ಕೇವಲ 58 ನಿಮಿಷದಲ್ಲಿ 46 ವಿಧದ ಭಕ್ಷ್ಯಗಳ ತಯಾರಿಸಿ, ವಿಶ್ವ ದಾಖಲೆ ಸೃಷ್ಟಿಸಿದ ತಮಿಳುನಾಡಿನ ಬಾಲಕಿ!
58 ನಿಮಿಷಗಳಲ್ಲಿ 46 ವಿಧದ ಅಡುಗೆಯನ್ನು ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ತಮಿಳುನಾಡಿನ ಯುವತಿ ಲಕ್ಷ್ಮಿ
ಚೆನ್ನೈ: ತಮಿಳುನಾಡಿನ ಎಸ್.ಎನ್. ಲಕ್ಷ್ಮಿ ಸಾಯಿ ಶ್ರೀ ಎಂಬ ಬಾಲಕಿ 58 ನಿಮಿಷದಲ್ಲಿ 46 ವಿಧದ ಅಡುಗೆಯನ್ನು ಮಾಡಿ ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ(UNICO) ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
‘ನಾನು ಅಡುಗೆ ಕಲಿತಿದ್ದು ನನ್ನ ಅಮ್ಮನಿಂದ. ಅಡುಗೆಯ ಬಗ್ಗೆ ಆಸಕ್ತಿ ಹುಟ್ಟಲು ಕಾರಣರಾದದ್ದು ನನ್ನ ಅಮ್ಮ. ಈ ಸಾಧನೆಯಿಂದ ನನಗೆ ತುಂಬಾ ಖುಷಿಯಿದೆ ’ ಎಂದು ಬಾಲಕಿ ಲಕ್ಷ್ಮಿ ಹೇಳಿದ್ದಾಳೆ.
‘ಲಕ್ಷ್ಮಿ ಲಾಕ್ಡೌನ್ ಸಮಯದಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದಳು. ನಾನು ತಮಿಳುನಾಡಿದ ವಿವಿಧ ಅಡುಗೆಗಳನ್ನು ಮಾಡುತ್ತಿದ್ದೆ. ಲಾಕ್ಡೌನ್ ಸಮಯವಾದ್ದರಿಂದ ಅಡುಗೆ ಮನೆಯಲ್ಲಿ ನನ್ನೊಡನೆ ಮಗಳು ಲಕ್ಷ್ಮಿ ಕೈ ಜೋಡಿಸುತ್ತಿದ್ದಳು. ನಾನು ನನ್ನ ಪತಿಯೊಡನೆ ಮಗಳ ಇಷ್ಟಗಳನ್ನು ಹಂಚಿಕೊಳ್ಳುತ್ತಿದ್ದೆ. ಈ ಸ್ಪರ್ಧೆಗೆ ಭಾಗವಹಿಸಲು ನನ್ನ ಪತಿ ಸಲಹೆ ನೀಡಿದರು’ ಎಂದು ಲಕ್ಷ್ಮಿ ತಾಯಿ ಎನ್. ಕಲೈಮಗಳ್ ಹೇಳಿದ್ದಾರೆ.
ಲಕ್ಷ್ಮಿ ಕೆಲಸದಲ್ಲಿ ನಿಪುಣಳು. ಅವಳ ತಂದೆ ವಿಶ್ವ ದಾಖಲೆಗೆ ಸ್ಪರ್ಧಿಸಲು ಸಲಹೆ ನೀಡಿದರು. ಏಕೆಂದರೆ, ಕೇರಳದ 10 ವರ್ಷದ ಕುವರಿ ಸಾನ್ವಿ ಎಂಬುವವಳು 30 ವಿಧದ ಅಡುಗೆಗಳನ್ನು ಮಾಡಿ ವಿಶ್ವ ದಾಖಲೆ ಪಡೆದಿದ್ದಳು. ಇವಳನ್ನು ಮೀರಿಸುವ ಸ್ಪರ್ಧೆಯನ್ನು ನೀನು ದಾಖಲಿಸಬೇಕು ಎಂದು ಲಕ್ಷ್ಮಿಗೆ ಅವರ ತಂದೆ ಪ್ರೊತ್ಸಾಹಿಸಿದ್ದರು ಎಂದು ಹೇಳಿದ್ದಾರೆ.
Tamil Nadu: A girl entered UNICO Book Of World Records by cooking 46 dishes in 58 minutes in Chennai yesterday. SN Lakshmi Sai Sri said, "I learnt cooking from my mother. I am very happy". pic.twitter.com/AmZ60HWvYX
— ANI (@ANI) December 15, 2020
Published On - 2:54 pm, Wed, 16 December 20