ದೇವಸ್ಥಾನ ಬಳಿಯಿದ್ದ ಗೋದಾಮಿನಲ್ಲಿ ಹಸು, ಎಮ್ಮೆ ಕೊಂಬುಗಳ ಅಕ್ರಮ ದಾಸ್ತಾನು ಪತ್ತೆ
ಮೈಸೂರು: ಗೋದಾಮಿನಲ್ಲಿ ಹಸು ಮತ್ತು ಎಮ್ಮೆ ಕೊಂಬುಗಳ ಅಕ್ರಮ ದಾಸ್ತಾನು ಪತ್ತೆಯಾಗಿರುವ ಘಟನೆ ನಗರದ ಮೇಟಗಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಅಕ್ರಮ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋದಾಮು ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಂ ಎಂಬಾತನಿಗೆ ಸೇರಿದ ಗೋದಾಮಿನ ಮೇಲೆ ದಾಳಿ ನಡೆಸಿದ ವೇಳೆ ಹಸು ಮತ್ತು ಎಮ್ಮೆಗಳ ಕೊಂಬುಗಳ ರಾಶಿ ಪತ್ತೆಯಾಗಿದೆ. ಕೆಲವು ತಿಂಗಳ ಹಿಂದೆ ಇದೇ ಗೋದಾಮಿನ ಮೇಲೆ ನಗರ ಪಾಲಿಕೆ, ಆರೋಗ್ಯ ಅಧಿಕಾರಿಗಳು […]

ಮೈಸೂರು: ಗೋದಾಮಿನಲ್ಲಿ ಹಸು ಮತ್ತು ಎಮ್ಮೆ ಕೊಂಬುಗಳ ಅಕ್ರಮ ದಾಸ್ತಾನು ಪತ್ತೆಯಾಗಿರುವ ಘಟನೆ ನಗರದ ಮೇಟಗಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಅಕ್ರಮ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಗೋದಾಮು ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಂ ಎಂಬಾತನಿಗೆ ಸೇರಿದ ಗೋದಾಮಿನ ಮೇಲೆ ದಾಳಿ ನಡೆಸಿದ ವೇಳೆ ಹಸು ಮತ್ತು ಎಮ್ಮೆಗಳ ಕೊಂಬುಗಳ ರಾಶಿ ಪತ್ತೆಯಾಗಿದೆ. ಕೆಲವು ತಿಂಗಳ ಹಿಂದೆ ಇದೇ ಗೋದಾಮಿನ ಮೇಲೆ ನಗರ ಪಾಲಿಕೆ, ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದರು. ಸದ್ಯ, ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




