ಶಾಸಕಿ ಸೌಮ್ಯ ಟ್ವೀಟ್ಗೂ ಆಸ್ಪತ್ರೆಗಳು ಡೋಂಟ್ ಕೇರ್: ಹಸುಗೂಸು ಬಿಟ್ಟು ಅಸುನೀಗಿದ ಸೋಂಕಿತೆ
ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಸೋಂಕಿತ ಬಾಣಂತಿ ಸಾವನ್ನಪ್ಪಿರೋ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೆರಿಗೆ ಆದ ಬಳಿಕ ಬಾಣಂತಿಗೆ ಸೋಂಕು ದೃಢವಾಗಿತ್ತು. ಆದರೆ, ನಿನ್ನೆ ತಡರಾತ್ರಿವರೆಗೂ ಬೆಡ್ ಸಿಗದ ಹಿನ್ನೆಲೆಯಲ್ಲಿ 26 ವರ್ಷದ ಬಾಣಂತಿ ಌಂಬುಲೆನ್ಸ್ನಲ್ಲಿ ಅಲೆಡಾಡ ಬೇಕಾಯಿತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಆರೋಗ್ಯ ಅಧಿಕಾರಿಗಳಿಗೆ ಎಷ್ಟು ಕರೆ ಮಾಡಿದರೂ ರೆಸ್ಪಾನ್ಸ್ ಸಿಗಲಿಲ್ಲ. ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ಗೂ ಕ್ಯಾರೇ ಅನ್ನಲಿಲ್ಲ ಜೊತೆಗೆ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿಯವರಿಗೆ ಸಹಾಯಕ್ಕಾಗಿ ಕುಟುಂಬಸ್ಥರು […]
ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಸೋಂಕಿತ ಬಾಣಂತಿ ಸಾವನ್ನಪ್ಪಿರೋ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಹೆರಿಗೆ ಆದ ಬಳಿಕ ಬಾಣಂತಿಗೆ ಸೋಂಕು ದೃಢವಾಗಿತ್ತು. ಆದರೆ, ನಿನ್ನೆ ತಡರಾತ್ರಿವರೆಗೂ ಬೆಡ್ ಸಿಗದ ಹಿನ್ನೆಲೆಯಲ್ಲಿ 26 ವರ್ಷದ ಬಾಣಂತಿ ಌಂಬುಲೆನ್ಸ್ನಲ್ಲಿ ಅಲೆಡಾಡ ಬೇಕಾಯಿತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಆರೋಗ್ಯ ಅಧಿಕಾರಿಗಳಿಗೆ ಎಷ್ಟು ಕರೆ ಮಾಡಿದರೂ ರೆಸ್ಪಾನ್ಸ್ ಸಿಗಲಿಲ್ಲ.
ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ಗೂ ಕ್ಯಾರೇ ಅನ್ನಲಿಲ್ಲ ಜೊತೆಗೆ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿಯವರಿಗೆ ಸಹಾಯಕ್ಕಾಗಿ ಕುಟುಂಬಸ್ಥರು ಕರೆ ಮಾಡಿದ್ದರು. ಬೆಡ್ ಬೇಕೆಂದು ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದರೂ ಎಲ್ಲೂ ಸಿಗಲಿಲ್ಲ. ಹಾಗಾಗಿ, ನಾಗರಭಾವಿಯಲ್ಲಿ ಇಂದು ಬೆಳಗಿನ ಜಾವ ಬಾಣಂತಿ 6 ದಿನಗಳ ಪುಟ್ಟ ಕಂದಮ್ಮನನ್ನ ಬಿಟ್ಟು ಇಹಲೋಕ ತ್ಯಜಿಸಿದ್ದಾಳೆ.
found out this patient died. I just don’t know what to say. A 26 year old.
— Sowmya Reddy | ಸೌಮ್ಯ ರೆಡ್ಡಿ (@Sowmyareddyr) July 31, 2020