ಸದ್ಯಕ್ಕಿಲ್ಲ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್

|

Updated on: Dec 18, 2019 | 5:16 PM

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಸದ್ಯಕ್ಕಿಲ್ಲ. ಶಾಸಕರಾಗಿ ಮುನಿರತ್ನ ಆಯ್ಕೆಯಾಗಿರುವುದನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಅರ್ಜಿ ವಿಚಾರಣೆಗೆ ಆತುರ ಸಾಧ್ಯವಿಲ್ಲವೆಂದು ಫೆಬ್ರವರಿ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ. ಮುನಿರತ್ನ ವಿರುದ್ಧ ಚುನಾವಣಾ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ರು. ಮುನಿರತ್ನ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ಶಾಸಕರೆಂದು ಘೋಷಿಸಿ ಎಂದು ಕೋರಿಕೆ ಸಲ್ಲಿಸಿದ್ದಾರೆ. ಈ ಕೋರಿಕೆ ಇರುವುದರಿಂದ ಉಪಚುನಾವಣೆಗೆ ಅಡ್ಡಿಯಾಗಿದೆ. ಕೋರಿಕೆಗೆ ಪೂರಕ ದಾಖಲೆಗಳಿಲ್ಲವೆಂದು ಮುನಿರತ್ನ […]

ಸದ್ಯಕ್ಕಿಲ್ಲ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್
Follow us on

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಸದ್ಯಕ್ಕಿಲ್ಲ. ಶಾಸಕರಾಗಿ ಮುನಿರತ್ನ ಆಯ್ಕೆಯಾಗಿರುವುದನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಅರ್ಜಿ ವಿಚಾರಣೆಗೆ ಆತುರ ಸಾಧ್ಯವಿಲ್ಲವೆಂದು ಫೆಬ್ರವರಿ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ.

ಮುನಿರತ್ನ ವಿರುದ್ಧ ಚುನಾವಣಾ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ರು. ಮುನಿರತ್ನ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ಶಾಸಕರೆಂದು ಘೋಷಿಸಿ ಎಂದು ಕೋರಿಕೆ ಸಲ್ಲಿಸಿದ್ದಾರೆ. ಈ ಕೋರಿಕೆ ಇರುವುದರಿಂದ ಉಪಚುನಾವಣೆಗೆ ಅಡ್ಡಿಯಾಗಿದೆ. ಕೋರಿಕೆಗೆ ಪೂರಕ ದಾಖಲೆಗಳಿಲ್ಲವೆಂದು ಮುನಿರತ್ನ ಪರ ವಕೀಲರು ವಾದಿಸಿದ್ದರು. ಹೀಗಾಗಿ ಲಿಖಿತ ವಾದ ಸಲ್ಲಿಸುವಂತೆ ಮುನಿರಾಜುಗೌಡ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.