AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ಸೋ ಸಹೋದರರ ದಿ ಗ್ರೇ ಮ್ಯಾನ್​ನಲ್ಲಿ ಧನುಷ್ ನಟನೆ, ಜನವರಿಯಿಂದ ಶೂಟಿಂಗ್ ಆರಂಭ

ಸೌತ್ ಸಿನಿ ದುನಿಯಾದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಸೂಪರ್ ಸ್ಟಾರ್ ಆದ್ರೂ, ಕೋಟ್ಯಾನು ಕೋಟಿ ಅಭಿಮಾನಿಗಳನ್ನ ಸಂಪಾದಿಸಿದ್ರೂ. ಎಷ್ಟೋ ನಟರು ಹಾಲಿವುಡ್ ಸಿನಿಮಾದಲ್ಲಿ ನಟಿಸೋ ಕನಸು ಯಾವಾಗ ಈಡೇರುತ್ತೆ ಅಂತ ಕಾಯ್ತಿರ್ತಾರೆ. ಅದ್ರೀಗ ಕಾಲಿವುಡ್ ಸ್ಟಾರ್ ಧನುಷ್‌ಗೆ ಅಂತಹ ಅವಕಾಶ ಸಿಕ್ಕಿದೆ ಹಾಲಿವುಡ್ ನಲ್ಲಿ ದಿ ಗ್ರೇ ಮ್ಯಾನ್ ಆಗಿ ಕಮಾಲ್ ಮಾಡೋ ಅವಕಾಶ ಸಿಕ್ಕಿದೆ. ಹಾಗಾದ್ರೆ ಧನುಷ್ ನಟಿಸ್ತಿರೋ ಸಿನಿಮಾ ಸ್ಪೆಷಾಲಿಟಿ ಏನು? ಅದ್ಹೇಗೆ ಹಾಲಿವುಡ್ ಸಿನಿಮಾದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರಾ ಎಂಬುದರ ಮಾಹಿತಿ ಇಲ್ಲಿದೆ ಓದಿ.

ರಸ್ಸೋ ಸಹೋದರರ ದಿ ಗ್ರೇ ಮ್ಯಾನ್​ನಲ್ಲಿ ಧನುಷ್ ನಟನೆ, ಜನವರಿಯಿಂದ ಶೂಟಿಂಗ್ ಆರಂಭ
ಆಯೇಷಾ ಬಾನು
|

Updated on: Dec 19, 2020 | 8:23 AM

Share

ಸೌತ್ ಸಿನಿದುನಿಯಾದಲ್ಲಿ ತಮ್ಮದೇ ಆದ ಚಾಪು ಮೂಡಿಸಿರೋ ನಟ ಅಂದ್ರೆ ಧನುಷ್. ಕಾಲಿವುಡ್​ನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರೋ ಧನುಷ್, ತಮ್ಮ ವಿಭಿನ್ನ ಶೈಲಿಯ ಸಿನಿಮಾಗಳಿಂದ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಕಮಾಲ್ ಮಾಡಿದ್ದಾರೆ.

ಸದ್ಯ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ತಮ್ಮ ಸಿನಿ ಕರಿಯರ್‌ನಲ್ಲಿ ಅಚ್ಚರಿಯ ಅವಕಾಶವೊಂದನ್ನ ಗಿಟ್ಟಿಸಿಕೊಂಡು ಎಲ್ಲರೂ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. ಅಂದಹಾಗೆ ಧನುಷ್ ಹಾಗೂ ಅವರ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗೋಕೆ ಕಾರಣ ಸದ್ಯ ಹಾಲಿವುಡ್‌ನ ದಿ ಗ್ರೇ ಮ್ಯಾನ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿರೋದು.

ಧನುಷ್ ಗ್ರೇ ಮ್ಯಾನ್ ಆಗೋಕೆ ಅವಕಾಶ: ದೊಡ್ಡ ದೊಡ್ಡ ಸ್ಟಾರ್​ಗಳ ಜೊತೆ ಸ್ಕ್ರೀನ್ ಶೇರ್ ಮಾಡೋ ಚಾನ್ಸ್ ಪಡೆದಿದ್ದಾರೆ ಧನುಷ್. ವಿಶೇಷ ಅಂದ್ರೆ ಅವೆಂಜರ್ಸ್ ಎಂಡ್ ಗೇಮ್. ಅವೆಂಜರ್ಸ್ ಇನ್ ಫಿನಿಟಿ ವಾರ್, ಕ್ಯಾಪ್ಟನ್ ಅಮೇರಿಕಾ, ವಿಂಟರ್ ಸೋಲ್ಜರ್ ಸೇರಿದಂತೆ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರೋ ಜೋ ರಸ್ಸೋ ಹಾಗು ಆಂಟನಿ ರಸ್ಸೋ ಸಹೋದರರು ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ಧನುಷ್ ಗ್ರೇ ಮ್ಯಾನ್ ಆಗೋಕೆ ಅವಕಾಶ ಸಿಕ್ಕಿದೆ.

ಕ್ಯಾಪ್ಟನ್ ಅಮೆರಿಕಾ ಸಿನಿಮಾದಲ್ಲಿ ನಟಿಸಿದ್ದ ಕ್ರಿಸ್ ಇವಾನ್ಸ್ ಹಾಗು ಲಾಲಾ ಲ್ಯಾಂಡ್ ಸಿನಿಮಾದಲ್ಲಿ ನಟಿಸಿದ್ದ ರ್ಯಾನ್ ಗೋಸ್ಲಿಂಗ್ ಕೂಡ ದಿ ಗ್ರೇ ಮ್ಯಾನ್ ಸಿನಿಮಾಲ್ಲಿ ನಟಿಸಲಿದ್ದಾರೆ. ಹೀಗಾಗಿ ಸದ್ಯ ಇಬ್ಬರು ಸ್ಟಾರ್​ಗಳ ಜೊತೆ ಧನುಷ್ ಕೂಡ ನಟಿಸ್ತಿರೋದು ಸಿನಿಮಾ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಾಗುವಂತೆ ಮಾಡಿದೆ.

ಮೂಲಗಳ ಪ್ರಕಾರ ರಸ್ಸೋ ಸಹೋದರರು ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ಧನುಷ್ ನಟಿಸೋದು ಪಕ್ಕಾ ಆಗಿದ್ದು ಜನವರಿಯಿಂದ ಶೂಟಿಂಗ್ ಆರಂಭ ಆಗಲಿದೆ ಅನ್ನೋ ಮಾಹಿತಿ ಇದೆ. ಹಾಗಾದ್ರೆ ಈ ಹಿಂದೆ ದಿ ಎಕ್ಟ್ರಾರ್ಡಿನರಿ ಜರ್ನಿ ಆಫ್ ಫಕೀರ್ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದ ಧನುಷ್ ಈಗ ಮತ್ತೆ ಹಾಲಿವುಡ್ ನಲ್ಲಿ ಹೇಗೆ ಮೋಡಿ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ರೌಡಿ ಬೇಬಿ ಸಾಂಗ್​ಗೆ ಸಖತ್ ರೆಸ್ಪಾನ್ಸ್, ಸಕ್ಸಸ್ ಪೋಸ್ಟರ್ ನೋಡಿ ಸಾಯಿಪಲ್ಲವಿ ಫ್ಯಾನ್ಸ್ ಗರಂ!

Follow Us
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!