೇಯಸ್ ಕಡೆಗೆ ತಿರುಗಿ ತಮಾಷೆಯಾಗಿ ಸಂಭ್ರಮಿಸಿದ್ದರು. ಆದರೆ ಶ್ರೇಯಸ್ ಮಾತ್ರ ಇದನ್ನು ತಮಾಷೆಯಾಗಿ ತೆಗೆದುಕೊಳ್ಳಲಿಲ್ಲ. ಪಂದ್ಯ ಮುಗಿದ ಬಳಿಕ ಹ್ಯಾಂಡ್‌ಶೇಕ್ ನೀಡುವ ವೇಳೆ ಕೊಹ್ಲಿ ನಗುತ್ತಲೇ ಶ್ರೇಯಸ್ ಬಳಿ ಮಾತನಾಡುತ್ತಿದ್ದರೆ, ಶ್ರೇಯಸ್ ಮಾತ್ರ ಕೋಪದಲ್ಲೇ ಪ್ರತಿಕ್ರಿಸಿದರು. ಕೊಹ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೆ, ಶ್ರೇಯಸ್ ಮಾತ್ರ ಕೊಹ್ಲಿ ಮಾತಿಗೆ ಮನ್ನಣೆಯನ್ನೇ ಕೊಡಲಿಲ್ಲ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಯ್ಯರ್ ವಿರುದ್ಧ ಗರಂ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Apr 20, 2025 09:17 PM