ಶಾಸಕಿ ಸೌಮ್ಯ ಟ್ವೀಟ್​ಗೂ ಆಸ್ಪತ್ರೆಗಳು ಡೋಂಟ್ ಕೇರ್: ಹಸುಗೂಸು ಬಿಟ್ಟು ಅಸುನೀಗಿದ ಸೋಂಕಿತೆ

| Updated By: ಸಾಧು ಶ್ರೀನಾಥ್​

Updated on: Jul 31, 2020 | 10:11 AM

ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಸೋಂಕಿತ ಬಾಣಂತಿ ಸಾವನ್ನಪ್ಪಿರೋ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೆರಿಗೆ ಆದ ಬಳಿಕ ಬಾಣಂತಿಗೆ ಸೋಂಕು ದೃಢವಾಗಿತ್ತು. ಆದರೆ, ನಿನ್ನೆ ತಡರಾತ್ರಿವರೆಗೂ ಬೆಡ್ ಸಿಗದ ಹಿನ್ನೆಲೆಯಲ್ಲಿ 26 ವರ್ಷದ ಬಾಣಂತಿ ಌಂಬುಲೆನ್ಸ್​ನಲ್ಲಿ ಅಲೆಡಾಡ ಬೇಕಾಯಿತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಆರೋಗ್ಯ ಅಧಿಕಾರಿಗಳಿಗೆ ಎಷ್ಟು ಕರೆ ಮಾಡಿದರೂ ರೆಸ್ಪಾನ್ಸ್ ಸಿಗಲಿಲ್ಲ. ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್​ಗೂ ಕ್ಯಾರೇ ಅನ್ನಲಿಲ್ಲ ಜೊತೆಗೆ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿಯವರಿಗೆ ಸಹಾಯಕ್ಕಾಗಿ ಕುಟುಂಬಸ್ಥರು […]

ಶಾಸಕಿ ಸೌಮ್ಯ ಟ್ವೀಟ್​ಗೂ ಆಸ್ಪತ್ರೆಗಳು ಡೋಂಟ್ ಕೇರ್: ಹಸುಗೂಸು ಬಿಟ್ಟು ಅಸುನೀಗಿದ ಸೋಂಕಿತೆ
Follow us on

ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಸೋಂಕಿತ ಬಾಣಂತಿ ಸಾವನ್ನಪ್ಪಿರೋ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಹೆರಿಗೆ ಆದ ಬಳಿಕ ಬಾಣಂತಿಗೆ ಸೋಂಕು ದೃಢವಾಗಿತ್ತು. ಆದರೆ, ನಿನ್ನೆ ತಡರಾತ್ರಿವರೆಗೂ ಬೆಡ್ ಸಿಗದ ಹಿನ್ನೆಲೆಯಲ್ಲಿ 26 ವರ್ಷದ ಬಾಣಂತಿ ಌಂಬುಲೆನ್ಸ್​ನಲ್ಲಿ ಅಲೆಡಾಡ ಬೇಕಾಯಿತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಆರೋಗ್ಯ ಅಧಿಕಾರಿಗಳಿಗೆ ಎಷ್ಟು ಕರೆ ಮಾಡಿದರೂ ರೆಸ್ಪಾನ್ಸ್ ಸಿಗಲಿಲ್ಲ.

ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್​ಗೂ ಕ್ಯಾರೇ ಅನ್ನಲಿಲ್ಲ
ಜೊತೆಗೆ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿಯವರಿಗೆ ಸಹಾಯಕ್ಕಾಗಿ ಕುಟುಂಬಸ್ಥರು ಕರೆ ಮಾಡಿದ್ದರು. ಬೆಡ್ ಬೇಕೆಂದು ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದರೂ ಎಲ್ಲೂ ಸಿಗಲಿಲ್ಲ. ಹಾಗಾಗಿ, ನಾಗರಭಾವಿಯಲ್ಲಿ ಇಂದು ಬೆಳಗಿನ ಜಾವ ಬಾಣಂತಿ 6 ದಿನಗಳ ಪುಟ್ಟ ಕಂದಮ್ಮನನ್ನ ಬಿಟ್ಟು ಇಹಲೋಕ ತ್ಯಜಿಸಿದ್ದಾಳೆ.