ವಿದ್ಯುತ್ ತಗುಲುತ್ತಿದ್ದಂತೆ ಜೋರಾಗಿ ಘೀಳಿಟ್ಟು.. ಅಸುನೀಗಿದ ಒಂಟಿ ಸಲಗ
ಚಿಕ್ಕಮಗಳೂರು: ಮಾನವನ ಕ್ರೌರ್ಯ ಎಗ್ಗಿಲ್ಲದೆ ಸಾಗಿದೆ. ಇದೀಗ, ವಿದ್ಯುತ್ ತಂತಿ ತಗುಲಿ ಕಾಫಿನಾಡಲ್ಲಿ ಮತ್ತೊಂದು ಆನೆ ಬಲಿಯಾಗಿದೆ. ಅಂದ ಹಾಗೆ, ಘಟನೆ ನಡೆದಿರೋದು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ. ಜೋಳದ ಹೊಲಕ್ಕೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗಲಿ ಬೃಹತ್ ಗಾತ್ರದ ಒಂಟಿ ಸಲಗ ಕೊನೆಯುಸಿರೆಳೆದಿದೆ. ಹುಲಿಯಪ್ಪ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿಲಾಗಿತ್ತು ಎಂದು ತಿಳಿದುಬಂದಿದೆ. ವಿದ್ಯುತ್ ತಗಲುತ್ತಿದ್ದಂತೆ ಜೋರಾಗಿ ಘೀಳಿಟ್ಟ ಒಂಟಿ ಸಲಗ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ […]
ಚಿಕ್ಕಮಗಳೂರು: ಮಾನವನ ಕ್ರೌರ್ಯ ಎಗ್ಗಿಲ್ಲದೆ ಸಾಗಿದೆ. ಇದೀಗ, ವಿದ್ಯುತ್ ತಂತಿ ತಗುಲಿ ಕಾಫಿನಾಡಲ್ಲಿ ಮತ್ತೊಂದು ಆನೆ ಬಲಿಯಾಗಿದೆ. ಅಂದ ಹಾಗೆ, ಘಟನೆ ನಡೆದಿರೋದು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ.
ಜೋಳದ ಹೊಲಕ್ಕೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗಲಿ ಬೃಹತ್ ಗಾತ್ರದ ಒಂಟಿ ಸಲಗ ಕೊನೆಯುಸಿರೆಳೆದಿದೆ. ಹುಲಿಯಪ್ಪ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿಲಾಗಿತ್ತು ಎಂದು ತಿಳಿದುಬಂದಿದೆ. ವಿದ್ಯುತ್ ತಗಲುತ್ತಿದ್ದಂತೆ ಜೋರಾಗಿ ಘೀಳಿಟ್ಟ ಒಂಟಿ ಸಲಗ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಹುಲಿಯಪ್ಪನ ಕುಟುಂಬ ನಾಪತ್ತೆಯಾಗಿದೆ. ಈ ಭಾಗದಲ್ಲಿ ಈವರೆಗೂ ಒಟ್ಟು ನಾಲ್ಕು ಆನೆಗಳು ಇದೇ ರೀತಿ ಸಾವನ್ನಪ್ಪಿದೆ. ಸ್ಥಳಕ್ಕೆ ಕಡೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.