‘ದರ್ಶನ್ ಓರ್ವ ರೌಡಿ, 10 ವರ್ಷದ ಹಿಂದೆಯೇ ಆ ಮುಖ ನೋಡಿದ್ದೇವೆ’; ಹೊರಬಿತ್ತು ಶಾಕಿಂಗ್ ಹೇಳಿಕೆ

Edited By:

Updated on: Jun 13, 2024 | 9:01 AM

ಹತ್ತು ವರ್ಷಗಳ ಹಿಂದಿನ ಕರಾಳ ಘಟನೆಯನ್ನು ಟಿವಿ9 ಕನ್ನಡದ ಎದುರು ಸಂತ್ರಸ್ತ ಕುಟುಂಬದವರು ರಿವೀಲ್ ಮಾಡಿದ್ದಾರೆ. ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ವಿಕೃತಿ ಮೆರೆಯಲಾಗಿದೆ. ನಟ ದರ್ಶನ್ ಹೀರೋ ಅಲ್ಲ ವಿಲನ್ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಸದ್ಯ ಈ ಪ್ರಕರಣದ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಅವರ ಮತ್ತೊಂದು ಪ್ರಕರಣ ಹೊರಬಿದ್ದಿದೆ. ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಕಥೆ ಇದು. ಮಹೇಶ್ ಎಂಬುವವರ ಮೇಲೆ ದರ್ಶನ್​ಫಾರ್ಮ್​ಹೌಸ್​ನ ಎತ್ತು ದಾಳಿ ಮಾಡಿತ್ತು. ಆ ಬಳಿಕ ಮಹೇಶ್ ಹಾಸಿಗೆ ಹಿಡಿದರು. ದರ್ಶನ್ ಕಡೆಯಿಂದ ಪರಿಹಾರವೂ ಸಿಕ್ಕಿಲ್ಲ. ಈ ಬಗ್ಗೆ ಫಾರ್ಮ್​ಹೌಸ್​ನ ಮಾಜಿ ನೌಕರ, ಮಹೇಶ್ ಸಂಬಂಧಿ ಮಾತನಾಡಿದ್ದಾರೆ. ‘ಮಹೇಶ್​ಗೆ ಜೀವ ಒಂದಿದೆ ಅಷ್ಟೇ. ಮಲಗಿದ್ದ ಜಾಗದಲ್ಲೇ ಇದ್ದಾನೆ. ತಿಂಗಳಿಗೆ 2-3 ಸಾವಿರ ರೂಪಾಯಿ ಖರ್ಚಾಗುತ್ತಿದೆ. ದರ್ಶನ್ ಯಾವುದೇ ಸಹಾಯ ಮಾಡಿಲ್ಲ. ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾರೆ. ಅವರು ಓರ್ವ ರೌಡಿ, 10 ವರ್ಷಗಳ ಹಿಂದೆಯೇ ಅವರ ಮುಖ ನೋಡಿದ್ದೇವೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More